Karnataka news paper

ಗಾಯಕ ಚಂದನ್ ಶೆಟ್ಟಿ ಹಂಚಿಕೊಂಡಿದ್ದ ಈ ಫೋಟೋ ಹಿಂದಿನ ಅಸಲಿ ಕಹಾನಿ ಏನು ಗೊತ್ತಾ?


ಹೈಲೈಟ್ಸ್‌:

  • ವಿಭಿನ್ನವಾದ ಲುಕ್‌ನಲ್ಲಿರುವ ಫೋಟೋ ಹಂಚಿಕೊಂಡಿದ್ದ ಚಂದನ್ ಶೆಟ್ಟಿ
  • ನಾಯಕನಾಗಿ ನಟಿಸಲಿರುವ ಚಂದನ್ ಶೆಟ್ಟಿ
  • ಚಂದನ್ ಶೆಟ್ಟಿ ಸಿನಿಮಾಕ್ಕೆ ಸುಜಯ್ ಶಾಸ್ತ್ರಿ ನಿರ್ದೇಶನ

(ಹರೀಶ್‌ ಬಸವರಾಜ್‌)
ತಮ್ಮ ವಿಭಿನ್ನ ಶೈಲಿಯ ಹಾಸ್ಯದ ಮೂಲಕ ಖ್ಯಾತಿ ಗಳಿಸಿರುವ ಸುಜಯ್‌ ಶಾಸ್ತ್ರಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾದ ನಂತರ ಮತ್ತೊಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ರಾಪರ್‌ ಚಂದನ್‌ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ.

ಚಂದನ್‌ ಶೆಟ್ಟಿ ಬಿಗ್‌ ಬಾಸ್‌ ರಿಯಾಲಿಟಿ ಶೋ ವಿಜೇತರಾದ ನಂತರ ಹಲವು ಸಿನಿಮಾಗಳಿಗೆ ನಾಯಕರಾಗುತ್ತಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಅವರು ಸಂಗೀತದತ್ತ ತಮ್ಮ ಗಮನವನ್ನು ಹರಿಸಿದ್ದರು. ಎರಡ್ಮೂರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದರು. ಈಗ ಅವರು ಸಿನಿಮಾ ನಾಯಕರಾಗುವ ಕಾಲ ಬಂದಿದೆ.

ಸೆಗಣಿ ಪಿಂಟೋ ಥರದ ಪಾತ್ರದ ಮೂಲಕ ಜನರನ್ನು ರಂಜಿಸಿದ ಸುಜಯ್‌ ಶಾಸ್ತ್ರಿ ಹಾಸ್ಯದ ವಿಡಿಯೋಗಳನ್ನು ಇತ್ತೀಚೆಗೆ ಹೆಚ್ಚಾಗಿ ಮಾಡುತ್ತಿದ್ದರು. ಬರವಣಿಗೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕೆಲ ದಿನಗಳ ಹಿಂದೆ ಹೊಸ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಈಗ ಎಲ್ಲವೂ ಅಧಿಕೃತವಾಗಿದೆ. ಸುಜಯ್‌ ಶಾಸ್ತ್ರಿ ಮತ್ತು ಚಂದನ್‌ ಶೆಟ್ಟಿ ಸಿನಿಮಾ ಮೂಲಕ ಒಂದಾಗುತ್ತಿದ್ದಾರೆ.

‘ಲಕ ಲಕ ಲ್ಯಾಂಬೋರ್ಗಿನಿ’ ಹಾಡಿನ ಮೂಲಕ ಮೋಡಿ ಮಾಡಿದ ರಚಿತಾ ರಾಮ್‌ & ಚಂದನ್ ಶೆಟ್ಟಿ

‘ಹೌದು, ನಾನು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಸಿಕ್ಕಾಪಟ್ಟೆ ಹಾಸ್ಯವಿರುವ ಒಳ್ಳೆ ಕಥೆ ಇದು. ಸಿನಿಮಾದ ಬಗ್ಗೆ ಹೆಚ್ಚಿನ ವಿವರವನ್ನು ಈಗಲೇ ಏನೂ ಹೇಳಲಾಗುವುದಿಲ್ಲ. ಆದರೆ ಚಂದನ್‌ ಶೆಟ್ಟಿ ನಟಿಸುತ್ತಿದ್ದಾರೆ. ಇಷ್ಟು ಮಾಹಿತಿಯನ್ನು ಮಾತ್ರ ಈಗ ನೀಡುತ್ತಿದ್ದೇನೆ’ ಎಂದು ಸುಜಯ್‌ ಶಾಸ್ತ್ರಿ ಹೇಳಿದರು.

ವಿಶೇಷ ಎಂದರೆ ಈ ಸಿನಿಮಾ ರೆಟ್ರೋ ಸ್ಟೈಲ್‌ನಲ್ಲಿರುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಚಂದನ್‌ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೊ ಒಂದು ಈ ವಿಷಯವನ್ನು ಖಚಿತಪಡಿಸಿದೆ. ಚಂದನ್‌ ಶೆಟ್ಟಿ ಮೂಲತಃ ಸಂಗೀತ ಕ್ಷೇತ್ರದವರಾಗಿದ್ದರೂ ಈ ಸಿನಿಮಾ ಸಂಗೀತದ ಕುರಿತಾಗಿಲ್ಲ. ಇದಕ್ಕೆ ಚಂದನ್‌ ಶೆಟ್ಟಿ ಸಂಗೀತ ಸಂಯೋಜನೆಯನ್ನೂ ಮಾಡುತ್ತಿಲ್ಲ.

ಮನೆಯಲ್ಲಿಯೇ ಕೂತು ಇನ್ನೇನು ಹತಾಶೆ ಹಂತವನ್ನು ತಲುಪುತ್ತೇವೆ ಎಂದಾಗ ‘ರಾಜ ರಾಣಿ’ ಆಫರ್ ಬಂತು: ಚಂದನ್ ಶೆಟ್ಟಿ

ಫೆಬ್ರವರಿ ಮೊದಲ ವಾರದಲ್ಲಿ ಸಿನಿಮಾದ ಮುಹೂರ್ತ ಆಚರಿಸಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ ಮತ್ತು ಅಂದು ಎಲ್ಲ ವಿವರವನ್ನೂ ನಿರ್ದೇಶಕರು ನೀಡಲಿದ್ದಾರೆ.

ಇದೊಂದು ಸಂಪೂರ್ಣ ಹಾಸ್ಯಮಯ ಸಿನಿಮಾ. ಕಥೆ ಯಾರದ್ದು, ತಂತ್ರಜ್ಞರು ಯಾರಾರ‍ಯರು, ನಾಯಕಿ ಯಾರು ಇತ್ಯಾದಿ ಎಲ್ಲ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುತ್ತೇನೆ ಎಂದಿದ್ದಾರೆ ನಿರ್ದೇಶಕ ಸುಜಯ್ ಶಾಸ್ತ್ರಿ



Read more

[wpas_products keywords=”deal of the day party wear dress for women stylish indian”]