Karnataka news paper

27ನೇ ವಾರಕ್ಕೆ ಜನಿಸಿತು ಪ್ರೀ ಮೆಚ್ಯೂರ್ ಬೇಬಿ: ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್‌ಗೆ ಹೆಣ್ಣು ಮಗು


ಹೈಲೈಟ್ಸ್‌:

  • ಪ್ರಿಯಾಂಕಾ ಚೋಪ್ರಾ – ನಿಕ್ ಜೋನಸ್‌ಗೆ ಹೆಣ್ಣು ಮಗು
  • ಬಾಡಿಗೆ ತಾಯಿಯ ಮೂಲಕ ಹೆಣ್ಣು ಮಗು ಪಡೆದ ಪ್ರಿಯಾಂಕಾ-ನಿಕ್ ದಂಪತಿ
  • 27ನೇ ವಾರಕ್ಕೆ ಜನಿಸಿದ ಪ್ರೀ ಮೆಚ್ಯೂರ್ ಬೇಬಿ
  • 12 ವಾರಗಳು ಮುಂಚಿತವಾಗಿ ಹೆಣ್ಣು ಮಗು ಜನಿಸಿದೆ

ಹಾಲಿವುಡ್‌ನಲ್ಲೂ ಜನಪ್ರಿಯತೆ ಪಡೆದಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೇರಿಕಾದ ಸಿಂಗರ್ ನಿಕ್ ಜೋನಸ್ ದಂಪತಿ ಮಗುವನ್ನು ಬರಮಾಡಿಕೊಂಡಿದ್ದಾರೆ. ಸರೋಗಸಿ (ಬಾಡಿಗೆ ತಾಯ್ತನ) ಮೂಲಕ ಮಗುವಿಗೆ ನಿಕ್ ಜೋನಸ್ ಹಾಗೂ ಪ್ರಿಯಾಂಕಾ ಚೋಪ್ರಾ ಪಾಲಕರಾಗಿದ್ದಾರೆ. ಮಗುವಿಗೆ ತಂದೆ-ತಾಯಿಯಾದ ಖುಷಿಯನ್ನು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಸೋಷಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ.

ಹೆಣ್ಣು ಮಗು
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಬಾಡಿಗೆ ತಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪೋಷಕರಾಗಿ ಬಡ್ತಿ ಪಡೆದ ಸಂತಸದಲ್ಲಿದ್ದಾರೆ.

ತಂದೆ, ತಾಯಿಗಾಗಿ ಬಡ್ತಿ ಪಡೆದ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿ
ಪ್ರೀ ಮೆಚ್ಯೂರ್ ಬೇಬಿ
12 ವಾರಗಳು ಮುಂಚಿತವಾಗಿ ಹೆಣ್ಣು ಮಗು ಬಾಡಿಗೆ ತಾಯಿಯ ಮೂಲಕ ಜನಿಸಿದೆ. ಪ್ರೀ-ಮೆಚ್ಯೂರ್ ಬೇಬಿಯಾಗಿರುವುದರಿಂದ ಮಗು ಮತ್ತು ಬಾಡಿಗೆ ತಾಯಿ ಕೆಲಕಾಲ ಸದರ್ನ್ ಕ್ಯಾಲಿಫೋರ್ನಿಯಾ ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ಇರಲಿದ್ದಾರೆ. 27 ವಾರಗಳಿಗೇ ಹೆಣ್ಣು ಮಗು ಜನಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಪ್ರಿಯಾಂಕಾ-ನಿಕ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿಲ್ಲ! ಸಾಕ್ಷಿ ಇಲ್ಲಿದೆ…
ಸರೋಗಸಿ ಮೊರೆ ಹೋಗಿದ್ದು ಯಾಕೆ?
‘’ಸಾಕಷ್ಟು ಸಮಯದಿಂದ ಮಗುವನ್ನು ಹೊಂದಲು ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಬಯಸಿದ್ದರು. ಆದರೆ, ಅವರಿಬ್ಬರ ಬಿಜಿ ಶೆಡ್ಯೂಲ್‌ಗಳು ಕುಟುಂಬ ಯೋಜನೆಗೆ ಅಡ್ಡಿಯುಂಟು ಮಾಡಿತ್ತು. ಪ್ರಿಯಾಂಕಾ ಚೋಪ್ರಾ ಅವರಿಗೆ ಫರ್ಟಿಲಿಟಿ ಸಮಸ್ಯೆಗಳು ಇರಲಿಲ್ಲ. ಆದರೆ, ಅವರಿಗೀಗ ವಯಸ್ಸು 39. ಹೀಗಾಗಿ ಅವರ ಹಾದಿಯೂ ಸುಲಭವಾಗಿ ಇರಲಿಲ್ಲ. ಬಿಡುವಿಲ್ಲದ ಕೆಲಸದ ಮಧ್ಯೆ ಅಂಡೋತ್ಪತ್ತಿ ಆಗುವ ವೇಳೆ ದೈಹಿಕವಾಗಿ ಜೊತೆಗಿದ್ದು ಗರ್ಭ ಧರಿಸುವುದು ಕಷ್ಟ ಎಂದು ಅರಿತ ಬಳಿಕ ಅವರು ಬಾಡಿಗೆ ತಾಯ್ತನದ ಮೊರೆ ಹೋದರು’’

