ಹೈಲೈಟ್ಸ್:
- ಜಲವಿವಾದಗಳನ್ನು ಶೀಘ್ರದಲ್ಲಿ ಪರಿಹರಿಸಲು ಗಂಭೀರ ಯತ್ನ
- ಕೃಷ್ಣಾ ಮತ್ತು ಕಾವೇರಿ ಜಲ ವಿವಾದ ವಿಚಾರವಾಗಿ ಚರ್ಚಿಸಲು ವರ್ಚುವಲ್ ಸಭೆ
- ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
ಕರ್ನಾಟಕ ನೀರಾವರಿ ವಿಚಾರದಲ್ಲಿ ಮಧ್ಯಸ್ತರದ ರಾಜ್ಯವಾಗಿದೆ. ಹೀಗಾಗಿ ನಮ್ಮ ಮೇಲಿರುವ ರಾಜ್ಯಗಳು ಹಾಗೂ ಕೆಳಗಿರುವ ರಾಜ್ಯಗಳು ವಿವಾದ ಸೃಷ್ಟಿ ಮಾಡುತ್ತಿವೆ. ಮಹದಾಯಿ ಟ್ರಿಬ್ಯುನಲ್ ಆದೇಶ ಬಂದರೂ ಸುಪ್ರೀಂನಲ್ಲಿ ವಿವಾದ ಇದೆ. ಕಾವೇರಿ ಜಲಾಯನ ಪ್ರದೇಶದಲ್ಲಿ ಟ್ರಿಬ್ಯುನಲ್ ಆದೇಶ ಆಗಿ ನೋಟಿಫಿಕೆಷನ್ ಆದರೂ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇದೆ.
ಸಂಪುಟ ವಿಸ್ತರಣೆ: ನಾಲ್ಕು ಸ್ಥಾನಗಳ ಭರ್ತಿ ವಿಳಂಬಕ್ಕೆ ಅಸಲಿ ಕಾರಣವೇನು?
ಈ ನಿಟ್ಟಿನಲ್ಲಿ ಇದರ ಪ್ರಗತಿ ಹಾಗೂ ಯಾವ ರೀತಿಯಲ್ಲಿ ಸಮಸ್ಯೆ ಬಗೆಹರಿಸಬೇಕು ಎಂಬ ಸಭೆ ದೆಹಲಿಯಲ್ಲಿ ನಡೆದಿದೆ. ಇದೀಗ ಕೋವಿಡ್ ಕಾರಣದಿಂದಾಗಿ ವರ್ಚುವಲ್ ಮೂಲಕ ಸಭೆ ನಡೆಸುತ್ತಿದ್ದೇವೆ. ಆದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.ಎಲ್ಲ ವಿಚಾರಗಳ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಳ್ಳುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ವೀಕೆಂಡ್ ಕರ್ಫ್ಯೂ ಒತ್ತಡದ ನಿರ್ಧಾರ ಅಲ್ಲ. ಮೂರಲೇ ಅಲೆಯಲ್ಲಿ ಸಂಖ್ಯೆ ಹೆಚ್ಚಿದ್ದರೂ ತೀವ್ರತೆ ಕಡಿಮೆ ಇದೆ. ರಿಕವರಿ ರೇಟ್ ಕೂಡಾ ಹೆಚ್ಚಿದೆ. ಹೀಗಾಗಿ ತಜ್ಞರು ಯಾವ ರೀತಿ ನಿಭಾಯಿಸಬಹುದು ಎಂಬ ಭರವಸೆ ಕೊಟ್ಟಿದ್ದಾರೆ. ಜನರಿಗೆ ತೊಂದರೆ ಆಗಬಾರದು ಎಂದು ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ಮಾಡಲಾಗುವುದು ಎಂದರು.
ಇನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಯಲ್ಲಿ ಪ್ರತಿಕ್ರಿಯೆ ನೀಡಿ, ದೇವೇಗೌಡರು ಹಿರಿಯರು, ಮಾಜಿ ಪ್ರಧಾನಿಗಳು, ಕೋವಿಡ್ ಯಾರನ್ನು ಬಿಟ್ಟಿಲ್ಲ. ಅವರ ಕುಟುಂಬ ಸದಸ್ಯರ ಜೊತೆ ವೈದ್ಯರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.
Read more
[wpas_products keywords=”deal of the day sale today offer all”]