Karnataka news paper

ಹೆಣ್ಣು ಕೊಟ್ಟ ಮಾವನಿಂದಲೇ ಮತಾಂತರದ ಆರೋಪ; ಹೊಸದುರ್ಗದಲ್ಲಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಅಳಿಯ


ಹೊಸದುರ್ಗ: ಹೆಣ್ಣು ಕೊಟ್ಟ ಮಾವನಿಂದಲೇ ಮತಾಂತರವಾಗಿ ಅಳಿಯನೇ ಮಾವನ ವಿರುದ್ದ ಪೊಲೀಸ್‌ ಠಾಣೆಗೆ ದೂರು ಕೊಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಈ ಘಟನೆಯ ಹಿಂದೆ ಕೌಟುಂಬಿಕ ಜಗಳವೂ ತಳಕು ಹಾಕಿಕೊಂಡಿದ್ದು, ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕು, ಹೊಸಪೇಟೆ ನಗರದ, ಅರವಿಂದನಗರ ಪಕ್ಕದ ಬುಡ್ಗಜಂಗಮ ಕಾಲೋನಿ ವಾಸಿಯಾದ ಮಾರಪ್ಪ ಎಂಬುವವರು ಹೊಸದುರ್ಗ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಪಟ್ಟಣದ ನಂಜಯ್ಯನಕೆರೆ ಬಡಾವಣೆಯ ವಸಂತ್‌ ಕುಮಾರ, ರಾಮಚಂದ್ರಪ್ಪ, ಸುಧಾಕರ, ಮಂಜುನಾಥ್‌, ಸುಂಕಪ್ಪ ಎಂಬುವವರ ವಿರುದ್ದ ದೂರು ದಾಖಲಾಗಿದೆ.

