Source : The New Indian Express
ಗುವಾಹಟಿ: ತೃಣಮೂಲ ಕಾಂಗ್ರೆಸ್(ಟಿಎಂಸಿ) ಗೆ ಮೇಘಾಲಯ ಕಾಂಗ್ರೆಸ್ ಶಾಸಕರು, ಇತರ ಚುನಾಯಿತ ಸದಸ್ಯರು ಮತ್ತು ಕಾರ್ಯಕರ್ತರ ಪಕ್ಷಾಂತರ ಪರ್ವ ಮುಂದುವರಿದಿದೆ.
ಗರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಕೌನ್ಸಿಲ್(ಜಿಎಚ್ಎಡಿಸಿ)ನ ಎಲ್ಲಾ 11 ಚುನಾಯಿತ ಸದಸ್ಯರು ಗುರುವಾರ ಸಂಜೆ ಪಕ್ಷವನ್ನು ತೊರೆದು ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ತನ್ನ ಭದ್ರಕೋಟೆಯಾದ ಗರೋ ಹಿಲ್ಸ್‌ನಲ್ಲಿ ಕಾಂಗ್ರೆಸ್ ಸಂಕಷ್ಟ ಅನುಭವಿಸಿದೆ.
ಕೆಲ ದಿನಗಳ ಹಿಂದೆ 17 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಪಕ್ಷವನ್ನು ತೊರೆದು ಟಿಎಂಸಿಗೆ ಸೇರ್ಪಡೆಗೊಂಡಿದ್ದರು. ಆ ಮೂಲಕ ನಾಟಕೀಯವಾಗಿ ಟಿಎಂಸಿ ಅನ್ನು ರಾಜ್ಯದ ಪ್ರಮುಖ ವಿರೋಧ ಪಕ್ಷವನ್ನಾಗಿ ಮಾಡಿದೆ.
ಇತನ್ಮಧ್ಯೆ 400 ಯೂತ್ ಕಾಂಗ್ರೆಸ್ ಸದಸ್ಯರು, 600 ಮಂದಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವನ್ನು ತೊರೆದರು. ಅವರು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ.