ನಾರಾಯಣು ಗುರುಗಳು ಸಾಮಾಜಿಕ ನ್ಯಾಯದ ಕಲ್ಪನೆ ಕೊಟ್ಟವರು. ಮೋದಿ ಪ್ರಧಾನಿಯಾದ ಬಳಿಕ ನಾರಾಯಣ ಗುರು ಶಿವಗಿರಿಗೆ ಬಂದು ನಾರಾಯಣ ಗುರುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ನಾರಾಯಣ ಗುರು ಪ್ರತಿಕೃತಿ ನಿರಾಕಣೆ ವಿಚಾರದಲ್ಲಿ ಕೇರಳ ಸರಕಾರ ಕೇಂದ್ರ ಸರಕಾರ, ಪ್ರಧಾನ ಮಂತ್ರಿ ಅವರನ್ನು ದೂಷಿಸುವುದು ಸರಿಯಲ್ಲ. ಬಿಜೆಪಿ ಪಾರ್ಟಿಗೂ, ಪ್ರಧಾನಿಗೂ ಸಂಬಂಧವಿಲ್ಲ. ಕೇರಳದಲ್ಲಿ ಕಮ್ಯುನಿಸ್ಟ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ವಿವಾದ ಮಾಡುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸರಕಾರದ ವಿರುದ್ಧ ಟೀಕೆಗಳನ್ನು ಮಾಡಲು ಯಾವುದೇ ವಿಷಯಗಳಿಲ್ಲ. ಅದಕ್ಕಾಗಿ ಯಾವುದೋ ವಿಷಯಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಅವರು ಸುನೀಲ್ ಕುಮಾರ್ ಹಾಗೂ ನನ್ನ ರಾಜೀನಾಮೆಯನ್ನು ಕೇಳಿದ್ದಾರೆ. ಆದರೆ ನಾರಾಯಣ ಗುರುಗಳು ಪ್ರತಿಷ್ಠಾಪನೆ ಮಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಸಿದ್ಧರಾಮಯ್ಯ ಅವರನ್ನು ಹೋಗದಂತೆ ತಡೆದವರು ಯಾರೆನ್ನುವುದಕ್ಕೆ ಐವನ್ ಡಿಸೋಜಾ ಉತ್ತರಿಸಲಿ ಎಂದು ಸವಾಲೆಸೆದರು.
ಶೀಘ್ರ ಪೂಜಾರಿ ಭೇಟಿ
ಕೇಂದ್ರದಿಂದ ನಾರಾಯಣ ಗುರು ಟ್ಯಾಬ್ಲೋ ನಿರಾಕರಣೆ: 26ರಂದು ಜನಾರ್ದನ ಪೂಜಾರಿ ನೇತೃತ್ವದಲ್ಲಿ ಜಾಥಾ
ಈ ಸಂದರ್ಭದಲ್ಲಿ ಹಲವಾರು ನಾಯಕರು, ಪದಾಧಿಕಾರಿಗಳು ಹಾಜರಿದ್ದರು.
Read more
[wpas_products keywords=”deal of the day sale today offer all”]