Karnataka news paper

ಸರಗೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡ; ಗುಪ್ತಾಂಗಕ್ಕೆ ಹೊಡೆದು ಕೊಲೆಗೈದ ಪತ್ನಿ!


ಚಾಮರಾಜ ನಗರ:ಸರಗೂರು ತಾಲೂಕಿನ ಮುಳ್ಳೂರಿನಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಬೇರೆ ಯುವಕನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಕ್ಕೆ ಆಕೆ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ. ಗ್ರಾಮದ ಬಸವರಾಜು (41) ಕೊಲೆಯಾದ ವ್ಯಕ್ತಿ. ಬಸವರಾಜು ಅವರ ಪತ್ನಿ ನೇತ್ರಾವತಿ ಕೊಲೆ ಮಾಡಿರುವ ಆರೋಪಿಯಾಗಿದ್ದು, ಪೊಲೀಸರು ಈಕೆಯನ್ನು ಬಂಧಿಸಿ ಶನಿವಾರ ನ್ಯಾಯಾಲಯ ಮುಂದೆ ಹಾಜರಿಪಡಿಸಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆಯ ವಿವರ: ಮುಳ್ಳೂರಿನ ಬಸವರಾಜು ಹಾಗೂ ಚಾಮರಾಜ ನಗರ ಜಿಲ್ಲೆಯ ಮಾದನಹಳ್ಳಿಯ ನೇತ್ರಾವತಿ ವಿವಾಹ ಐದಾರು ವರ್ಷಗಳ ಹಿಂದೆ ನಡೆದಿತ್ತು. ಇವರಿಗೆ ಐದು ವರ್ಷದ ಮಗುವಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಬಸವರಾಜು ರಾತ್ರಿ ವೇಳೆ ಮನೆಗೆ ತಡವಾಗಿ ಬರುತ್ತಿದ್ದರು ಎನ್ನಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ನೇತ್ರಾವತಿ ಪತಿಗೆ ಗೊತ್ತಿಲ್ಲದಂತೆ ಬೇರೆ ಯುವಕನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಳು. ಈ ಬಗ್ಗೆ ಅನುಮಾನಗೊಂಡ ಪತಿ ಬಸವರಾಜು ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ಶುಕ್ರವಾರ ರಾತ್ರಿ ತಡವಾಗಿ ಬಂದ ಪತಿಯೊಂದಿಗೆ ಜಗಳವಾಡಿ ಗುಪ್ತಾಂಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲೆಕ್ಷನ್‌ನಲ್ಲಿ ಬಿಜೆಪಿ ಪರ ಮಹಿಳಾ ಪಿಎಸ್‌ಐ ಸಾಥ್‌; ಬಿಜೆಪಿ ಅಭ್ಯರ್ಥಿ ಪುತ್ರನೊಂದಿಗಿನ ಫೋನ್‌ ಸಂಭಾಷಣೆ ವೈರಲ್
ಸ್ಥಳಕ್ಕೆ ಸರಗೂರು ಪೊಲೀಸ್‌ ಠಾಣೆ ವೃತ್ತ ನಿರೀಕ್ಷಕ ಎನ್‌.ಆನಂದ್‌, ಪಿಎಸ್‌ಐ ಶ್ರವಣ್‌ದಾಸ್‌ ರೆಡ್ಡಿ ಭೇಟಿ ನೀಡಿದ್ದು, ಎಚ್‌.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಬಸವರಾಜು ಅಣ್ಣ ಗುರುಸ್ವಾಮಿ ಸರಗೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.



Read more

[wpas_products keywords=”deal of the day sale today offer all”]