News
ದೇಶದ ಸರ್ಕಾರಿ ತೈಲ ಕಂಪನಿಗಳು ಇಂದು ಶನಿವಾರ (ಜನವರಿ 22) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಹೊಸ ವರ್ಷದ ದಿನದಂದು ಕೂಡ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ದೇಶದ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ನವೆಂಬರ್ 4ರಿಂದ ಇಂಧನ ದರ ಸ್ಥಿರವಾಗಿದೆ.
ಜಾರ್ಖಂಡ್ ಸರ್ಕಾರ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ಬೆಲೆಯಲ್ಲಿ 25 ರೂ. ಕಡಿತಗೊಳಿಸುವುದಾಗಿ ಘೋಷಿಸಿದೆ. ಇದು ಜನವರಿ 26ರಿಂದ ಜಾರಿಗೆ ಬರಲಿದೆ. ಉಳಿದಂತೆ ಎಲ್ಲೆಡೆ ಇಂಧನ ದರ ಸ್ಥಿರವಾಗಿದ್ದು, ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಂದು ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿರುವುದರಿಂದ ಬರೋಬ್ಬರಿ ಎರಡು ತಿಂಗಳುಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾರತದಲ್ಲಿ ಭಾರೀ ಏರಿಕೆ ಕಾಣುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಜಾಗತಿಕ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ 88 ಡಾಲರ್ ಆಗಿದೆ. ಬ್ರೆಂಟ್ ಕಚ್ಚಾ ಫ್ಯೂಚರ್ಸ್ 87 ಸೆಂಟ್ಸ್ ಅಥವಾ ಶೇ.1ರಷ್ಟು ಮೇಲೇರಿ, 0543 GMTಯಲ್ಲಿ ಪ್ರತಿ ಬ್ಯಾರೆಲ್ಗೆ 88.38 ಡಾಲರ್ನಂತೆ ವ್ಯವಹಾರ ನಡೆಸುತ್ತಿತ್ತು. ಈ ಹಿಂದಿನ ಸೆಷನ್ಗೆ ಹೋಲಿಸಿದರೆ ಶೇ.1.2ರಷ್ಟು ಹೆಚ್ಚಳ ಆಗಿತ್ತು.
ಸಾಮಾನ್ಯ ಹಣದುಬ್ಬರದ ಹಿನ್ನೆಲೆಯಿಂದಾಗಿ ಭಾರತದಲ್ಲಿ ತೈಲ ಬೆಲೆಗೆ ಇನ್ನಷ್ಟು ಉತ್ತೇಜನ ನೀಡಬಹುದು. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣ ಆಗುತ್ತದೆ. ಅಂದಹಾಗೆ ಕಳೆದ ವರ್ಷದ ನವೆಂಬರ್ನಲ್ಲಿ ಸರ್ಕಾರದಿಂದ ತೈಲ ಬೆಲೆಯ ಅಬಕಾರಿ ಸುಂಕ ಇಳಿಕೆ ಮಾಡಿದ ಮೇಲೆ ಬೆಲೆ ಸ್ಥಿರವಾಗಿಯೇ ಇದೆ. ಆದರೆ ಹೊಸ ವರ್ಷದ ಶುರುವಿನಿಂದಲೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ಒಂದು ವರದಿಗಳ ಪ್ರಕಾರ, ಕಳೆದ ನಾಲ್ಕು ವಾರದಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ.
ಕೆಲ ದಿನಗಳ ಹಿಂದೆ ದೆಹಲಿಯ ಆಪ್ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಅನ್ನು ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಹಾಗಾಗಿ ಅಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 8 ರೂ. ಕಡಿಮೆಯಾಗಿದೆ. ಆದರೆ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕಳೆದ ನವೆಂಬರ್ ತಿಂಗಳ ದೀಪಾವಳಿ ಸಂದರ್ಭದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾದ ಅನಂತರ ದೇಶದಲ್ಲಿ ಇಂಧನ ದರದಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಜ. 22: 100.58 ರೂ.
ಜ. 21: 100.58 ರೂ.
ಜ. 20: 100.58 ರೂ.
ಜ. 19: 100.58 ರೂ.
ಜ. 18: 100.58 ರೂ.
ಡೀಸೆಲ್ (ಪ್ರತಿ ಲೀಟರ್)
ಜ. 22: 85.01 ರೂ.
ಜ. 21: 85.01 ರೂ.
ಜ. 20: 85.01 ರೂ.
ಜ. 19: 85.01 ರೂ.
ಜ. 18: 85.01 ರೂ.

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಜ. 22: 95.41 ರೂ.
ಜ. 21: 95.41 ರೂ.
ಜ. 20: 95.41 ರೂ.
ಜ. 19: 95.41 ರೂ.
ಜ. 18: 95.41 ರೂ.
ಡೀಸೆಲ್ (ಪ್ರತಿ ಲೀಟರ್)
ಜ. 22: 86.67 ರೂ.
ಜ. 21: 86.67 ರೂ.
ಜ. 20: 86.67 ರೂ.
ಜ. 19: 86.67 ರೂ.
ಜ. 18: 86.67 ರೂ.

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಜ. 22: 109.98 ರೂ.
ಜ. 21: 109.98 ರೂ.
ಜ. 20: 109.98 ರೂ.
ಜ. 19: 109.98 ರೂ.
ಜ. 18: 109.98 ರೂ.
ಡೀಸೆಲ್ (ಪ್ರತಿ ಲೀಟರ್)
ಜ. 22: 94.14 ರೂ.
ಜ. 21: 94.14 ರೂ.
ಜ. 20: 94.14 ರೂ.
ಜ. 19: 94.14 ರೂ.
ಜ. 18: 94.14 ರೂ.

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಜ. 22: 101.40 ರೂ.
ಜ. 21: 101.40 ರೂ.
ಜ. 20: 101.40 ರೂ.
ಜ. 19: 101.40 ರೂ.
ಜ. 18: 101.40 ರೂ.
ಡೀಸೆಲ್ (ಪ್ರತಿ ಲೀಟರ್)
ಜ. 22: 91.43 ರೂ.
ಜ. 21: 91.43 ರೂ.
ಜ. 20: 91.43 ರೂ.
ಜ. 19: 91.43 ರೂ.
ಜ. 18: 91.43 ರೂ.

ಹೈದ್ರಾಬಾದ್‌ನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಜ. 22: 108.20 ರೂ.
ಜ. 21: 108.20 ರೂ.
ಜ. 20: 108.20 ರೂ.
ಜ. 19: 108.20 ರೂ.
ಜ. 18: 108.20 ರೂ.
ಡೀಸೆಲ್ ದರ (ಪ್ರತಿ ಲೀಟರ್)
ಜ. 22: 94.62 ರೂ.
ಜ. 21: 94.62 ರೂ.
ಜ. 20: 94.62 ರೂ.
ಜ. 19: 94.62 ರೂ.
ಜ. 18: 94.62 ರೂ.

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಕಳೆದ ತಿಂಗಳು ಯುಎಸ್ನ ಬೆಂಚ್ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ಗೆ 70 ಡಾಲರ್ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್ಗೆ 72 ರೂ. ಕಡಿಮೆಯಾಗಿತ್ತು. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
English summary
Petrol And Diesel Prices On 22th January 2022: Check Rates In Your City
Domestic Petrol and Diesel Price Unchanged on Saturday (January 22) in Many cities of across India. Latest Rates Here.
Story first published: Saturday, January 22, 2022, 9:26 [IST]
Read more…
[wpas_products keywords=”deal of the day”]