ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಓಡಿಐ ಸರಣಿ.
- ಭಾನುವಾರ ಮೂರನೇ ಓಡಿಐ ಪಂದ್ಯದಲ್ಲಿ ಸೆಣಸಲಿರುವ ಉಭಯ ತಂಡಗಳು.
- ಈಗಾಗಲೇ 0-2 ಅಂತರದಲ್ಲಿ ಓಡಿಐ ಸರಣಿ ಕಳೆದುಕೊಂಡಿರುವ ಟೀಮ್ ಇಂಡಿಯಾ.
ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-2 ಅಂತರದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ ಅಷ್ಟೇ ಪಂದ್ಯಗಳ ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಯೋಜನೆ ರೂಪಿಸಿಕೊಂಡಿತ್ತು. ಆದರೆ ಮೊದಲನೇ ಪಂದ್ಯದಲ್ಲಿ 31 ರನ್‌ನಿಂದ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾ, ಎರಡನೇ ಓಡಿಐನಲ್ಲಿಯೂ 7 ವಿಕೆಟ್‌ಗಳಿಂದ ಸೋಲಿಗೆ ಶರಣಾಗಿತ್ತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿದೆ.
ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಬಹುಬೇಗ ಎರಡು ವಿಕೆಟ್ ಕಳೆದುಕೊಂಡಿತು. ಬಳಿಕ ಕೆ.ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಜೋಡಿ 115 ರನ್ ಜೊತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು. ರಾಹುಲ್ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರೆ, ರಿಷಭ್ ಪಂತ್ 85 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ವೈಫಲ್ಯ ಅನುಭವಿಸಿದರು. ಆದರೆ ಅಂತಿಮವಾಗಿ ಶಾರ್ದುಲ್ ಠಾಕೂರ್ ಅಜೇಯ 40 ರನ್‌ಗಳಿಸಿ ತಂಡದ ಮೊತ್ತವನ್ನು 287ಕ್ಕೆ ಏರಿಸಿದ್ದರು.
ಅಂತಿಮ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಸೂಚಿಸಿದ ಗಂಭೀರ್!
ಬಳಿಕ 288 ರನ್ ಗುರಿ ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ವಿಂಟನ್ ಡಿ ಕಾಕ್ ಹಾಗೂ ಜೆ ಮಲಾನ್ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 132 ರನ್ ಗಳಿಸುವ ಮೂಲಕ ಭರ್ಜರಿ ಆರಂಭ ತಂದುಕೊಟ್ಟಿತ್ತು. ಡಿ ಕಾಕ್ 78 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಜೆ ಮಲಾನ್ 91 ರನ್ ಗಳಿಸಿ ಶತಕದಂಚಿನಲ್ಲಿ ಔಟ್ ಆಗಿದ್ದರು. ನಂತರ, ರಾಸಿ ವ್ಯಾನ್ ಡೆರ್ ಡುಸ್ಸೆನ್ ಹಾಗೂ ಏಡೆನ್ ಮಾರ್ಕ್ರಮ್ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಈಗಾಗಲೇ ಭಾರತ ತಂಡ ಓಡಿಐ ಸರಣಿಯನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮೂರನೇ ಪಂದ್ಯದಲ್ಲಿ ಹೊಸಬರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಕಳೆದ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಶ್ರೇಯಸ್ ಅಯ್ಯರ್ ಜಾಗಕ್ಕೆ ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ನೀಡುವ ಸಾಧ್ಯತೆ ಇದೆ.
ಕೊಹ್ಲಿ ತಂಡದಲ್ಲಿದ್ದರೂ ಇಲ್ಲದಂತೆ ಕಾಣುತ್ತಿದ್ದಾರೆಂದ ಕನೇರಿಯಾ!
ಮತ್ತೊಂದೆಡೆ ಹಿರಿಯ ವೇಗಿಗಳಾದ ಜಸ್‌ಪ್ರಿತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಆರ್ ಅಶ್ವಿನ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಆ ಮೂಲಕ ಇವರ ಸ್ಥಾನಕ್ಕೆ ಕ್ರಮವಾಗಿ ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಜಯಂತ್ ಯಾದವ್‌ಗೆ ಸ್ಥಾನ ಕಲ್ಪಿಸುವ ಸಾಧ್ಯತೆ ಇದೆ.
