
ಹೌದು, ಗೂಗಲ್ ಡ್ರೈವ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸೆಕ್ಯುರ್ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಮೂಲಕ ನಿಮಗೆ ಯಾವುದೇ ಅಪಾಯಕಾರಿ ಫೈಲ್‌ಗಳ ವಿರುದ್ಧ ರಕ್ಷಣೆ ನೀಡಲಿದೆ. ಈ ಹೊಸ ಫೀಚರ್ಸ್ ಅನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಕ್ಲೌಡ್ ನೆಕ್ಸ್ಟ್ 2021 ರಲ್ಲಿ ಗೂಗಲ್ ಘೋಷಣೆ ಮಾಡಿತ್ತು. ಅದರಂತೆ ಇದೀಗ ಎಲ್ಲ ಬಳಕೆದಾರರಿಗೂ ಲಭ್ಯವಾಗುವಂತೆ ಮಾಡಿದೆ. ಹಾಗಾದ್ರೆ ಗೂಗಲ್ ಡ್ರೈವ್ ಸೇರಿದ ಹೊಸ ಸೆಕ್ಯುರಿಟಿ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಜನರು ಕೆಲವು ಅಜ್ಞಾತ ಸೈಟ್‌ಗಳಿಂದ ಫೈಲ್‌ಗಳನ್ನು ಪಡೆದಿರುತ್ತಾರೆ. ಈ ಫೈಲ್‌ಗಳನ್ನು ಗೂಗಲ್ ಡ್ರೈವ್ ಮೂಲಕ ಶೇರ್ ಮಾಡುವಾಗ ಹೊಸ ಸೆಕ್ಯುರ್ ಫೀಚರ್ಸ್ ಉಪಯುಕ್ತವಾಗಲಿದೆ. ಏಕೆಂದರೆ ಅಜ್ಞಾತ ಸೈಟ್‌ಗಳಿಂದ ಫೈಲ್‌ಗಳು ಅಪಾಯಕಾರಿ ವೈರಸ್‌ಗಳನ್ನು ಹೊಂದಿರುವ ಸಾದ್ಯತೆ ಇರುತ್ತದೆ. ಇದಲ್ಲದೆ ಕೆಲವು ಜನರು ನೇರವಾಗಿ ಜಿ-ಮೇಲ್‌ನಲ್ಲಿ ಗೂಗಲ್ ಡ್ರೈವ್ ಲಿಂಕ್ ಮಾಡಿದ ಫೈಲ್‌ಗಳನ್ನು ಸ್ವೀಕರಿಸುತ್ತಾರೆ. ಇಂತಹ ಅಜ್ಞಾತ ಫೈಲ್‌ಗಳಿಂದ ನಿಮ್ಮ ಡೇಟಾದ ಮೇಲೆ ಆಗಬಹುದಾದ ಪರಿಣಾಮವನ್ನು ತಡೆಯುವುದಕ್ಕೆ ಹೊಸ ಫೀಚರ್ಸ್ ಸಹಾಯ ಮಾಡಲಿದೆ.

