ಹೈಲೈಟ್ಸ್:
- ಅಮರಾವತಿ ಗ್ರಾಮದ ನಿಂಗಪ್ಪ ಸಂದೀಗವಾಡ ಅವರ ಸಕ್ಸಸ್ ಸ್ಟೋರಿ ಇಲ್ಲಿದೆ
- 8 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮೂಲಕ ಟೊಮ್ಯೆಟೋ ಬೆಳೆ; ಆದಾಯ ದ್ವಿಗುಣ
- ಕಳೆದ 20 ವರ್ಷದಿಂದ ಕೃಷಿಯಲ್ಲಿ ತೊಡಗಿರುವ ಇವರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಿದ್ದಾರೆ
ತಾಲೂಕು ವ್ಯಾಪ್ತಿಯ ರೈತರು ಹೆಚ್ಚಾಗಿ ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆ ಜೋಳ, ಕಡಲೆ, ಉದ್ದು, ತೊಗರಿ ಬೆಳೆಗಳನ್ನು ಹೆಚ್ಚು ಬೆಳೆದಿರುತ್ತಾರೆ. ಆದರೆ ಇದೇ ಪ್ರಥಮ ಬಾರಿಗೆ ಜೈನ ನೀರಾವರಿ ಸಂಸ್ಥೆ ವ್ಯಾಪ್ತಿಯ ತಾಲೂಕಿನ ಅಮರಾವತಿ ಗ್ರಾಮದ ನಿಂಗಪ್ಪ ಸಂದೀಗವಾಡ 8 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮೂಲಕ ಟೊಮ್ಯೆಟೋ ಬೆಳೆದು ಆದಾಯ ದ್ವಿಗುಣಗೊಳಿಸಿಕೊಂಡಿದ್ದಾರೆ.
ಕಳೆದ 20 ವರ್ಷದಿಂದ ಕೃಷಿಯಲ್ಲಿ ತೊಡಗಿರುವ ಇವರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಬಂಜರು ಭೂಮಿಯನ್ನು ಗುತ್ತಿಗೆ ತಗೆದುಕೊಂಡು ತರಕಾರಿ ಬೆಳೆದು ತೋರಿಸಿದ್ದಾರೆ.
ವಿಶೇಷವಾಗಿ ಸಿಂಜೆಂಟಾ ಟೊಮೇಟೊ ತಳಿಯನ್ನು ಈ ರೈತ ಬೆಳೆದಿದ್ದು , ಸಾಮಾನ್ಯವಾಗಿ ಜಾಮೂನು ತಳಿ, ಹುಳಿ ಟೊಮೇಟೊಗಳಿಗಿಂತ ಆಕಾರದಲ್ಲಿ ಸ್ವಲ್ಪ ದಪ್ಪವಾಗಿದೆ. ಬೇರೆ ತಳಿಯ ಟೊಮೇಟೊಗಳಲ್ಲಿ ಕೊಯ್ಲು ಮಾಡಿದ ತಕ್ಷಣ ತುಂಬಾ ದಿನಗಳವರೆಗೆ ಸಂಸ್ಕರಣೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ತಿಳಿ ಕೊಯ್ಲು ಮಾಡಿದ ತಕ್ಷಣವೇ ಮಾರಾಟ ಮಾಡಬೇಕಾಗಿಲ್ಲ. ಬದಲಿಗೆ ಕೊಠಡಿ ಉಷ್ಣಾಂಶದಲ್ಲಿ 15 ದಿನಗಳವರೆಗೆ ಸಂಸ್ಕರಣೆ ಮಾಡಬಹುದು. ಎಲ್ಲಿ ಬೆಲೆ ಹೆಚ್ಚು ಸಿಗುತ್ತದೆಯೋ ಅಲ್ಲಿ ಇದನ್ನು ಮಾರಾಟ ಮಾಡಬಹುದಾಗಿದೆ.
ನಮ್ಮ ಭಾಗದಲ್ಲಿ ಜಿಗುಟು ಮಣ್ಣಿದ್ದು, ಟೊಮೇಟೊಗೆ ಸೂಕ್ತವಾಗಿದೆ. ತಮ್ಮ ಜಮೀನಿಗೆ ಗೋಪಾಮೃತವನ್ನು ಮಹಾರಾಷ್ಟ್ರದಿಂದ ತಂದು ಇದಕ್ಕೆ ಎರಡು ಕೆಜಿ ಸಾವಯವ ಬೆಲ್ಲ, ಎರಡು ಲೀಟರ್ ಮಜ್ಜಿಗೆ, ಚೆನ್ನಾಗಿ ಬೆಳಿಗ್ಗೆ , ಮಧ್ಯಾಹ್ನ, ಸಂಜೆ ತಿರುವಿ 7 ದಿನದ ನಂತರ ಗಿಡಕ್ಕೆ ಸಿಂಪರಣೆ ಮಾಡುತ್ತಿದ್ದಾರೆ. ಜೈವಿಕ ಗೊಬ್ಬರ ತೀರಾ ಕಡಿಮೆ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಆಹಾರ ವಿಷಯುಕ್ತವಾಗುತ್ತಿದೆ. ಇನ್ನಾದರೂ ಸಾವಯಕ ಕೃಷಿಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಈ ರೈತ.
ಈ ಟೊಮೇಟೊ ತಳಿ ಬೆಳೆಗೆ ಹೆಚ್ಚಿನ ಖರ್ಚಿನ ಅವಶ್ಯಕತೆ ಇರುವುದಿಲ್ಲ. ಬೆಳೆ ಬೆಳೆಯುವಾಗ ಮಲ್ಚಿಂಗ್ ಮಾಡಬಹುದು ಅಥವಾ ಮಲ್ಚಿಂಗ್ ಇಲ್ಲದೇ ಸಸಿ ಬೆಳೆಸಬಹುದು. ಮಲ್ಚಿಂಗ್‌ನಿಂದ ಹೆಚ್ಚು ಕಳೆ ಬರುವುದಿಲ್ಲ. ಎಕರೆಗೆ 6 ಸಾವಿರ ಸಸಿ ನೆಡಲಾಗಿದೆ. ಉತ್ತಮ ಫಸಲು ಬಂದಿದೆ.
ನಿಂಗಪ್ಪ ಸಂದೀಗವಾಡ, ರೈತ
Read more
[wpas_products keywords=”deal of the day sale today offer all”]