Karnataka news paper

2020 ರ ಲಾಕ್ ಡೌನ್ ಸಮಯದಲ್ಲಿ ಇದ್ದ ವಾಯು ಗುಣಮಟ್ಟ ಉಳಿಸಿಕೊಂಡ ಬೆಂಗಳೂರು!


The New Indian Express

ಬೆಂಗಳೂರು: ಚಳಿಗಾಲದ ವಾಯು ಮಾಲಿನ್ಯ ವಿಶ್ಲೇಷಣೆ ಬೆಂಗಳೂರಿನವರಿಗೆ ಸಿಹಿ ಸುದ್ದಿ ನೀಡಿದೆ. ನಗರ 2020 ರ ಲಾಕ್ ಡೌನ್ ಅವಧಿಯಲ್ಲಿ ಸುಧಾರಣೆ ಕಂಡಿದ್ದ ವಾಯುಗುಣಮಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) ವರ್ಗೀಕರಣದ ಪ್ರಕಾರ ದಕ್ಷಿಣ ಭಾರತದಲ್ಲಿ ಚೆನ್ನೈ ಹಾಗೂ ಕೊಚಿ ಇಂಥಹದ್ದೇ ಟ್ರೆಂಡ್ ನ್ನು ಹೊಂದಿದೆ. ಈ ಅಂಕಿ-ಅಂಶಗಳನ್ನು ನವದೆಹಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರ ಬಿಡುಗಡೆ ಮಾಡಿದೆ.

2021 ರಲ್ಲಿ ಬೆಂಗಳೂರಿಗೆ ಉತ್ತಮ ಎಕ್ಯುಐ 208 ರಲ್ಲಿದ್ದು ಇದು 2020 ರಲ್ಲಿ 214 ದಿನಗಳ ಕಾಲ ದಾಖಲಾಗಿದ್ದಕ್ಕಿಂತ ಸ್ವಲ್ಪ ಕಡಿಮೆ ಇದೆ. ಅಚ್ಚರಿಯೆಂದರೆ ನಗರದ ಒಳಭಾಗದಲ್ಲಿ ಅತಿ ಹೆಚ್ಚು ಜನಸಂದಣಿ ಹೊಂದಿರುವ ಬಾಪೂಜಿನಗರ ಡಿಸೆಂಬರ್ ನ ಸರಾಸರಿಯಲ್ಲಿ ಅತ್ಯಂತ ಕಳಪೆ ಅಂದರೆ 76 ug/m3 ವಾಯುಗುಣಮಟ್ಟವನ್ನು ದಾಖಲಿಸಿಕೊಂಡಿದೆ.

ಪೀಣ್ಯ, ಕೈಗಾರಿಕಾ ಪ್ರದೇಶವಾಗಿದ್ದರೂ ಡಿಸೆಂಬರ್ 2021 ರಲ್ಲಿ ಸರಾಸರಿ 36 ug/m3 ನ್ನು ದಾಖಲ್ಪಿಸಿದ್ದು, ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಾಯುಮಾಲಿನ್ಯ ಹೊಂದಿದೆ.

ಸಿಎಸ್ಇಯ ನಗರ ಡೇಟಾ ಅನಾಲಿಟಿಕ್ಸ್ ಲ್ಯಾಬ್ ನ ಪ್ರೋಗ್ರಾಮ್ ಮ್ಯಾನೇಜರ್ ಆಗಿರುವ ಅವಿಕಲ್ ಸೋಮವಂಶಿ ಈ ಬಗ್ಗೆ ಮಾತನಾಡಿದ್ದು, ವಾಹನಗಳ ದಟ್ಟಣೆಯಿಂದ ಉಂಟಾಗುವ ಎಮಿಷನ್ ನ ಕಾರಣ ಹಾಗೂ ಬಾಪೂಜಿನಗರಗಳಂತಹ ಪ್ರದೇಶಗಳಲ್ಲಿ ತ್ಯಾಜ್ಯ ಸುಡುವುದರಿಂದ ವಾಯುಮಾಲಿನ್ಯ ಹೆಚ್ಚಳವಾಗಿದೆ. ಆದರೆ ಪೀಣ್ಯದಲ್ಲಿ ಉತ್ತಮ ನಿಯಂತ್ರಣಗಳು ಹಾಗೂ ನಿಗಾ ವಹಿಸುವುದರಿಂದ ವಾಯುಮಾಲಿನ್ಯ ನಿಯಂತ್ರಣದಲ್ಲಿದೆ, ವಾಸ್ತವದಲ್ಲಿ ಕೈಗಾರಿಕಾ ಪ್ರದೇಶಗಳಿಗಿಂತಲೂ ಬಿಟಿಎಂ ಲೇಔಟ್ ಹಾಗೂ ಜಯನಗರಗಳಲ್ಲಿ ಎಕ್ಯುಐ ಕೆಟ್ಟದಾಗಿದೆ” ಎಂದು ಹೇಳಿದ್ದಾರೆ.



Read more

[wpas_products keywords=”deal of the day”]