ಸದ್ಯ ಈ ಫೀಚರ್ಸ್ ಅನ್ನು ಗೂಗಲ್ ಡ್ರೈವ್‌ನಲ್ಲಿ ಡೀಫಾಲ್ಟ್ ಆಗಿ ಆಕ್ಟಿವ್ ಮಾಡಿರುವುದರಿಂದ ನೀವು ಆನ್ ಮಾಡಬೇಕಾದ ಅಗತ್ಯವಿಲ್ಲ. ನೀವು ಅಪ್ಲಿಕೇಶನ್‌ನಲ್ಲಿ ಅನುಮಾನಾಸ್ಪದ ಅಥವಾ ಅಪಾಯಕಾರಿ ಫೈಲ್ ಅನ್ನು ತೆರೆದರೆ ಗೂಗಲ್ ಡ್ರೈವ್ ಆಟೋಮ್ಯಾಟಿಕ್ ನಿಮಗೆ ಆಲರ್ಟ್ ಸಂದೇಶವನ್ನು ನೀಡಲಿದೆ. ಅದರಲ್ಲೂ ಮಾಲ್ವೇರ್, ಫಿಶಿಂಗ್ ಮತ್ತು ransomware ನಿಂದ ಬಳಕೆದಾರರು ಮತ್ತು ಅವರ ದಾಖಲೆಗಳನ್ನು ಸೆಕ್ಯುರ್ ಮಾಡಲು ಇದು ಸ್ಕ್ರೀನ್ ಮೇಲ್ಭಾಗದಲ್ಲಿ ಹಳದಿ ಬಣ್ಣದ ಎಚ್ಚರಿಕೆಯ ಬ್ಯಾನರ್ ಅನ್ನು ಡಿಸ್‌ಪ್ಲೇ ಮಾಡಲಿದೆ.

ಇದರಿಂದ ಗೂಗಲ್ ಡ್ರೈವ್‌ನಲ್ಲಿ ನೀವು ಯಾವುದೇ ಫೈಲ್, ಫೋಟೋ ಅಥವಾ ಡಾಕ್ಯುಮೆಂಟ್ ಅನ್ನು ತೆರೆಯುತ್ತಿದ್ದರೆ, ಅಪ್ಲಿಕೇಶನ್ ತ್ವರಿತ ಸ್ಕ್ಯಾನ್ ಅನ್ನು ರನ್ ಮಾಡುತ್ತದೆ. ಫೈಲ್ ಅನುಮಾನಾಸ್ಪದವಾಗಿ ಕಂಡರೆ ನಿಮಗೆ ಎಚ್ಚರಿಕೆ ರವಾನಿಸಲಿದೆ. ಗೂಗಲ್ ಸಂಸ್ಥೆಯ ಗೂಗಲ್ ಡಾಕ್ಸ್, ಶೀಟ್‌ಗಳು, ಸ್ಲೈಡ್‌ಗಳು ಮತ್ತು ಡ್ರಾಯಿಂಗ್‌ಗಳಲ್ಲಿ ಈ ಮಾದರಿಯ ಫೀಚರ್ಸ್ ಈಗಾಗಲೇ ಲಭ್ಯವಿದೆ. ಸದ್ಯ ಗೂಗಲ್ ಡ್ರೈವ್‌ನಲ್ಲಿ ಲಭ್ಯವಾಗುತ್ತಿದೆ. ಈ ಫೀಚರ್ಸ್ ಎಲ್ಲರಿಗೂ ಲಭ್ಯವಾಗಲು ಇನ್ನು 15 ದಿನಗಳ ಸಮಯ ತೆಗೆದುಕೊಳ್ಳಬಹುದು.

ಇನ್ನು ಗೂಗಲ್ ಡ್ರೈವ್ ಅಪ್ಲಿಕೇಶನ್ ಗೂಗಲ್‌ನ ಇತರ ಸೇವೆಗಳಿಗೆ ಸಂಪೂರ್ಣವಾಗಿ ಸಂಯೋಜಿಸಲಾಗಿದೆ. ಆದ್ದರಿಂದ ಗೂಗಲ್ ಅಕೌಂಟ್ ಹೊಂದಿರುವ ಜನರು 15GB ಸ್ಟೋರೇಜ್ ಸ್ಪೇಸ್ ಅನ್ನು ಫ್ರಿಯಾಗಿ ದೊರೆಯಲಿದೆ. ಈ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್ ಪ್ರತಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಮೊದಲೇ ಇನ್‌ಸ್ಟಾಲ್ ಆಗಿರಲಿದೆ. ಆದರಿಂದ ಈ ಅಪ್ಲಿಕೇಶನ್ ಬಳಸುವುದು ಸುಲಭವಾಗಿದೆ. ಇದೇ ಕಾ್ಣಕ್ಕೆ ಬಹುತೇಕ ಮಂದಿ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್ ಬಳಸುವಾಗ ಗೂಗಲ್ ಡ್ರೈವ್‌ಗೆ ಹೆಚ್ಚಿನ ಅದ್ಯತೆ ನೀಡುತ್ತಾರೆ.

