Karnataka news paper

ಅಮರ ಜವಾನ್‌ ಜ್ಯೋತಿ ವಿಲೀನ, ಹುತಾತ್ಮರಿಗೆ ಮಾಡಿದ ಅಗೌರವ – ಬಿಕೆ ಹರಿಪ್ರಸಾದ್‌ ಕಿಡಿ


ಬೆಂಗಳೂರು: 1971ರ ಯುದ್ದದಲ್ಲಿ ಹುತಾತ್ಮರಾದ ಯೋಧರ ನೆನೆಪಿಗೆ ಇಂಡಿಯಾ ಗೇಟ್‌ನಲ್ಲಿ ಹಚ್ಚಲಾದ ಅಮರ ಜವಾನ್‌ ಜ್ಯೋತಿಯನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ವಿಲೀನಗೊಳಿಸಿರುವುದು ಹುತಾತ್ಮರಿಗೆ ಮಾಡಿದ ಅಗೌರವ ಎಂದು ಮಾಜಿ ಸಂಸದ ಹಾಗೂ ಹಾಲಿ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಕಳೆದ 50 ವರ್ಷಗಳಿಂದ ಈ ಜ್ಯೋತಿ ನಮ್ಮ ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮರಣೆಯ ಪ್ರತೀಕವಾಗಿತ್ತು. ಅಮರ ಜವಾನ್‌ ಜ್ಯೋತಿಯ ಶಾಶ್ವತ ಜ್ಯೋತಿ ನಮ್ಮ ದೇಶಭಕ್ತಿಯ ಹಾಗೂ ದೇಶಪ್ರೇಮದ ಸಂಕೇತವಾಗಿ ಪ್ರಜ್ವಲಿಸುತ್ತಿತ್ತು. ಎರಡೂ ಜ್ಯೋತಿಗಳ ನಿರ್ವಹಣೆ ಕಷ್ಟ ಎನ್ನುವ ಹಿನ್ನಲೆಯಲ್ಲಿ ಯುದ್ದ ಸ್ಮಾರಕದಲ್ಲಿ ನಿರ್ಮಿಸಲಾಗಿರುವ ಜ್ಯೋತಿಯಲ್ಲಿ ಈ ಜ್ಯೋತಿಯನ್ನೂ ವಿಲೀನಗೊಳಿಸಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಅಮರ್ ಜವಾನ್ ಜ್ಯೋತಿ ವಿಲೀನ

1971ರಲ್ಲಿ ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ ಅಮರ ಜವಾನ್‌ ಜ್ಯೋತಿಯನ್ನು ಇಂಡಿಯಾ ಗೇಟ್‌ನಲ್ಲಿ ಇರಿಸಲಾಗಿತ್ತು. ಆನಂತರ ಹಲವಾರು ಯುದ್ದಗಳಲ್ಲಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ನೀಡಿದ ಹಲವಾರು ಧೀರ ಯೋಧರ ನೆನಪೂ ಕೂಡಾ ಇದರಲ್ಲೇ ಸಮ್ಮಿಳತವಾಗಿತ್ತು. ಈಗ ಮೋದಿ ನೇತೃತ್ವದ ಸರಕಾರ ಇದನ್ನು ಯುದ್ದ ಸ್ಮಾರಕದಲ್ಲಿ ವಿಲೀನಗೊಳಿಸುವ ನಿರ್ಧಾರ ಕೈಗೊಳ್ಳುವ ಮೂಲಕ ಹುತಾತ್ಮರಿಗೆ ಅವಮಾನ ಮಾಡಿದೆ ಎಂದು ಟೀಕಿಸಿದ್ದಾರೆ.

ಇಂತಹ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ನಮ್ಮ ಇತಿಹಾಸವನ್ನು ತಿರುಚುವಂತಹ ಕಾರ್ಯಕ್ಕೆ ಕೇಂದ್ರ ಸರಕಾರ ಕೈ ಹಾಕಿದೆ ಎಂದು ಬಿಕೆ ಹರಿಪ್ರಸಾದ್‌ ಕಿಡಿಕಾರಿದ್ದಾರೆ.



Read more

[wpas_products keywords=”deal of the day sale today offer all”]