Karnataka news paper

ಬಾಡಿಗೆ ತಾಯ್ತನದಿಂದ ಬಡ ಮಹಿಳೆಯರ ಮೇಲೆ ಶೋಷಣೆ: ತಸ್ಲೀಮಾ ಆಕ್ರೋಶ


ನವದೆಹಲಿ: ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವುದರ ವಿರುದ್ಧ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್‌ ಹೇಳಿಕೆ ನೀಡಿರುವುದು ವಿವಾದದ ಕಿಡಿ ಹೊತ್ತಿಸಿದೆ.

ನಟಿ ಪ್ರಿಯಾಂಕಾ ಜೋಪ್ರಾ ಹಾಗೂ ಅವರ ಪತಿ ಗಾಯಕ ನಿಕ್ ಜೊನಾಸ್ ಅವರು ಬಾಡಿಗೆ ತಾಯಿಯ ಮೂಲಕ ಮಗು ಪಡೆದಿದ್ದಾರೆ.

ಇದನ್ನೂ ಓದಿ: 

ಇದೇ ಸಂದರ್ಭದಲ್ಲಿ ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ತಸ್ಲೀಮಾ, ‘ಬಾಡಿಗೆ ತಾಯ್ತನದ ಮೂಲಕ ತಮ್ಮ ರೆಡಿಮೇಡ್ ಮಕ್ಕಳನ್ನು ಪಡೆದಾಗ ಅಂತಹ ತಾಯಂದಿರಿಗೆ ಹೇಗನಿಸುತ್ತದೆ? ಮಗುವಿಗೆ ಜನ್ಮ ನೀಡುವ ತಾಯಂದಿರಂತೆಯೇ ತಾಯ್ತನದ ಅದೇ ಭಾವನೆಗಳನ್ನು ಅನುಭವಿಸುತ್ತಾಳೆಯೇ ?’ ಎಂದು ಪ್ರಶ್ನಿಸಿದ್ದಾರೆ.

 

 

 

‘ಬಡ ಮಹಿಳೆಯರು ಇರುವುದರಿಂದ ಬಾಡಿಗೆ ತಾಯ್ತನ ಸಾಧ್ಯವಾಗಿದೆ. ಶ್ರೀಮಂತರು ಯಾವಾಗಲೂ ತಮ್ಮ ಆಸಕ್ತಿಗಾಗಿ ಸಮಾಜದಲ್ಲಿ ಬಡತನದ ಅಸ್ತಿತ್ವವನ್ನು ಬಯಸುತ್ತಾರೆ. ನಿಮಗೆ ಮಗುವನ್ನು ಬೆಳೆಸುವುದು ಕಷ್ಟವಾಗಿದ್ದರೆ, ಮನೆಯಿಲ್ಲದ ಮಗುವನ್ನು ದತ್ತು ಪಡೆದುಕೊಳ್ಳಿ. ಮಕ್ಕಳು ನಿಮ್ಮ ಗುಣಲಕ್ಷಣಗಳನ್ನು ಅನುವಂಶಿಕವಾಗಿ ಪಡೆಯಬೇಕು. ಇದು ಕೇವಲ ಸ್ವಾರ್ಥ ತನ್ಮೆಚ್ಚುಗೆಯ ಅಹಂ ಆಗಿದೆ’ ಎಂದು ದೂರಿದ್ದಾರೆ.

 

 

 

 

‘ಶ್ರೀಮಂತ ಮಹಿಳೆಯರು ಬಾಡಿಗೆ ತಾಯಿಯಾಗುವವರೆಗೆ ನಾನು ಬಾಡಿಗೆ ತಾಯ್ತನವನ್ನು ಒಪ್ಪಲಾರೆ. ಪುರುಷರು ಪ್ರೀತಿಯಿಂದ ಬುರ್ಖಾವನ್ನು ಧರಿಸುವವರೆಗೂ ನಾನು ಅದನ್ನು ಒಪ್ಪುವುದಿಲ್ಲ. ಪುರುಷ ವೇಶ್ಯಾವಾಟಿಕೆ ಸೃಷ್ಟಿಯಾಗುವವರೆಗೂ ನಾನದನ್ನು ಒಪ್ಪುವುದಿಲ್ಲ ಮತ್ತು ಮಹಿಳಾ ಗ್ರಾಹಕರಿಗಾಗಿ ಪುರುಷರು ಕಾಯುತ್ತಿರಬೇಕು. ಇಲ್ಲವಾದ್ದಲ್ಲಿ ಬಾಡಿಗೆ ತಾಯ್ತನ, ಬುರ್ಖಾ, ವೇಶ್ಯಾವಾಟಿಕೆ ಕೇವಲ ಮಹಿಳೆಯರ ಹಾಗೂ ಬಡವರ ಮೇಲಿನ ಶೋಷಣೆ ಮಾತ್ರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 



Read more from source

[wpas_products keywords=”deals of the day offer today electronic”]