The New Indian Express
ಬೆಂಗಳೂರು: ರಾಮನ್ ಸಂಶೋಧನಾ ಸಂಸ್ಥೆ (ಆರ್ ಆರ್ ಐ ನ) ಹೊಸ ನಿರ್ದೇಶಕರಾಗಿ ಪ್ರೊಫೆಸರ್ ತರುಣ್ ಸೌರದೀಪ್ ನೇಮಕಗೊಂಡಿದ್ದಾರೆ.
ಮಧ್ಯಂತರ ಅವಧಿಗೆ ನೇಮಕಗೊಂಡಿದ್ದ ಪ್ರೊಫೆಸರ್ ಮಾಧವನ್ ವರದರಾಜನ್ ಅವರು ನೂತನ ನಿರ್ದೇಶಕರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ವಿಶ್ವವಿಜ್ಞಾನ ಮತ್ತು ಗುರುತ್ವಾಕರ್ಷಣೆಯ ತರಂಗ, ಭೌತಶಾಸ್ತ್ರ, ಖಗೋಳಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್ ಸೌರದೀಪ್ ಅವರು ಪರಿಣಿತಿಯನ್ನು ಹೊಂದಿದ್ದು ಅಂತಾರಾಷ್ಟ್ರೀಯ ಸಂಶೋಧನೆಗಳ ಸಮನಾಗಿ ಭಾರತವನ್ನು ಪ್ರತಿನಿಧಿಸುವ ಕೊಡುಗೆಗಳನ್ನು ನೀಡಿದ್ದಾರೆ.
ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್ (ಸಿಎಂಬಿ) ಪ್ರಯೋಗ ಹಾಗೂ ಜಿಡಬ್ಲ್ಯು ಅಸ್ಟ್ರಾನಮಿ ವಿಭಾಗದಲ್ಲಿ ಅವರ ನೇತೃತ್ವದ ಭಾರತೀಯ ತಂಡದ ಕೊಡುಗೆಗಳಿಗೆ ವ್ಯಾಪಕ ಮನ್ನಣೆ ದೊರೆತಿದೆ.
ತರುಣ್ ಸೌರದೀಪ್ ಅವರು ಲೇಸರ್ ಇಂಟರ್ಫೆರೋಮೀಟರ್ ಗ್ರಾವಿಟೇಷನಲ್ ವೇವ್ಸ್ ಅಬ್ಸರ್ವೇಟರಿ (LIGO)-ಭಾರತದ ವಕ್ತಾರರಾಗಿದ್ದು, 2011 ರಲ್ಲಿ ಎಲ್ಐಜಿಒ-ಇಂಡಿಯಾ ಪ್ರಾಜೆಕ್ಟ್ ನ ಪ್ರಮುಖ ಪ್ರತಿಪಾದಕರೂ ಆಗಿದ್ದರು.
Read more
[wpas_products keywords=”deal of the day”]