ಕಾರವಾರ: ವಾರಾಂತ್ಯ ಕರ್ಫ್ಯೂ ತೆರವಾದರೂ ಮಾರುಕಟ್ಟೆ ಖಾಲಿ, ತರಕಾರಿ, ಮೀನು ಮಾರ್ಕೆಟ್ ವ್ಯಾಪಾರ ಡಲ್
ಸೋಂಕಿತರ ಸಂಖ್ಯೆ ಏರಿಕೆಯಂತೆ ಕಳೆದೊಂದು ವಾರದಿಂದ ಗುಣಮುಖರಾದವರ ಸಂಖ್ಯೆ ಕೂಡ ಏರುಗತಿಯಲ್ಲೇ ಸಾಗುತ್ತಿದೆ. ಆ.15ರಂದು 67, 16ರಂದು 65, 17ರಂದು 193, 18ರಂದು 208, 19ರಂದು 403, 20ರಂದು 697, 21ರಂದು 369 ಹಾಗೂ 22ರಂದು 450 ಸೋಂಕಿತರು ಗುಣಮುಖರಾಗಿದ್ದಾರೆ. ಇದು ಜಿಲ್ಲೆಯ ಜನತೆಯಲ್ಲಿ ಆಶಾಭಾವನೆ ಮೂಡಿಸಿದೆ.
ರಾಜ್ಯದಲ್ಲಿ ಎರಡನೇ ಸ್ಥಾನ
ಜಿಲ್ಲೆಯಲ್ಲಿ 500ಕ್ಕೂ ಅಧಿಕ ಮಂದಿಗೆ ಕೋವಿಡ್ ದೃಢಪಟ್ಟರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅತಿ ಕಡಿಮೆ ಇದೆ. ಹೆಚ್ಚಿನ ಸೋಂಕಿತರು ಹೋಮ್ ಐಸೋಲೇಶನ್‌ನಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದು, ರಾಜ್ಯದಲ್ಲಿ ಅತಿಹೆಚ್ಚು ಹೋಮ್ ಐಸೋಲೇಶನ್ ಸೋಂಕಿತರಿರುವ ಜಿಲ್ಲೆಗಳ ಪಟ್ಟಿಯಲ್ಲಿ ಉತ್ತರ ಕನ್ನಡ ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಹೋಮ್ ಐಸೋಲೇಶನ್‌ನಲ್ಲಿರುವವರ ನಿಗಾಕ್ಕೆ ಹೋಮ್ ಕ್ವಾರಂಟೈನ್ ವಾಚ್ ಆ್ಯಪ್ ಮೂಲಕ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಹೀಗಾಗಿ ಇಂದಿನವರೆಗಿನ 2485 ಸಕ್ರಿಯ ಸೋಂಕಿತರಲ್ಲಿ 118 ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 2367 ಸೋಂಕಿತರು ಹೋಮ್ ಐಸೋಲೇಶನ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆ ಮನೆಯಲ್ಲೂ ಜ್ವರ, ಶೀತ.. ಉತ್ತರ ಕನ್ನಡದಲ್ಲಿ ಡೋಲೋ, ಪ್ಯಾರಾಸಿಟಮಲ್ ಮಾತ್ರೆಗೆ ಜನರ ಕ್ಯೂ
ಚಿಕಿತ್ಸೆಗೆ ಸರ್ವ ಸಿದ್ಧತೆ
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಿದ್ದರೂ ಯಾರಿಗೂ ತೀವ್ರವಾಗುತ್ತಿಲ್ಲ. ಒಂದುವೇಳೆ ತೀವ್ರ ತರ ಆರೋಗ್ಯ ಸಮಸ್ಯೆ ಎದುರಾದರೂ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಇಂದಿನ ಅಂಕಿ- ಅಂಶಗಳ ಪ್ರಕಾರ ಆಸ್ಪತ್ರೆಗಳಲ್ಲಿ 1603 ಹಾಸಿಗೆಗಳು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಖಾಲಿ ಇವೆ. ಈ ಪೈಕಿ 585 ಸಾಮಾನ್ಯ, 828 ಎಚ್‌ಡಿಯು, 190 ಐಸಿಯು ಬೆಡ್‌ಗಳಿವೆ.
Read more
[wpas_products keywords=”deal of the day sale today offer all”]