ಸಾಮಾಜಿಕ ಜಾಲತಾಣಗಳಲ್ಲಿ ಪತಿಯ ಹೆಸರಿಗೆ ಕತ್ತರಿ ಹಾಕಿದ ಪ್ರಿಯಾಂಕಾ! ದಾಂಪತ್ಯದಲ್ಲಿ ಬಿರುಕು?
‘’ಕೆಲವು ತಿಂಗಳ ಹಿಂದೆ ಬಾಡಿಗೆ ತಾಯಿಗಾಗಿ ಅವರು ಏಜೆನ್ಸಿಯೊಂದನ್ನು ಸಂಪರ್ಕಿಸಿದ್ದರು. ಅಲ್ಲಿ ಓರ್ವ ಮಹಿಳೆಯನ್ನು ಅವರು ಭೇಟಿಯಾದರು. ನಂತರ ಬಾಡಿಗೆ ತಾಯ್ತನದ ಪ್ರಕ್ರಿಯೆ ನಡೆಯಿತು. ಇದು ಆ ಮಹಿಳೆಗೆ ಐದನೇ ಸರೋಗಸಿ. ಏಪ್ರಿಲ್‌ನಲ್ಲಿ ಮಗು ಜನಿಸಬೇಕಿತ್ತು. ಆದರೆ, 27ನೇ ವಾರದಲ್ಲೇ ಮಗುವಿಗೆ ಬಾಡಿಗೆ ತಾಯಿ ಜನ್ಮ ನೀಡಿದರು. ಮಗು ಪ್ರೀ-ಮೆಚ್ಯೂರ್ ಆಗಿದೆ. ಹೀಗಾಗಿ ಮಗು ಮತ್ತು ತಾಯಿ ಕೆಲ ಕಾಲ ಆಸ್ಪತ್ರೆಯಲ್ಲೇ ಇರಲಿದ್ದಾರೆ’’

ದೊಡ್ಡ ಕಾರ್ಯ ಮಾಡುವ ಮುನ್ನ ಪೂಜೆ ಮಾಡು ಅಂತ ಪತಿ ನಿಕ್ ಜೋನಾಸ್‌ ಹೇಳ್ತಾರೆ: ನಟಿ ಪ್ರಿಯಾಂಕಾ ಚೋಪ್ರಾ
‘’ಏಪ್ರಿಲ್‌ನಲ್ಲಿ ಮಗು ಜನಿಸುವುದರಿಂದ.. ಅಷ್ಟರೊಳಗೆ ಸಿನಿಮಾ ಕಮಿಟ್‌ಮೆಂಟ್‌ಗಳನ್ನೆಲ್ಲಾ ಪೂರ್ಣಗೊಳಿಸಲು ಪ್ರಿಯಾಂಕಾ ಚೋಪ್ರಾ ಪ್ಲಾನ್ ಮಾಡಿದ್ದರು. ಆದ್ರೆ, ಪ್ರೀ-ಮೆಚ್ಯೂರ್ ಆಗಿ ಮಗು ಜನಿಸಿರುವುದರಿಂದ ಪ್ರಿಯಾಂಕಾ ಚೋಪ್ರಾ ಅವರ ಶೂಟಿಂಗ್ ಪ್ಲಾನ್ಸ್ ತಲೆಕೆಳಗಾಗಿವೆ’’ ಅಂತ ಮೂಲಗಳು ತಿಳಿಸಿವೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಒಂದೇ ಒಂದು ಫೋಟೋ ಮೂಲಕ ಎಲ್ಲ ಅನುಮಾನಗಳಿಗೆ ಬ್ರೇಕ್ ಹಾಕಿದ ನಟಿ ಪ್ರಿಯಾಂಕಾ ಚೋಪ್ರಾ!
ಸಂತಸ ವ್ಯಕ್ತಪಡಿಸಿದ್ದ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್
“ಸರೋಗಸಿ ಮೂಲಕ ನಾವು ಮಗುವನ್ನು ಸ್ವಾಗತಿಸಿದ್ದೇವೆ. ನಾವು ಕುಟುಂಬದ ಕಡೆಗೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿರೋದರಿಂದ ನಮಗೆ ಪ್ರೈವಸಿ ಬೇಕಿದೆ. ಧನ್ಯವಾದಗಳು” ಎಂದು ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಸೋಶಿಯಲ್ ಮೀಡಿಯಾದಲ್ಲಿ ಸಂತಸವನ್ನು ಹಂಚಿಕೊಂಡಿದ್ದರು. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ದಂಪತಿಗೆ ಅನೇಕ ತಾರೆಯರು ಶುಭಾಶಯಗಳನ್ನು ತಿಳಿಸಿದ್ದರು.

ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಯಾವ ಮಗು ಎಂದಾಗಲಿ, ಮಗುವಿನ ಹೆಸರನ್ನಾಗಲಿ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಬಹಿರಂಗಪಡಿಸಿರಲಿಲ್ಲ.



Read more

[wpas_products keywords=”deal of the day party wear dress for women stylish indian”]