Karnataka news paper

ಆ್ಯಪ್ ಆಧಾರಿತ ವಂಚನೆ ಪ್ರಕರಣ: ಪಿಎಂಎಲ್‌ ಕಾಯ್ದೆಯಡಿ ಇಡಿಯಿಂದ ಆರೋಪಿ ಬಂಧನ


The New Indian Express

ಬೆಂಗಳೂರು: ಪವರ್ ಬ್ಯಾಂಕ್ ಮತ್ತಿತರ ವಂಚಕ ಮೊಬೈಲ್ ಆ್ಯಪ್ ಮೂಲಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) 2002 ರ ಅಡಿಯಲ್ಲಿ  ಅನಸ್ ಅಹಮದ್ ಎಂಬ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. 

ಪವರ್ ಬ್ಯಾಂಕ್ ಮತ್ತು ಇತರ ವಂಚನೆಯ ಆ್ಯಪ್ ಗಳ  ಮೂಲಕ ಸಾರ್ವಜನಿಕರು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದರೆ ಪ್ರತಿದಿನ ಅಥವಾ ವಾರಕ್ಕೊಮ್ಮೆ ಬಡ್ಡಿಯನ್ನು ಪಾವತಿಸುವುದಾಗಿ ಆರೋಪಿ ಪ್ರೇರೆಪಿಸುತ್ತಿದ್ದ. ಆತನ ಕಾರ್ಯಾಚರಣೆ ಬಗ್ಗೆ ಇಡಿ ಪ್ರಾಥಮಿಕ ತನಿಖೆ ಆರಂಭಿಸಿತ್ತು.

ಆರೋಪಿ ಸಾರ್ವಜನಿಕರಿಂದ ಭಾರಿ ಮೊತ್ತದ ಹಣವನ್ನು ಸಂಗ್ರಹಿಸಿ ತಮ್ಮ ಉದ್ದೇಶಿತ ವ್ಯವಹಾರವನ್ನು ಬಂದ್ ಮಾಡಿ ತಲೆ ಮರೆಸಿಕೊಳ್ಳುತ್ತಿದ್ದ. ಆತ ಬಡ್ಡಿ ಪಾವತಿಸಿಲ್ಲ ಅಥವಾ ಸಾರ್ವಜನಿಕರಿಗೆ ಅಸಲು ಮೊತ್ತವನ್ನು ಹಿಂದಿರುಗಿಸಿಲ್ಲ ಮತ್ತು ಸಾರ್ವಜನಿಕರಿಂದ ಮಾಡಿದ ಹೂಡಿಕೆಯನ್ನು ತಡೆಹಿಡಿಯಲಾಗಿದೆ, ಇದು ವಂಚನೆಗೆ ಕಾರಣವಾಗಿದೆ ಎಂದು ಕೇಂದ್ರೀಯ ಸಂಸ್ಥೆ ಗುರುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮೊಬೈಲ್ ಆ್ಯಪ್ ಸಾಲ ಹೆಸರಿನಲ್ಲಿ ವಂಚನೆ: ಇಬ್ಬರ ಬಂಧನ

ಇಡಿ  ಪ್ರಕಾರ, ಅಹ್ಮದ್  ಹೆಚ್ ಅಂಡ್ ಎಸ್ ವೆಂಚರ್ಸ್ ಇಂಕ್ ಮತ್ತು ಕ್ಲಿಫೋರ್ಡ್ ವೆಂಚರ್ಸ್ ಸಂಸ್ಥೆಗಳಲ್ಲಿ ಪಾಲುದಾರನಾಗಿದ್ದಾನೆ.  ಸಾರ್ವಜನಿಕರಿಂದ ಸರಿಸುಮಾರು 84 ಕೋಟಿ ರೂ.ಗಳನ್ನು ಸಂಗ್ರಹಿಸಲು ಈ ಸಂಸ್ಥೆಗಳು ಕಾರಣವಾಗಿವೆ.  ಅಹ್ಮದ್ ಚೀನಾದ ಸಂಪರ್ಕವನ್ನು ಹೊಂದಿದ್ದಾನೆ ಮತ್ತು ಇಡೀ ದಂಧೆಯ ಮಾಸ್ಟರ್‌ಮೈಂಡ್ ಎಂದು ಶಂಕಿಸಲಾಗಿದೆ ಎಂದು ಇಡಿ ಹೇಳಿದೆ.

ಪ್ರಸ್ತುತ, ಅಹ್ಮದ್ ನ್ಯಾಯಾಂಗ ಬಂಧನದಲ್ಲಿದ್ದಾನೆ ಮತ್ತು  ಚೆನ್ನೈನ ಸಿಬಿಐ, ಸಿಐಡಿ ಬುಕ್ ಮಾಡಿದ ಪೂರ್ವಾಪರ ಅಪರಾಧ ಪ್ರಕರಣಗಳಲ್ಲಿ  ಚೆನ್ನೈನ ಪುಝಲ್ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ. ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಮತ್ತು ಪಿಎಂಎಲ್‌ಎ ಪ್ರಕರಣಗಳ ವಿಶೇಷ ನ್ಯಾಯಾಧೀಶರು, ವಂಚನೆಯ ಬಗ್ಗೆ ವಿಚಾರಣೆ ನಡೆಸಲು ಜನವರಿ 20 ರಂದು  ಆರು ದಿನಗಳ ಕಾಲ ಇಡಿ ಕಸ್ಟಡಿಗೆ ಅಹ್ಮದ್‌ ನನ್ನು ಒಪ್ಪಿಸಿದ್ದಾರೆ. 



Read more

[wpas_products keywords=”deal of the day”]