ಡೆಸ್ಕ್‌ಟಾಪ್‌ನಲ್ಲಿ ಗೂಗಲ್ ಡ್ರೈವ್‌ಗೆ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಹೀಗೆ ಮಾಡಿ!
ಹಂತ:1 ಗೂಗಲ್ ಡ್ರೈವ್‌ಗೆ ಫೈಲ್‌ಗಳನ್ನು ಅಪ್‌ಲೋಡ್ ಮಾಡುವುದನ್ನು ಪ್ರಾರಂಭಿಸಲು, ನಿಮ್ಮ ಕಂಪ್ಯೂಟರ್‌ನಲ್ಲಿ ವೆಬ್ ಬ್ರೌಸರ್ ತೆರೆಯಿರಿ
ಹಂತ:2 ನಂತರ, ಗೂಗಲ್ ಡ್ರೈವ್ ಸೈಟ್ ಅನ್ನು ಪ್ರಾರಂಭಿಸಿ.
ಹಂತ:3 ಗೂಗಲ್ ಖಾತೆಯೊಂದಿಗೆ ಸೈಟ್‌ಗೆ ಸೈನ್ ಇನ್ ಮಾಡಿ
ಹಂತ:4 ನೀವು ಫೈಲ್‌ಗಳನ್ನು ಸೇರಿಸಲು ಬಯಸುವ ಫೋಲ್ಡರ್ ತೆರೆಯಿರಿ
ಹಂತ:5 ಎಡ ಸೈಡ್‌ಬಾರ್‌ನಿಂದ, ಹೊಸ > ಫೈಲ್ ಅಪ್‌ಲೋಡ್ ಆಯ್ಕೆಮಾಡಿ
ಹಂತ:6 ನಿಮ್ಮ ಕಂಪ್ಯೂಟರ್‌ನ ಸ್ಟ್ಯಾಂಡರ್ಡ್ ‘ಓಪನ್’ (Open) ವಿಂಡೋ ತೆರೆಯುತ್ತದೆ
ಹಂತ:7 ಈ ವಿಂಡೋದಲ್ಲಿ, ನೀವು ಕ್ಲೌಡ್‌ಗೆ ಅಪ್‌ಲೋಡ್ ಮಾಡಲು ಬಯಸುವ ಫೈಲ್‌ಗಳನ್ನು ಆಯ್ಕೆಮಾಡಿ
ಹಂತ:8 ಬಹು ಫೈಲ್‌ಗಳನ್ನು ಆಯ್ಕೆ ಮಾಡಲು, ಫೈಲ್‌ಗಳನ್ನು ಕ್ಲಿಕ್ ಮಾಡುವಾಗ ವಿಂಡೋಸ್‌ನಲ್ಲಿ Ctrl ಅಥವಾ Mac ನಲ್ಲಿ ಕಮಾಂಡ್ ಅನ್ನು ಒತ್ತಿ ಹಿಡಿಯಿರಿ
ಹಂತ:9 ನಂತರ, ‘ಓಪನ್’ ಕ್ಲಿಕ್ ಮಾಡಿ
ಹಂತ:10 ಗೂಗಲ್ ಡ್ರೈವ್ ಸೈಟ್‌ನಲ್ಲಿ ಕೆಳಗಿನ ಬಲ ಭಾಗದ ಮೂಲೆಯಲ್ಲಿ, ನಿಮ್ಮ ಎಲ್ಲಾ ಫೈಲ್‌ಗಳನ್ನು ಪಾಪ್-ಅಪ್ ಅಪ್‌ಲೋಡ್ ಮಾಡುವುದನ್ನು ನೀವು ಕಾಣುವಿರಿ.
