Karnataka news paper

ಐರಾಗೆ ಕನ್ನಡ ವರ್ಣಮಾಲೆ ಹೇಳಿಕೊಟ್ಟ ಯಶ್: ಸ್ಪೆಷಲ್​ ಕ್ಲಾಸ್​ ಎಂದ ರಾಧಿಕಾ ಪಂಡಿತ್


ಬೆಂಗಳೂರು: ನಟ ರಾಕಿಂಗ್ ಸ್ಟಾರ್‌ ಯಶ್‌ ಅವರು ಸಿನಿಮಾ ಚಿತ್ರೀಕರಣದಿಂದ ಕೊಂಚ ಬಿಡುವು ಪಡೆದಿದ್ದು, ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.

ಸದ್ಯ ವೀಕೆಂಡ್‌ ಮೂಡ್‌ನಲ್ಲಿರುವ ಯಶ್, ಮಗಳು ಐರಾಗೆ ಸ್ಪೆಷಲ್​ ಕ್ಲಾಸ್​ ಕೇಳಿಕೊಡುತ್ತಿರುವ ವಿಡಿಯೊವನ್ನು ಅವರ ಪತ್ನಿ ರಾಧಿಕಾ ಪಂಡಿತ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಖತ್‌ ವೈರಲ್‌ ಆಗಿದೆ.

ಯಶ್​ ಅವರು ಐರಾಳಿಗೆ ಕನ್ನಡ ವರ್ಣಮಾಲೆ ಹೇಳಿಕೊಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 4.24 ಲಕ್ಷ ಮಂದಿ ಇಷ್ಟಪಟ್ಟಿದ್ದಾರೆ. ವಿಡಿಯೊ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ, ಐರಾ ಕ್ಯೂಟ್‌ ಆಗಿದ್ದಾಳೆ, ಐರಾಳನ್ನು ವಿದ್ಯಾರ್ಥಿನಿಯಾಗಿ ನೋಡಲು ಖುಷಿಯಾಗುತ್ತಿದೆ ಎಂದು ಬಗೆಬಗೆಯ ಕಾಮೆಂಟ್​ ಮಾಡಿದ್ದಾರೆ.

ಓದಿ… ‘ಶ್ರೀವಲ್ಲಿ’ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್: ಅಭಿಮಾನಿಗಳು ಫಿದಾ

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಯಶ್‌– ರಾಧಿಕಾ ದಂಪತಿ ತಮ್ಮ ಅಭಿಮಾನಿಗಳಿಗಾಗಿ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಯಶ್‌ ಅಭಿನಯ ಮತ್ತು ಪ್ರಶಾಂತ್ ನೀಲ್‌ ನಿರ್ದೇಶನದ ಬಹುನಿರೀಕ್ಷಿತ ‘ಕೆಜಿಎಫ್‌: ಚಾಪ್ಟರ್‌ –2’ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

 





Read More…Source link

[wpas_products keywords=”deal of the day party wear for men wedding shirt”]