Karnataka news paper

ಬೆಂಗಳೂರು ಕೊಲೆ ಯತ್ನ ಕೇಸ್ : ಕತ್ತು ಹಿಸುಕಿದಕ್ಕೆ ಸಾಕ್ಷ್ಯ ಒದಗಿಸದ ಪತ್ನಿ, ಪತಿಗೆ ಜಾಮೀನು


ಹೈಲೈಟ್ಸ್‌:

  • ಪತ್ನಿಯ ಕತ್ತು ಹಿಸುಕಿ ಪತಿಯಿಂದ ಕೊಲೆ ಯತ್ನ ಕೇಸ್
  • ಪತಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್
  • ಕತ್ತು ಹಿಸುಕಿದಕ್ಕೆ ಸಾಕ್ಷ್ಯ ಒದಗಿಸದ ಪತ್ನಿ

ಬೆಂಗಳೂರು : ವರದಕ್ಷಿಣೆಗಾಗಿ ಪೀಡಿಸಿ ಕತ್ತು ಹಿಸುಕಿ ಪತ್ನಿಯ ಕೊಲೆಗೆ ಪ್ರಯತ್ನಿಸಿದ ಆರೋಪದಲ್ಲಿ ಜೈಲುಪಾಲಾದ ವ್ಯಕ್ತಿಗೆ ಹೈಕೋರ್ಟ್‌ ಜಾಮೀನು ನೀಡಿದೆ. ನ್ಯಾಯಾಂಗ ಬಂಧನದಲ್ಲಿದ್ದ ಲಗ್ಗೆರೆ ನಿವಾಸಿ ಎ.ಮಹೇಶ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

”ಆರೋಪಿ ಎರಡು ಲಕ್ಷ ರೂ.ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಪ್ರಾಸಿಕ್ಯೂಷನ್‌ ಸಾಕ್ಷ್ಯವನ್ನು ತಿರುಚಲು ಪ್ರಯತ್ನಿಸಬಾರದು. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಪ್ರಕರಣ ಇತ್ಯರ್ಥವಾಗುವರೆಗೂ ಅನುಮತಿ ಪಡೆಯದೇ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಹೋಗುವಂತಿಲ್ಲ”ಎಂದು ನ್ಯಾಯಪೀಠ ಷರತ್ತುಗಳನ್ನು ವಿಧಿಸಿದೆ.

”ಆರೋಪಿಯು ದೂರುದಾರಳ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದನೆಂದು ಆರೋಪಿಸಲಾಗಿದೆ. ಆದರೆ, ಕತ್ತಿನ ಭಾಗದಲ್ಲಿ ಗಾಯವಾಗಿರುವುದನ್ನು ದೃಢಪಡಿಸುವ ವೈದ್ಯಕೀಯ ಪ್ರಮಾಣಪತ್ರವನ್ನು ಪತ್ನಿ ಸಲ್ಲಿಸಿಲ್ಲ. ಆಕೆಯ ಕುತ್ತಿಗೆಯಲ್ಲಿ ಗಾಯಗಳು ಸಹ ಇಲ್ಲ. ಪರಿಸ್ಥಿತಿ ಹೀಗಿರುವಾಗ ಆರೋಪಿ ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲಿದ್ದಾನೆ. ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಸಾಕ್ಷಿಗಳ ಹೇಳಿಕೆಯೂ ದಾಖಲಾಗಿದೆ. ಹಾಗಾಗಿ ಆತ ಜಾಮೀನು ಪಡೆಯಲು ಅರ್ಹನಾಗಿದ್ದಾನೆ” ಎಂದು ಹೈಕೋರ್ಟ್‌ ಹೇಳಿದೆ.

ದಂಪತಿಗಳ ‘ಅಹಂ’ಗೆ ಮಕ್ಕಳ ಅಮೂಲ್ಯ ಬಾಲ್ಯ ಬಲಿ : ಕರ್ನಾಟಕ ಹೈಕೋರ್ಟ್‌

ವರದಕ್ಷಿಣೆಗಾಗಿ ನನಗೆ ಪತಿ ಎ.ಮಹೇಶ್‌ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆಂದು ಆರೋಪಿಸಿ ಪತ್ನಿ ನಗರದ ನಂದಿನಿ ಲೇಔಟ್‌ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೌಟುಂಬಿಕ ದೌರ್ಜನ್ಯ, ಕೊಲೆಯತ್ನ, ಕೊಲೆ ಬೆದರಿಕೆ ಮತ್ತು ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿ, ಮಹೇಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.



Read more

[wpas_products keywords=”deal of the day sale today offer all”]