Karnataka news paper

ಕೋವಿಡ್ ಪರೀಕ್ಷೆ ಹೆಚ್ಚಿಸುವಂತೆ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಸೂಚನೆ


ANI

ನವದೆಹಲಿ: ನಿರ್ದಿಷ್ಟ ಪ್ರದೇಶಗಳಲ್ಲಿ ಕೋವಿಡ್ ಪಾಸಿಟಿವಿಟಿ  ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.

ಓಮಿಕ್ರಾನ್ ಕಾರಣದಿಂದ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಪರೀಕ್ಷೆ ಕುಸಿತವಾಗಿರುವುದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್ ) ಪೋರ್ಟಲ್ ನಲ್ಲಿನ ಮಾಹಿತಿಯಿಂದ ತಿಳಿದುಬಂದಿದೆ ಎಂದು ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಆರ್ತಿ ಅಹುಜಾ ಪತ್ರದಲ್ಲಿ ತಿಳಿಸಿದ್ದಾರೆ. 

ಕೋವಿಡ್ ಪ್ರಕರಣಗಳನ್ನು ಬೇಗನೆ ಪತ್ತೆ ಹಚ್ಚಿ, ತ್ವರಿತಗತಿಯಲ್ಲಿ ಐಸೋಲೇಷನ್ ಹಾಗೂ ಆರೈಕೆ ಮಾಡುವುದಕ್ಕಾಗಿ ಕೋವಿಡ್  ಪರೀಕ್ಷೆಯ ಮೂಲ ಉದ್ದೇಶವಾಗಿದ್ದು, ಸಾಂಕ್ರಾಮಿಕ ನಿರ್ವಹಣೆಯಾಗಿ ಇದು ಪ್ರಮುಖ ಕಾರ್ಯತಂತ್ರವಾಗಿದೆ ಎಂದು ಅಹುಜಾ ಹೇಳಿದ್ದಾರೆ. 

ಇದನ್ನೂ ಓದಿ: 50 ಲಕ್ಷಕ್ಕೂ ಅಧಿಕ ಆರೋಗ್ಯ, ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಿಕೆ: ಮನ್ಸುಖ್ ಮಾಂಡವೀಯಾ

ಹೊಸ ಕ್ಲಸ್ಟರ್‌ಗಳು ಮತ್ತು ಸೋಂಕಿನ ಹೊಸ ಹಾಟ್‌ಸ್ಪಾಟ್‌ಗಳನ್ನು ಗುರುತಿಸುವುದರಿಂದ ಕಂಟೈನ್‌ಮೆಂಟ್ ವಲಯಗಳ ಸ್ಥಾಪನೆ, ಸಂಪರ್ಕ ಪತ್ತೆಹಚ್ಚುವಿಕೆ, ಕ್ವಾರಂಟೈನ್, ಪ್ರತ್ಯೇಕತೆ ಮತ್ತು ನಿಯಮಗಳ ಪಾಲನೆಯಂತಹ ತಕ್ಷಣದ ಕ್ರಮವನ್ನು ಸುಲಭಗೊಳಿಸುತ್ತದೆ. ಇದು ರಾಜ್ಯ ಮತ್ತು ಜಿಲ್ಲಾಡಳಿತಕ್ಕೆ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ, ರೋಗಲಕ್ಷಣ ಹೊಂದಿರುವರು ಮತ್ತು ಲ್ಯಾಬೋರೇಟರಿಂದ ದೃಢೀಕರಿಸಿದ ಅಪಾಯದಲ್ಲಿರುವ ಸಂಪರ್ಕಿತರನ್ನು ಪರೀಕ್ಷಿಸಬೇಕು, ಪಾಸಿಟಿವಿಟಿ ಪ್ರಕರಣಗಳ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. 



Read more

[wpas_products keywords=”deal of the day”]