ಹಂತ:11 ಯಶಸ್ವಿಯಾಗಿ ಅಪ್‌ಲೋಡ್ ಮಾಡಿದ ಫೈಲ್‌ಗಳ ಪಕ್ಕದಲ್ಲಿ ಈ ವಿಭಾಗವು ಹಸಿರು ಚೆಕ್‌ಮಾರ್ಕ್ ಅನ್ನು ಪ್ರದರ್ಶಿಸುತ್ತದೆ.

ಮ್ಯಾಕ್‌ನಲ್ಲಿ ಗೂಗಲ್ ಡ್ರೈವ್‌ಗೆ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಹೀಗೆ ಮಾಡಿ!
ಹಂತ:1 ನಿಮ್ಮ ಐಫೋನ್, ಐಪ್ಯಾಡ್ ಅಥವಾ ಆಂಡ್ರಾಯ್ಡ್ ಫೋನ್‌ನಿಂದ ಗೂಗಲ್ ಡ್ರೈವ್‌ಗೆ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು, ಮೊದಲು ನಿಮ್ಮ ಫೋನ್‌ನಲ್ಲಿ ಗೂಗಲ್ ಡ್ರೈವ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ.
ಹಂತ:2 ನೀವು ಹೊಸ ಫೈಲ್‌ಗಳನ್ನು ಸೇರಿಸಲು ಬಯಸುವ ಫೋಲ್ಡರ್ ತೆರೆಯಿರಿ.
ಹಂತ:3 ತದ ನಂತರ, ಅಪ್ಲಿಕೇಶನ್‌ನ ಕೆಳಗಿನ ಬಲ ಮೂಲೆಯಲ್ಲಿ, ‘+’ ಚಿಹ್ನೆಯನ್ನು ಟ್ಯಾಪ್ ಮಾಡಿ.
ಹಂತ:4 ‘ಹೊಸದನ್ನು ರಚಿಸಿ’ ಮೆನು ತೆರೆಯುತ್ತದೆ. ಇಲ್ಲಿ, ‘ಅಪ್‌ಲೋಡ್’ ಟ್ಯಾಪ್ ಮಾಡಿ
ಹಂತ:5 ನಿಮ್ಮ ಫೋನ್‌ನಲ್ಲಿರುವ ಫೈಲ್ ಮ್ಯಾನೇಜರ್ ತೆರೆಯುತ್ತದೆ ಮತ್ತು ನೀವು ಅಪ್‌ಲೋಡ್ ಮಾಡಲು ಬಯಸುವ ಫೈಲ್ ಅಥವಾ ಫೈಲ್‌ಗಳನ್ನು ಆಯ್ಕೆ ಮಾಡುತ್ತದೆ.
ಹಂತ:6 ಬಹು ಫೈಲ್‌ಗಳನ್ನು ಆಯ್ಕೆ ಮಾಡಲು, ಮೊದಲ ಫೈಲ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ ಮತ್ತು ನಂತರ ನೀವು ಸೇರಿಸಲು ಬಯಸುವ ಯಾವುದೇ ಇತರ ಫೈಲ್‌ಗಳನ್ನು ಟ್ಯಾಪ್ ಮಾಡಿ
ಹಂತ:7 ಮತ್ತು ಡ್ರೈವ್ ಅಪ್ಲಿಕೇಶನ್ ಆಯ್ಕೆಮಾಡಿದ ಫೈಲ್‌ಗಳನ್ನು ನಿಮ್ಮ ಖಾತೆಗೆ ಅಪ್‌ಲೋಡ್ ಮಾಡಲು ಪ್ರಾರಂಭಿಸುತ್ತದೆ.
Read more…
[wpas_products keywords=”smartphones under 15000 6gb ram”]