ಹೈಲೈಟ್ಸ್:
- ‘ಪುಷ್ಪ’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ
- ನಿಯಮ ಉಲ್ಲಂಘನೆ ಮಾಡಿರುವ ಚಿತ್ರತಂಡ & ಆಯೋಜಕರು
- ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು
ಫ್ಯಾನ್ಸ್ ಮೀಟ್‌ನಲ್ಲಿ ಗಲಾಟೆ! ಅಲ್ಲು ಅರ್ಜುನ್ ಬೇಸರ
ಅಲ್ಲು ಅರ್ಜುನ್ ಅವರ ಅಭಿಮಾನಿಗಳಿಗಾಗಿ ಸೋಮವಾರ (ಡಿ.13) ಹೈದರಾಬಾದ್‌ನ ನಾಗಾರ್ಜುನ ಕನ್ವೇನ್ಷನ್ ಹಾಲ್‌ನಲ್ಲಿ ಫ್ಯಾನ್ಸ್ ಮೀಟ್ ಏರ್ಪಡಿಸಲಾಗಿತ್ತು. ಅಲ್ಲಿ ಸುಮಾರು 200 ಜನರಿಗೆ ಮಾತ್ರ ಅವಕಾಶಕ್ಕೆ ಅನುಮತಿಯನ್ನು ಪಡೆಯಲಾಗಿತ್ತು. ಆದರೆ, 2 ಸಾವಿರಕ್ಕೂ ಅಧಿಕ ಮಂದಿ ಅಲ್ಲಿ ಜಮಾಯಿಸಿದ್ದರು. ಜೊತೆಗೆ ಗಲಾಟೆ ಶುರುವಾಗಿ, ನಾಗಾರ್ಜುನ ಕನ್ವೇನ್ಷನ್ ಹಾಲ್‌ನ ಗಾಜಿನ ಬಾಗಿಲು ಪುಡಿಪುಡಿ ಆಯಿತು. ಜೊತೆಗೆ ಒಂದಷ್ಟು ಮಂದಿ ಅಲ್ಲು ಫ್ಯಾನ್ಸ್‌ಗೆ ಗಾಯಗಳಾದವು. ಅಲ್ಲು ಅರ್ಜುನ್ ಅಲ್ಲಿಗೆ ಬರುವ ವೇಳೆಗೆ ಇಷ್ಟೆಲ್ಲ ರಾದ್ದಾಂತ ಆಗಿಹೋಗಿತ್ತು. ಇದನ್ನೆಲ್ಲ ಕಂಡ ಅಲ್ಲು ಅರ್ಜುನ್, ಕೋಪದಿಂದ ಮರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಅಭಿಮಾನಿಗಳಿಗೆ ಎಮೋಷನಲ್ ಪತ್ರ ಬರೆದ ಅಲ್ಲು ಅರ್ಜುನ್
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿರುವ ಅಲ್ಲು ಅರ್ಜುನ್, ‘ನನ್ನ ಫ್ಯಾನ್ಸ್ ಮೀಟ್ ಕಾರ್ಯಕ್ರಮದಲ್ಲಿ ದುರಾದೃಷ್ಟವಶಾತ್ ನಡೆದ ಅವಘಡದಲ್ಲಿ ಕೆಲ ಅಭಿಮಾನಿಗಳು ಗಾಯಗೊಂಡಿದ್ದಾರೆ. ನನ್ನ ತಂಡ ಇದರ ಬಗ್ಗೆ ಕೆಲಸ ಮಾಡುತ್ತಿದೆ. ಅಗತ್ಯ ನೆರವುಗಳನ್ನು ನೀಡುತ್ತ, ಪ್ರತಿಕ್ಷಣದ ಬೆಳವಣಿಗೆಗಳನ್ನು ನನಗೆ ತಿಳಿಸುತ್ತಿದೆ. ಇನ್ಮುಂದೆ ಇಂಥ ಘಟನೆಗಳು ನಡೆಯದಂತೆ ನಾನು ತುಂಬ ಎಚ್ಚರಿಕೆ ವಹಿಸಲಿದ್ದೇನೆ. ನಿಮ್ಮ ಪ್ರೀತಿ ನನ್ನ ಬಹುದೊಡ್ಡ ಆಸ್ತಿಯಾಗಿದೆ. ಅದನ್ನು ನಾನು ಯಾವತ್ತೂ ಕೂಡ ಲಘುವಾಗಿ ತೆಗೆದುಕೊಳ್ಳುವುದಿಲ್ಲ’ ಎಂದಿದ್ದಾರೆ.
Pushpa: ‘ಹೂ ಅಂತೀಯಾ ಮಾವ..’ ಎನ್ನುತ್ತ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ಸಮಂತಾ
ಆಯೋಜಕರ ವಿರುದ್ಧ ಕೇಸ್ ದಾಖಲು!
ಚಿತ್ರದ ನಿರ್ಮಾಪಕರು ಯೂಸುಫ್‌ಗಢದ ಪೊಲೀಸ್ ಮೈದಾನದಲ್ಲಿ ಪ್ರೀ-ರಿಲೀಸ್ ಇವೆಂಟ್ ಮಾಡುವುದಕ್ಕಾಗಿ ಅನುಮತಿ ಪಡೆದುಕೊಂಡಿದ್ದರು. ಕಾರ್ಯಕ್ರಮಕ್ಕೆ 5000 ಜನ ಸೇರುತ್ತಾರೆ ಎಂದು ಮಾಹಿತಿ ನೀಡಿದ್ದರು. ಆದರೆ, 20 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು ಎಂಬ ಮಾಹಿತಿ ಸಿಕ್ಕಿದೆ. ಇದು ನಿಯಮಗಳ ಉಲ್ಲಂಘನೆ ಆಗಿದ್ದು, ಪ್ರಕರಣ ದಾಖಲಾಗಿದೆ. ಅಲ್ಲದೆ, ಫ್ಯಾನ್ಸ್ ಮೀಟ್‌ಗೂ ಕೂಡ ನಿಯಮ ಉಲ್ಲಂಘನೆ ಆಗಿದ್ದು, ಆ ಹಿನ್ನೆಲೆಯಲ್ಲಿ ನಿರ್ಮಾಪಕರು ಮತ್ತು ಆಯೋಜಕರ ವಿರುದ್ಧ ಸುಮೋಟೊ ಪ್ರಕರಣ ದಾಖಲಾಗಿದೆ.
Pushpa: ಬಿಡುಗಡೆಗೂ ಮುನ್ನವೇ ಭರ್ಜರಿ ಬಿಸಿನೆಸ್ ಮಾಡಿದ ಪುಷ್ಪ!
‘ಊ ಅಂಟಾವಾ’ ಹಾಡಿನ ವಿರುದ್ಧ ದೂರು ಕೊಟ್ಟ ಪುರುಷರ ಸಂಘ
‘ಪುಷ್ಪ’ ಚಿತ್ರದ ಐಟಂ ಸಾಂಗ್ ಮೂಲಕ ಸದ್ದು ಮಾಡಿದ ಗಾಯಕಿ ಮಂಗ್ಲಿ ಸಹೋದರಿ ಇಂದ್ರವತಿ!