ಹೈಲೈಟ್ಸ್:
- ಸಂಬಂಧಿಕರಿಗೆ ಉಡುಗೊರೆ ನೀಡಲು ಬೈಕ್ ಕಳವು
- ಬೈಕ್ ಕಳವು ಮಾಡುತ್ತಿದ್ದ ಖದೀಮನ ಬಂಧನ
- ಆರೋಪಿಯಿಂದ ಏಳು ಬೈಕ್ ವಶಕ್ಕೆ ಪಡೆದ ಪೊಲೀಸರು
ರಾಜಾಜಿನಗರದ ಭರತ್ (32) ಬಂಧಿತ. ಆರೋಪಿಯಿಂದ ಏಳು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿ ಭರತ್ ಬಹಳ ಬುದ್ಧಿವಂತಿಕೆಯಿಂದ ಬೈಕ್ ಕಳವು ಮಾಡುತ್ತಿದ್ದ. ನಗರದ ವಿವಿಧೆಡೆ ಓಡಾಡಿ ಮನೆ ಮುಂದಿರುವ ವಾಹನಗಳನ್ನು ಗುರುತಿಸುತ್ತಿದ್ದ. ವಾಹನಗಳ ನಂಬರ್ ಅನ್ನು ತನ್ನ ಮೊಬೈಲ್‌ನಲ್ಲಿ ಡೌನ್‌ಮಾಡಿಕೊಂಡಿದ್ದ ಬಿಟಿಪಿ ಆ್ಯಪ್ ಮೂಲಕ ಪರಿಶೀಲಿಸುತ್ತಿದ್ದ. ವಾಹನದ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ದಂಡ ಬಾಕಿ ಇದ್ದರೆ ಅಂತಹ ವಾಹನ ಕದಿಯುತ್ತಿರಲಿಲ್ಲ.
ಯಾವುದೇ ಪ್ರಕರಣಗಳಿಲ್ಲದ ವಾಹನಗಳನ್ನು ಕದಿಯುತ್ತಿದ್ದ. ಕದ್ದ ನಂತರ ಬೈಕ್ ಮಾರಿದರೆ ಕಳ್ಳತನ ಮಾಡಿರುವುದು ತಿಳಿಯಬಹುದೆಂದು ಸಂಬಂಧಿಕರಿಗೆ ಉಚಿತವಾಗಿ ನೀಡುತ್ತಿದ್ದ. ಆರೋಪಿ ವಿರುದ್ಧ ರಾಜಾಜಿನಗರ, ಬಸವೇಶ್ವರನಗರ, ಕಲಾಸಿಪಾಳ್ಯ ಪೊಲೀಸ್ ಠಾಣೆ ಸೇರಿದಂತೆ ನಾನಾ ಠಾಣೆಗಳಲ್ಲಿಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.
ಬೈಕ್‌ನಲ್ಲಿ ಬರುತ್ತಿದ್ದ ಚನ್ನಪಟ್ಟಣದ ದಂಪತಿಯನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ದರೋಡೆಕೋರರು!
ಸಿಕ್ಕಿಬಿದ್ದಿದ್ದು ಹೇಗೆ?
ರಾಜಾಜಿನಗರದ ನಿವಾಸಿ ನರೇಶ್ ಜ.16ರಂದು ರಾತ್ರಿ 10 ಗಂಟೆಗೆ ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ತಮ್ಮ ದ್ವಿಚಕ್ರ ವಾಹನ ಇರಲಿಲ್ಲ. ಈ ಬಗ್ಗೆ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಆರೋಪಿ ಭರತ್ ಸಿಕ್ಕಿಬಿದ್ದಿದ್ದಾನೆ.
ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ 7 ಸ್ಕೂಟರ್ ಕದ್ದಿರುವ ಬಗ್ಗೆ ಮಾಹಿತಿ ನೀಡಿದ್ದ. ಭರತ್ ದೂರದ ಸಂಬಂಧಿ ಗುತ್ತಿಗೆದಾರರಾಗಿದ್ದು, ಈ ಹಿಂದೆ ಅವರ ಬಳಿ ಬಾರ್‌ಬೆಂಡಿಂಗ್ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ತೊರೆದು ಸ್ಕೂಟರ್ ಕಳ್ಳತನಕ್ಕೆ ಇಳಿದಿದ್ದ ಎನ್ನಲಾಗಿದೆ.
Read more
[wpas_products keywords=”deal of the day sale today offer all”]