The New Indian Express
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಈ ನಡುವಲ್ಲೇ ಶಾಲೆಗಳ ಪುನರಾರಂಭವಾಗುವ ಸಾಧ್ಯತೆಗಳ ಕುರಿತು ಸಚಿನ ಬಿ.ಸಿ ನಾಗೇಶ್ ಅವರು ಮಂಗಳವಾರ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಕುರಿತು ಚಿಂತನೆಗಳು ನಡೆಯುತ್ತಿವೆ. ಈ ಕುರಿತು ಶುಕ್ರವಾರ ತಜ್ಞರ ಸಮಿತಿ ಜೊತೆಗೆ ಸಭೆ ನಡೆಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ಹೇಳಿದ್ದಾರೆ.
ಇದನ್ನೂ ಓದಿ: ಶಾಲಾ-ಕಾಲೇಜುಗಳು ಧರ್ಮ ಆಚರಿಸುವ ಸ್ಥಳವಲ್ಲ, ತರಗತಿಗಳಲ್ಲಿ ಹಿಜಾಬ್ ಧಾರಣೆ ಅಶಿಸ್ತಾಗುತ್ತದೆ: ಸಚಿವ ಬಿಸಿ. ನಾಗೇಶ್
ತಜ್ಞರ ಸಮಿತಿ ನೀಡುವ ಸಲಹೆಗಳ ಮೇರೆಗೆ ಶಾಲೆ ಪುನರಾರಂಭ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಮಕ್ಕಳ ಮೇಲೆ ಓಮಿಕ್ರಾನ್ ರೂಪಾಂತರದ ಕಡಿಮೆ ಪರಿಣಾಮವನ್ನು ಸೂಚಿಸುವ ದತ್ತಾಂಶದ ಆಧಾರದ ಮೇಲೆ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಕ್ಲಸ್ಟರ್ ಪ್ರಕರಣಗಳು ಹಾಗೂ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಶಾಲೆಗಳಲ್ಲಿ ಆನ್’ಲೈನ್ ತರಗತಿಗಳು ಮುಂದುವರೆಯಲಿವೆ. 3ನೇ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ 0-4 ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರಿದ್ದು, ಇತರ ವಯೋಮಾನದ ಮಕ್ಕಳ ಮೇಲೆ ಕಡಿಮೆ ಪರಿಣಾಮ ಬೀರುತ್ತಿದೆ ಎಂದು ಎಂದು ತಿಳಿಸಿದ್ದಾರೆ.
ಶಾಲೆ ಪುನರಾರಂಭ ಮಾಡಲು ಚಿಂತನೆ ನಡೆಸಿರುವ ಸರ್ಕಾರವು, ಆನ್’ಲೈನ್ ಹಾಗೂ ಆಫ್ ಲೈನ್ ಆಯ್ಕೆಯನ್ನು ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಜ.31ರವರೆಗೆ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆದರೆ, 10, 11 ಮತ್ತು 12ನೇ ತರಗತಿಗಳಿಗೆ ಎಂದಿನಂತೆ ಆಫ್’ಲೈನ್ ತರಗತಿಗಳು ಮುಂದುವರೆಯುತ್ತಿವೆ.
Read more
[wpas_products keywords=”deal of the day”]