Karnataka news paper

ದಾವಣಗೆರೆ: ಸ್ಕೂಟರ್ ಸವಾರನ ಜೀವ ಬದುಕಿಸಿದ ಹೆಲ್ಮೆಟ್!


The New Indian Express

ದಾವಣಗೆರೆ: ಹೆಲ್ಮೆಟ್ ಅಥವಾ ಶಿರಸ್ತ್ರಾಣ ಅನೇಕ ಸಲ ದ್ವಿಚಕ್ರ ವಾಹನ ಸವಾರರ ಪ್ರಾಣ ಉಳಿಸಿದ ಘಟನೆಗಳು ನಮ್ಮ ಮುಂದೆ ಬೇಕಾದಷ್ಟು ಸಲ ನಡೆದಿರುತ್ತವೆ. ಇಲ್ಲವೇ ಕೇಳಿರುತ್ತೇವೆ. 

ಅದಕ್ಕೇ ಸಂಚಾರ ಪೊಲೀಸ್ ಇಲಾಖೆ, ಸರ್ಕಾರ ಸಾರ್ವಜನಿಕರಲ್ಲಿ ಪದೇ ಪದೇ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಪ್ರಾಣ ರಕ್ಷಿಸಿ ಎಂದು ಮನವಿ ಮಾಡುತ್ತಲೇ ಇರುತ್ತವೆ. ಇತ್ತೀಚೆಗೆ ಹೆಲ್ಮೆಟ್ ಧರಿಸದವರಿಗೆ ದಂಡ ಕೂಡ ವಿಧಿಸಲಾಗುತ್ತದೆ.

ಆದರೂ ಕೆಲವರು ನಿರ್ಲಕ್ಷ್ಯ ಮಾಡಿ ಹೆಲ್ಮೆಟ್ ಧರಿಸದೆ ಗಾಡಿ ಚಲಾಯಿಸುತ್ತಾರೆ. ನಿನ್ನೆ ರಾತ್ರಿ ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ವ್ಯಕ್ತಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಹೆಲ್ಮೆಟ್ ಧರಿಸಿದ್ದರಿಂದ ಸ್ಕೂಟರ್ ಸವಾರನ ಜೀವ ಉಳಿದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.





Read more

[wpas_products keywords=”deal of the day”]