ಪಿಚ್ ರಿಪೋರ್ಟ್: ಇಲ್ಲಿನ ನ್ಯೂಲೆಂಡ್ಸ್ ಮೈದಾನದಲ್ಲಿ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮಖಿಯಾಗಿದ್ದವು. ಇಲ್ಲಿನ ವಿಕೆಟ್‌ನಲ್ಲಿ ಬ್ಯಾಟ್ ಮಾಡುವುದು ಸ್ವಲ್ಪ ಕಠಿಣವಾಗಿದ್ದರೂ ಕೊನೆಯ ನಾಲ್ಕು ಓಡಿಐ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು ತಲಾ ಎರಡೆರಡರಲ್ಲಿ ಗೆಲುವು ಪಡೆದಿವೆ.
ಭುವನೇಶ್ವರ್ ಸ್ಥಾನದಲ್ಲಿ ಈ ವೇಗಿಯನ್ನು ಆಡಿಸಿ ಎಂದ ಗವಾಸ್ಕರ್!
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಭಾರತ: ಕೆ.ಎಲ್ ರಾಹುಲ್(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್/ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿ.ಕೀ), ವೆಂಕಟೇಶ್ ಅಯ್ಯರ್, ಶಾರ್ದುಲ್ ಠಾಕೂರ್, ಆರ್ ಅಶ್ವಿನ್/ಜಯಂತ್ ಯಾದವ್, ಜಸ್‌ಪ್ರಿತ್ ಬುಮ್ರಾ/ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್/ದೀಪಕ್ ಚಹರ್/ಪ್ರಸಿಧ್ ಕೃಷ್ಣ, ಯುಜ್ವೇಂದ್ರ ಚಹಲ್
ದಕ್ಷಿಣ ಆಫ್ರಿಕಾ: ಜೆ.ಮಲಾನ್, ಕ್ವಿಂಟನ್ ಡಿ ಕಾಕ್(ವಿ.ಕೀ), ತೆಂಬಾ ಬವೂಮ(ನಾಯಕ), ಏಡೆನ್ ಮಾರ್ಕ್ರಮ್, ರಾಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್, ಆಂಡಿಲೆ ಫೆಹ್ಲುಕ್ವಾಯೊ, ವ್ಯಾನ್ ಪರ್ನೆಲ್, ಲುಂಗಿ ಎನ್ಗಿಡಿ, ತಬ್ರೈಝ್ ಶಾಂಸಿ
ಶ್ರೇಯಸ್ ಬದಲು 4ನೇ ಕ್ರಮಾಂಕದಲ್ಲಿ ತಾವಾಡಲು ಕಾರಣ ತಿಳಿಸಿದ ಪಂತ್!
ಪಂದ್ಯದ ವಿವರ
ಪಂದ್ಯ: ಮೂರನೇ ಓಡಿಐ ಪಂದ್ಯ
ಮುಖಾಮುಖಿ: ಭಾರತ vs ದಕ್ಷಿಣ ಆಫ್ರಿಕಾ
ದಿನಾಂಕ: ಜ. 23, 2022
ಸಮಯ: ಮಧ್ಯಾಹ್ನ 2:00ಕ್ಕೆ(ಭಾರತೀಯ ಕಾಲಮಾನ)
ಸ್ಥಳ: ದಿ ನ್ಯೂಲೆಂಡ್ಸ್, ಕೇಪ್ ಟೌನ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
‘ಮತ್ತೆ ಅದೇ ತಪ್ಪು ಮಾಡಿದ್ದೇವೆ’ ಓಡಿಐ ಸರಣಿ ಸೋಲಿಗೆ ಕಾರಣ ತಿಳಿಸಿದ ರಾಹುಲ್!
ಉಭಯ ತಂಡಗಳ ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 86
ಭಾರತದ ಗೆಲುವು: 35
ದಕ್ಷಿಣ ಆಫ್ರಿಕಾ ಗೆಲುವು: 48
Read more
[wpas_products keywords=”deal of the day gym”]