Karnataka news paper

ಜನವರಿ 23ರಂದು ತಮಿಳುನಾಡಿನಾದ್ಯಂತ ಸಂಪೂರ್ಣ ಲಾಕ್‌ಡೌನ್: ಸಿಎಂ ಸ್ಟಾಲಿನ್


Online Desk

ಚೆನ್ನೈ: ಕೋವಿಡ್-19 ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಜನವರಿ 23 ರಂದು(ಭಾನುವಾರ) ರಾಜ್ಯಾದ್ಯಾಂತ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಶುಕ್ರವಾರ ಘೋಷಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಂಕೆ ಸ್ಟಾಲಿನ್ ಅವರು ತಿಳಿಸಿದ್ದಾರೆ.

ಇದನ್ನು ಓದಿ: ಚೆನ್ನೈ: ಕಾನೂನು ವಿದ್ಯಾರ್ಥಿಗೆ ಥಳಿಸಿದ ಪ್ರಕರಣ ಸಂಬಂಧ ಇನ್ಸ್‌ಪೆಕ್ಟರ್ ಸೇರಿ 9 ಪೊಲೀಸ್ ಸಿಬ್ಬಂದಿ ವಿರುದ್ಧ ಕೇಸ್​

ಜನವರಿ 16 ರಂದು ಜಾರಿಯಲ್ಲಿದ್ದ ಲಾಕ್‌ಡೌನ್ ವೇಳೆ ಅನುಮತಿಸಲಾದ ಮತ್ತು ನಿರ್ಬಂಧಿಸಲಾದ ಚಟುವಟಿಕೆಗಳು ಜನವರಿ 23ಕ್ಕೂ ಅನ್ವಯಿಸುತ್ತವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಅಲ್ಲದೆ, ಇತರ ಸ್ಥಳಗಳಿಂದ ಚೆನ್ನೈಗೆ ಆಗಮಿಸುವ ಪ್ರಯಾಣಿಕರ ಹಿತದೃಷ್ಟಿಯಿಂದ, ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳನ್ನು ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ, ಎಗ್ಮೋರ್ ರೈಲು ನಿಲ್ದಾಣ ಮತ್ತು ಕೊಯಮತ್ತೂರು ಬಸ್ ಟರ್ಮಿನಸ್ ನಿಂದ ಸಂಚರಿಸಲು ಅನುಮತಿಸಲಾಗುವುದು. ಈ ವಾಹನಗಳಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಕಾಯ್ದಿರಿಸಬಹುದು. ಇದು ಜಿಲ್ಲೆಯ ರೈಲು ನಿಲ್ದಾಣಗಳು ಮತ್ತು ಇತರ ಬಸ್ ನಿಲ್ದಾಣಗಳಿಗೂ ಅನ್ವಯಿಸುತ್ತದೆ ಎಂದಿದ್ದಾರೆ.

ಕೋವಿಡ್-19 ಹರಡುವುದನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಟ್ಯಾಲಿನ್ ಮನವಿ ಮಾಡಿದರು.



Read more

[wpas_products keywords=”deal of the day”]