Karnataka news paper

ವಿಧಾನ ಪರಿಷತ್‌ ಫಲಿತಾಂಶ: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆ ಭರ್ಜರಿ ಗೆಲುವು!


| Vijaya Karnataka Web | Updated: Dec 14, 2021, 2:46 PM

ಸ್ಥಳಿಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆಲುವು ಕಂಡ ಹಿನ್ನೆಲೆಯಲ್ಲಿ ಪಾಲಿಕೆ ಆವರಣದಲ್ಲಿ ಪಕ್ಷದಿಂದ ವಿಜಯೋತ್ಸವ ಆಚರಿಸಲಾಯಿತು.

 

ಕೆ ಎಸ್ ನವೀನ್
ದಾವಣಗೆರೆ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು, ಎಲ್ಲ ಸುತ್ತಿನ ಮತ ಎಣಿಕೆಯಲ್ಲೂ ಬಿಜೆಪಿ ತನ್ನ ಮುನ್ನಡೆ ಕಾಯ್ದುಕೊಂಡಿತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ನವೀನ್ 358 ಮತಗಳಿಂದ ಗೆದ್ದು, ಸೋಮಶೇಖರ್‌ರನ್ನು ಪರಾಭವಗೊಳಿಸಿದರು.
ಉತ್ತರ ಕನ್ನಡದಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್; 183 ಮತಗಳ ಅಂತರದಿಂದ ಜಯ!
ಸ್ಥಳಿಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆಲುವು ಕಂಡ ಹಿನ್ನೆಲೆಯಲ್ಲಿ ಪಾಲಿಕೆ ಆವರಣದಲ್ಲಿ ಪಕ್ಷದಿಂದ ವಿಜಯೋತ್ಸವ ಆಚರಿಸಲಾಯಿತು.

ಮೇಯರ್ ಎಸ್.ಟಿ.ವೀರೇಶ್ ನೇತತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಉಮಾಪ್ರಕಾಶ್, ಎಲ್.ಡಿ.ಗೋಣೆಪ್ಪ, ಸದಸ್ಯ ಪ್ರಸನ್ನಕುಮಾರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.
ಗೌಡರ ಕುಟುಂಬದ ಮತ್ತೊಂದು ಕುಡಿ ಮೇಲ್ಮನೆಗೆ ಎಂಟ್ರಿ; ಹಾಸನದಲ್ಲಿ ಗೆದ್ದು ಬೀಗಿದ ಸೂರಜ್ ರೇವಣ್ಣ!
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಎಸ್.ಟಿ.ವೀರೇಶ್, ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಕಾಂಗ್ರೆಸ್ ಮಾಡಿದ ಕುತಂತ್ರ ನೀತಿಗೆ ಜನರು ಮನ್ನಣೆ ನೀಡಿಲ್ಲ. ಹಣದಿಂದ ಎಲ್ಲರನ್ನು ಖರೀದಿಸಬಹುದು ಕೊಳ್ಳಬಹುದು ಎಂದು ಕ್ಷೇತ್ರದ ಪರಿಚಯವೇ ಇಲ್ಲದ ಬೆಂಗಳೂರಿನ ಶ್ರೀಮಂತ ವ್ಯಕ್ತಿಯನ್ನು ಕರೆತಂದು ನಿಲ್ಲಿಸಿ ಮತದಾರರನ್ನು ಕೀಳಾಗಿ ಕಂಡ ಕಾಂಗ್ರೆಸ್‌ಗೆ ಸ್ಥಳಿಯ ಸಂಸ್ಥೆಗಳ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ ಎಂದರು.
Karnataka MLC Election Results:ಬೆಳಗಾವಿಯಲ್ಲಿ ಕಾಂಗ್ರೆಸ್‌ಗೆ ಜಯ, ಲಖನ್‌ಗೆ 2ನೇ ಸ್ಥಾನ; ಬಿಜೆಪಿಗೆ 3ನೇ ಸ್ಥಾನ
ಈ ಹಿಂದೆ ಬೆಂಗಳೂರಿನವರೇ ಆಗಿದ್ದ ರಘು ಆಚಾರ್ ಕಾಂಗ್ರೆಸ್‌ನಿಂದ 2 ಬಾರಿ ಗೆದ್ದು, ಕ್ಷೇತ್ರವನ್ನು ನಿರ್ಲಕ್ಷಿಸಿದ್ದರು. ಕ್ಷೇತ್ರದ ಸ್ಥಳಿಯ ಸಂಸ್ಥೆಗಳ ಸಮಸ್ಯೆಗಳ ಎರಡೂ ಅವಧಿಯಲ್ಲೂ ಸ್ಪಂದಿಸದ ಕಾಂಗ್ರೆಸ್‌ಗೆ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಬಿಜೆಪಿ 12 ಸ್ಥಾನಗಳನ್ನು ಗೆದ್ದಿರುವುದು ಖುಷಿ ತಂದಿದ್ದು, 2023ರಲ್ಲಿಯೂ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದರು.

ಸಮೀಪದ ನಗರಗಳ ಸುದ್ದಿ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ

Web Title : karnataka mlc election result bjp candidate ks naveen registered victory
Kannada News from Vijaya Karnataka, TIL Network



Read more