ಘಟನೆ ವಿವರ: ಹೊಸದುರ್ಗದ ನಿವಾಸಿಗಳಾದ ವಸಂತಕುಮಾರ್‌ ಎಂಬುವವರು ತನ್ನ ಹೆಂಡತಿ ತಮ್ಮನಾದ ಮಾರಪ್ಪ ಎಂಬುವರಿಗೆ ದೀಕ್ಷಾ ಸ್ಥಾನ ಎಂಬ ಹೆಸರಿನಲ್ಲಿ ನೀರಿನಲ್ಲಿ ಮುಳುಗಿಸಿ ‘ಇಂದಿನಿಂದ ನೀನು ಕ್ರೈಸ್ತ ಧರ್ಮಕ್ಕೆ ಸೇರಿದವನು’ ಎಂದು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಸಿ ತನ್ನ ಮಗಳಾದ ಸರಳ ಎಂಬುವರನ್ನು ಕ್ರಿಶ್ಚಿಯನ್‌ ಧರ್ಮ ಪದ್ಧತಿಯಂತೆ 2020ರ ಜು.6 ರಂದು ಮದುವೆ ಮಾಡಿಕೊಟ್ಟಿದ್ದ. ಆದರೆ ಕ್ರಿಶ್ಚಿಯನ್‌ ಧರ್ಮದಲ್ಲಿ ಮುಂದುವರಿಯಲು ಸಾಧ್ಯವಾಗದ ಕಾರಣ ವಿವಾಹ ಆದಾಗಿನಿಂದಲೂ ಮಾರಪ್ಪ ಹಿಂದೂ ದೇವರನ್ನು ಪೂಜೆ ಮಾಡುತ್ತಾ ವೈವಾಹಿಕ ಜೀವನ ನಡೆಸುತ್ತಿದ್ದ. ಆದರೆ 2021ರ ಡಿ .2 ರಂದು ಪತ್ನಿ ಸರಳಾ ಹೆರಿಗೆಗೆ ತವರು ಮನೆಯಾದ ಹೊಸದುರ್ಗಕ್ಕೆ ಬರುತ್ತಾಳೆ. ಬಂದ ಒಂದು ವಾರದಲ್ಲಿ ಗಂಡು ಮಗು ಜನಿಸುತ್ತದೆ. ವಿಚಾರವನ್ನು ಬೇರೆಯವರ ಮೂಲಕ ತಿಳಿದುಕೊಂಡು ತನ್ನ ಅಣ್ಣಂದಿರ ಜೊತೆ ಹೆಂಡತಿಯನ್ನು ನೋಡಲು ಹೊಸದುರ್ಗದ ತನ್ನ ಮಾವ ವಸಂತ್‌ ಕುಮಾರ್‌ ಮನೆಗೆ ಜ.18ರಂದು 2022 ರಂದು ಬಂದಾಗ ಮನೆಯ ಒಳಗೆ ಬಿಟ್ಟುಕೊಳ್ಳದೆ ಅವಾಚ್ಯ ಶಬ್ದಗಳಿಂದ ಬೈದು ‘ನೀವೆಲ್ಲ ಸೈತಾನ್‌ಗಳು. ನೀವು ಹಿಂದೂ ದೇವರನ್ನು ಪೂಜೆ ಮಾಡುವವರು. ನಿಮ್ಮನ್ನು ಮನೆಯ ಒಳಗೆ ಬಿಟ್ಟುಕೊಳ್ಳುವುದಿಲ್ಲ. ನೀವು ನಿಮ್ಮ ದೇವರನ್ನು ಹಾಗೂ ನಿಮ್ಮ ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್‌ ಧರ್ಮವನ್ನು ಅನುಸರಿಸಿದರೆ ಮಾತ್ರ ಹೆಂಡತಿ ಮಗುವನ್ನು ನೋಡಬಹುದು. ನಂತರ ನಿನ್ನೊಂದಿಗೆ ಕಳಿಸುತ್ತೇವೆ’ ಎಂದು ದೌರ್ಜನ್ಯ ಮಾಡಿ ಬಲವಂತದ ಮತಾಂತರಕ್ಕೆ ಒತ್ತಾಯ ಮಾಡಿದ್ದಾರೆ ಎಂದು ಮಾರಪ್ಪ ದೂರಿನಲ್ಲಿ ತಿಳಿಸಿದ್ದಾನೆ.
ತಮಿಳುನಾಡಿನಲ್ಲಿ ಬಲವಂತದ ಮತಾಂತರ ಆರೋಪ: ವಿದ್ಯಾರ್ಥಿನಿ ಆತ್ಮಹತ್ಯೆ
ಮತಾಂತರಗೊಳ್ಳಲು ಒಪ್ಪದ ಕಾರಣ ವಸಂತ್‌ ಕುಮಾರ್‌ ಸೇರಿದಂತೆ ನಾಲ್ವರು ಒಟ್ಟಾಗಿ ತನ್ನ ಸಹಿತ ಸಹೋದರರಿಗೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಗ ಅವರಿಗೆಲ್ಲ ಹೆದರಿ ವಾಪಸ್ಸು ಬೈಕಿನಲ್ಲಿ ಹೋಗುತ್ತಿರುವಾಗ ಹಿಂಬಾಲಿಸಿ ಪೋಟೋ, ವಿಡಿಯೋ ತೆಗೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆಯನ್ನು ಕೊಟ್ಟಿದ್ದಾರೆ ಎಂದು ದೂರಿರುವ ಮಾರಪ್ಪ, ನನ್ನ ಹೆಂಡತಿ ನಮ್ಮ ಮನೆಗೆ ಬರಬೇಕು ಹಾಗೂ ಬಲವಂತವಾಗಿ ಮತಾಂತರ ಮತ್ತು ನಾವು ನಂಬಿರುವ ದೇವರ ಪೋಟೋಗಳು ಹರಿದು ಹಾಕಿ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಇಂಥವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಮಾರಪ್ಪ ನೀಡಿರುವ ಬಲವಂತದ ಮತಾಂತರದ ಹಿಂದೆ ಕೌಟುಂಬಿಕ ಕಲಹದ ಕರಿನೆರಳು ಕಂಡು ಬರುತ್ತಿದೆ. ಹೆರಿಗೆಗೆಂದು ಬಂದಿದ್ದ ಮಗಳಿಗೆ ಹೆರಿಗೆ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಕ್ಕಾಗಿ ಅಳಿಯ ಮಾರಪ್ಪ ಹಾಗೂ ಆತನ ತಂದೆ, ವಸಂತಕುಮಾರ್‌ ಅವರಿಗೆ ಪೋನ್‌ ಮಾಡಿ ಗಲಾಟೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ವಸಂತಕುಮಾರ್‌ ತನ್ನ ಅಳಿಯ ಮಾರಪ್ಪ ಹಾಗೂ ಆತನ ಸಹೋದರರ ಮೇಲೆ ಮೂರು ದಿನಗಳ ಹಿಂದೆಯೇ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದರು.



Read more

[wpas_products keywords=”deal of the day sale today offer all”]