Online Desk
ನವದೆಹಲಿ: ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವುದನ್ನು ಮತ್ತೆ ಚೀನಾ ಮುಂದುವರಿಸಿದೆ. ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಮತ್ತೆ ಉದ್ವಿಗ್ನತೆ ಸೃಷ್ಟಿಸುವ ಕಾರ್ಯಕ್ಕೆ ಚೀನಾ ಕೈ ಹಾಕಿದೆ.
ಇದನ್ನೂ ಓದಿ: 2021ರಲ್ಲಿ ಚೀನಾ ಜನಸಂಖ್ಯೆ ಅಲ್ಪ ಏರಿಕೆ; ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ
ಚೀನಾ ಪ್ಯಾಂಗಾಂಗ್ ತ್ಸೋ ಸರೋವರದ ದಡದಲ್ಲಿ ಸೇತುವೆಯನ್ನು ನಿರ್ಮಾಣ ಮಾಡುತ್ತಿದೆ. ಈ ಸೇತುವೆ 400 ಮೀಟರ್‌ಗಿಂತಲೂ ಹೆಚ್ಚು ಉದ್ದವಾಗಿದೆ. ಈ ಬ್ರಿಡ್ಜ್ ಪೂರ್ಣಗೊಂಡ ಬಳಿಕ ಈ ಪ್ರದೇಶದಲ್ಲಿ ಸೇನೆ ನಿಯೋಜನೆಗೆ ಚೀನಾಗೆ ಹೆಚ್ಚಿನ ಅನುಕೂಲವಾಗಲಿದೆ.
ಇದನ್ನೂ ಓದಿ: ಲಡಾಖ್ ಉದ್ವಿಗ್ನತೆ ಹೊರತಾಗಿಯೂ 2021 ರಲ್ಲಿ ಭಾರತ-ಚೀನಾ ನಡುವೆ ವ್ಯಾಪಾರ ದಾಖಲೆಯ 125 ಶತಕೋಟಿ ಡಾಲರ್ ಗೆ ಹೆಚ್ಚಳ
ಇದು ಪೂರ್ವ ಲಡಾಖ್‌ನ ಸಮೀಪವಿರುವ ಪ್ಯಾಂಗೊಂಗ್ ತ್ಸೋ ಸರೋವರವನ್ನು ಹೊಂದಿರುವ ಈ ಪ್ರದೇಶ, ಭಾರತ ಹಾಗೂ ಚೀನಾದ ಮಧ್ಯೆ ಬಿಕ್ಕಟ್ಟಿಗೆ ಕಾರಣವಾಗಿದೆ. ಸೇತುವೆಯು 8 ಮೀಟರ್ ಅಗಲವಿದ್ದು, ಪ್ಯಾಂಗೊಂಗ್‌ನ ಉತ್ತರ ದಂಡೆಯಲ್ಲಿರುವ ಚೀನಾದ ಸೈನ್ಯದ ಮೈದಾನದ ದಕ್ಷಿಣಕ್ಕೆ ಈ ಸೇತುವೆ ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ: ತೆರಿಗೆ ವಂಚನೆ, ನಿಯಮಗಳ ಉಲ್ಲಂಘನೆ: ಶಿಯೋಮಿ, ಒಪ್ಪೊ ಸೇರಿ ಚೀನಾ ಮೊಬೈಲ್ ಕಂಪನಿಗಳಿಗೆ ಸಾವಿರ ಕೋಟಿ ರೂ. ದಂಡ!
ಜನವರಿ 16ರ ಸ್ಯಾಟಲೈಟ್ ಚಿತ್ರಗಳು ಸೇತುವೆ ನಿರ್ಮಾಣ ಕಾರ್ಯ ಸ್ಥಳದಲ್ಲಿ ಕಾರ್ಮಿಕರು ಹಾಗೂ ಭಾರಿ ಪ್ರಮಾಣದ ಕ್ರೇನ್ ಗಳು ಗೋಚರಿಸಿವೆ. ಕಾಮಗಾರಿಯ ವೇಗ ಇನ್ನೇನು ಕೆಲವೇ ತಿಂಗಳಲ್ಲಿ ಸೇತುವೆ ಸಿದ್ಧಗೊಳ್ಳುವ ಸಾಧ್ಯತೆ ಇದ್ದು, ಭಾರತದ ಕಳವಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಫೆಬ್ರವರಿಯಲ್ಲಿ ಒಲಿಂಪಿಕ್ ಕ್ರೀಡಾಕೂಟ: ಚೀನಾದಲ್ಲಿ ಪ್ರತಿ ಸೆಕೆಂಡ್ ಗೆ 583 ಮಂದಿಗೆ ಕೋವಿಡ್ ಪರೀಕ್ಷೆ!
Read more
[wpas_products keywords=”deal of the day”]