Karnataka news paper

ಕೋವಿಡ್ ಪಾಸಿಟಿವ್ ದರ ಹೆಚ್ಚುತ್ತಿರುವುದರಿಂದ ಬೇರೆ ಜಿಲ್ಲೆಗಳ ಮೇಲೆ ಗಮನ ಅಗತ್ಯ: ಅಧಿಕಾರಿಗಳಿಗೆ ತಜ್ಞರ ಸೂಚನೆ


The New Indian Express

ಬೆಂಗಳೂರು: ಕೊರೋನಾ ಮೂರನೇ ಅಲೆ ಏರಿಕೆಯಾಗುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಕೂಡ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಅಧಿಕಾರಿಗಳು ತಮ್ಮ ಗಮನವನ್ನು ಬೇರೆ ಜಿಲ್ಲೆಗಳತ್ತ ಹರಿಸಬೇಕೆಂದು ಸೂಚನೆ ನೀಡಿದ್ದಾರೆ. ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಮ್ಮ ಕೆಲಸ ಕಾರ್ಯಗಳು ವೈಯಕ್ತಿಕ ಉದ್ದೇಶಗಳಿಗೆ ಸಂಚಾರ ನಡೆಸುವ ಕಾರಣ ಕೋವಿಡ್ ಮೂರನೇ ಅಲೆ ಬೇರೆ ಜಿಲ್ಲೆಗಳಲ್ಲಿ ಯಾವ ರೀತಿ ಏರಿಕೆಯಾಗುತ್ತಿದೆ ಎಂದು ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ.

ಈಗ ಮಾರುಕಟ್ಟೆ ಬಹುತೇಕ ತೆರೆದಿದೆ, ವೀಕೆಂಡ್ ಕರ್ಫ್ಯೂ ರದ್ದಾಗಿದೆ. ಹಾಗಾಗಿ ಇನ್ನಷ್ಟು ಗಮನ, ಜಾಗ್ರತೆ ವಹಿಸಬೇಕಿದೆ. 14 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವ್ ದರ ಶೇಕಡಾ 20ಕ್ಕಿಂತ ಹೆಚ್ಚಾಗಿದೆ. ಅದು ಆತಂಕಕಾರಿ ವಿಷಯ.

ರಾಜ್ಯದ ಕೋವಿಡ್ ವಾರ್ ರೂಮ್ ಅಂಕಿಅಂಶಗಳ ಪ್ರಕಾರ, ಉಡುಪಿ, ಕಲಬುರಗಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಹಾಸನ, ತುಮಕೂರು, ಶಿವಮೊಗ್ಗ, ಮಂಡ್ಯ ಮತ್ತು ಮೈಸೂರುಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಮೊನ್ನೆ ಜನವರಿ 20 ರಂದು ಬೆಂಗಳೂರು ನಗರದಲ್ಲಿ ಶೇ 23.6, ಮೈಸೂರಿನಲ್ಲಿ ಶೇ 34.45, ಮಂಡ್ಯದಲ್ಲಿ ಶೇ 33.23 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಶೇ 31.76 ಪಾಸಿಟಿವ್ ದರ ಇದ್ದಿತ್ತು. 

ಇದನ್ನೂ ಓದಿ: ರಾಜ್ಯದಲ್ಲಿ ಕೊರೋನಾಗೆ ಇಂದು 22 ಬಲಿ, ಬೆಂಗಳೂರಿನಲ್ಲಿ 29,068 ಸೇರಿ 48,049 ಮಂದಿಗೆ ಪಾಸಿಟಿವ್

ಜನವರಿ 19 ರಂದು ಪಾಸಿಟಿವ್ ದರ ಹೆಚ್ಚಾಗಿತ್ತು. ಮಂಡ್ಯದಲ್ಲಿ ಶೇಕಡಾ 40.54, ಮೈಸೂರಿನಲ್ಲಿ ಶೇಕಡಾ 33.87, ತುಮಕೂರಿನಲ್ಲಿ ಶೇಕಡಾ 33.04, ಬೆಂಗಳೂರು ನಗರದಲ್ಲಿ ಶೇಕಡಾ 25.44 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 27.03 ವರದಿಯಾಗಿತ್ತು.

ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ನಿರ್ಬಂಧಗಳನ್ನು ಸರ್ಕಾರ ವಿಧಿಸಲಾಗದ ಕಾರಣ, ಪ್ರತಿಯೊಂದು ಪ್ರಕರಣದ ಮೇಲೆ ನಿಕಟ ನಿಗಾ ಇಡುವುದು ಮತ್ತು ಕಂಟೈನ್‌ಮೆಂಟ್ ವಲಯಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಸರ್ಕಾರಿ ಅಧಿಕಾರಿಗಳು ಮತ್ತು ತಜ್ಞರು ಬೆಂಗಳೂರು ಮತ್ತು ರಾಜ್ಯದ ಗಡಿ ಜಿಲ್ಲೆಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದಾರೆ, ಆದರೆ ಪ್ರತಿ ಜಿಲ್ಲೆಯ ಪ್ರಕರಣಗಳ ಮೇಲೆ ನಿಗಾ ಇಡುವುದು ಮುಖ್ಯವಾಗಿದೆ, ಕೊರೋನಾ ಏರಿಳಿತ, ಹೆಚ್ಚಳ ವರದಿಯಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ಬೆಂಗಳೂರಿಗೆ ಹೋಲಿಸಿದರೆ ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಜಿಲ್ಲೆಗಳಿಂದ ಹೆಚ್ಚಿನ ಮಾದರಿಗಳನ್ನು ಸಂಗ್ರಹಿಸಬೇಕು ಎಂದು ತಜ್ಞರು ಸರ್ಕಾರಕ್ಕೆ ಸೂಚಿಸಿದ್ದಾರೆ, ಜಿನೋಮಿಕ್ ಸೀಕ್ವೆನ್ಸಿಂಗ್ ಮಾದರಿ ಸಂಗ್ರಹದ ಗಾತ್ರವನ್ನು ಹೆಚ್ಚಿಸಬೇಕು, ಕೊರೋನಾ ರೂಪಾಂತರಿ ಹೆಚ್ಚಿನ ಪ್ರದೇಶಗಳಿಗೆ ಹಬ್ಬಿರುವುದರಿಂದ ಜಿನೋಮಿಕ್ ಸೀಕ್ವೆನ್ಸಿಂಗ್ ಸಂಗ್ರಹದ ಮಾದರಿಯನ್ನು ಹೆಚ್ಚು ಸಂಗ್ರಹಿಸಲು ಹೆಚ್ಚಿನ ಕೇಂದ್ರಗಳು ಅತ್ಯಗತ್ಯ ಎನ್ನುತ್ತಾರೆ ತಜ್ಞರು. 



Read more

[wpas_products keywords=”deal of the day”]