Karnataka news paper

ಸ್ವಾರ್ಥಕ್ಕಾಗಿ ಸಮಾಜದ ಬಳಕೆ; ನಿರಾಣಿ ವಿರುದ್ಧ ವಿಜಯಾನಂದ ಕಾಶಪ್ಪನವರ್ ಕಿಡಿ


ಹೈಲೈಟ್ಸ್‌:

  • ಸ್ವಾರ್ಥಕ್ಕಾಗಿ ಸಮಾಜದ ಬಳಕೆ
  • ನಿರಾಣಿ ವಿರುದ್ಧ ವಿಜಯಾನಂದ ಕಾಶಪ್ಪನವರ್ ಕಿಡಿ
  • ಮೂರನೇ ಪೀಠ ಸ್ಥಾಪನೆಗೆ ವಿರೋಧ

ಬೆಂಗಳೂರು: ಸ್ವಾರ್ಥಕ್ಕಾಗಿ ಸಮಾಜದ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಮೂರನೇ ಪೀಠ ಮಾಡಲು‌ಹೊರಟಿದ್ದಾರೆ ಆದರೆ ನಮ್ಮ ಸಮಾಜದಲ್ಲಿ ಯಾವುದೇ ಒಡಕಿಲ್ಲ ಎಂದು ಪಂಚಮಸಾಲಿ ನಾಯಕ ವಿಜಯಾನಂದ ಕಾಶಪ್ಪನವರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, 2008 ರಿಂದ ನಮ್ಮ‌ಜಗದ್ಗುರುಗಳು ಜಯ ಮೃತ್ಯುಂಜಯ‌ಶ್ರೀಗಳು ಇದ್ದಾರೆ.ಸಮುದಾಯ ಒಗ್ಗೂಡಿಸುವ ಕೆಲಸ ಅವರು ಮಾಡುತ್ತಿದ್ದಾರೆ. 2 ಎ ಮೀಸಲಾತಿಗಾಗಿ ಹೋರಾಟ ಮಾಡ್ತಿದ್ದಾರೆ. ಸಮಾಜಕ್ಕೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದಾರೆ. ಸ್ವಾರ್ಥಕ್ಕಾಗಿ ಸಮಾಜ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ರಾಹುಲ್ ಗಾಂಧಿ ವಿರುದ್ಧ ಯತ್ನಾಳ್ ಮಾತನಾಡಿದ್ದು ತಪ್ಪು; ವಿಜಯಾನಂದ ಕಾಶಪ್ಪನವರ್

ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿಎಂ ಆಗಲು ನಿರಾಣಿ ಹೊರಟಿದ್ದಾರೆ. ಸಚಿವ ಸ್ಥಾನ ಅವರದ್ದು ಹೋಗುತ್ತದೆ ಇನ್ನೂ ಸಿಎಂ ಎಲ್ಲಿ ಆಗುತ್ತಾರೆ ಎಂದರು. ನಾವೆಲ್ಲ ಒಗ್ಗಟ್ಟಾಗಿದ್ದೇವೆ . ಈಗಾಗಲೇ ಮೀಸಲಾತಿಗಾಗಿ ಪಾದಯಾತ್ರೆ ನಡೆದಿದೆ. ವಚನಾನಂದ ಶ್ರೀಗಳು ಅದಕ್ಕೆ ಬಂದು ಹೋದ್ರು. ಮೂರನೇ ಪೀಠಕ್ಕೆ ಇಬ್ಬರು ಶ್ರೀ ಸಮ್ಮತಿ ಇದೆ ಎಂದಿದ್ದಾರೆ. ಮೂರನೇ ಪೀಠ ನಿರಾಣಿಯವರದ್ದು. ಅವರನ್ನ ಮಂತ್ರಿಮಂಡಲದಿಂದ ಕೈಬಿಡ್ತಿದ್ದಾರೆ ಎಂದರು.

ಇವರು ಸಚಿವರಾಗೋಕೆ ಜಯಮೃತ್ಯುಂಜಯ ಶ್ರೀ ಬೇಕು. ವಚನಾನಂದ ಶ್ರೀಗಳು ಬೇಕು. ಅದರೆ ಈಗ ಅವರ ವಿರುದ್ಧವೇ ಹೊರಟಿದ್ದಾರೆ. ಸಚಿವ ಸ್ಥಾನ ಉಳಿಸಿಕೊಳ್ಳೋಕೆ ಪೀಠ ಮಾಡ್ತಿದ್ದಾರೆ. ಮುಂದಿನ ರಾಜಕೀಯ ಭವಿಷ್ಯ ಉಳಿವಿಗೆ ಈ ಪ್ರಯತ್ನ ಎಂದ ಅವರು, ಸಮಾಜ ಮೊದಲು ಎಲ್ಲಿತ್ತು? ಸಮಾಜ ಕಟ್ಟಿದವರು ಯಾರು? ಸಮಾಜ ಕಟ್ಟಿದವರು ಮೊದಲು ನಮ್ಮ ತಂದೆ ಕಾಶಪ್ಪನವರು. ಇವರು ಸ್ವಾರ್ಥಕ್ಕಾಗಿ ಪೀಠ ಬಳಸಿಕೊಳ್ತಿದ್ದಾರೆ. ಮೊದಲು ಕೂಡಲಸಂಗಮ ಪೀಠ ಬಳಸಿಕೊಂಡ್ರು ನಂತರ ವಚನಾನಂದರನ್ನ ಬಳಸಿಕೊಂಡ್ರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹರಿಹರದಲ್ಲಿ ಸಂಘ ಕಟ್ಟಿದ್ದು ನಮ್ಮ ತಂದೆಯವರು. ಅಲ್ಲಿ ಹಣ ಹೊಡೆಯೋಕೆ ಅದನ್ನ ಬಳಸಿಕೊಂಡಿದ್ದು ನಿರಾಣಿ. ಸಿಎಂ ಆಗಬೇಕೆಂಬ ಕಾರಣಕ್ಕೆ ಪೀಠ ಕಟ್ತಿದ್ದಾರೆ. ಅವರ ಸಹೋದರನ್ನ ಮಂತ್ರಿ ಮಾಡಬೇಕು. ಅದಕ್ಕಾಗಿಯೇ ನಿರಾಣಿ ಒದ್ದಾಡ್ತಿದ್ದಾರೆ ಎಂದು ನಿರಾಣಿಯವರ ವಿರುದ್ಧ ವಿಜಯಾನಂದ ಕಾಶಪ್ಪ ಆಕ್ರೋಶ ವ್ಯಕ್ತಪಡಿಸಿದರು. ಸಮಾಜಕ್ಕೆ ನಿರಾಣಿ ಕೊಡುಗೆಯೇನು? ವೈಯುಕ್ತಿಕ ಸ್ವಾರ್ಥಕ್ಕಾಗಿ ಈ ಪ್ರಯತ್ನ ಮಾಡುತ್ತಿದ್ದಾರೆ.ತಮಗೆ ಬೇಕಾದಂತೆ ಸಮಾಜ ಬಳಸಿಕೊಳ್ತಾರೆ. ಸಮಾಜ ಅವರ ಹಿಂದೆ ಇಲ್ಲ ಎಂದರು.



Read more

[wpas_products keywords=”deal of the day sale today offer all”]