The New Indian Express
ಬೆಂಗಳೂರು: 2019ರಲ್ಲಿ ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ ಮತ್ತು ಅವರ ಸಂಪುಟದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವ್ಯಯಿಸಿದ ಒಟ್ಟು ಹಣದ ವಿವರ ಭಾರತದ ರಾಷ್ಟ್ರಪತಿ ಕಚೇರಿಯಲ್ಲಿ ಇಲ್ಲ. ಬೆಂಗಳೂರಿನ ಆರ್‌ಟಿಐ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಅವರು ಆರ್‌ಟಿಐ ಮೂಲಕ ಪ್ರಮಾಣ ವಚನ ಕಾರ್ಯಕ್ರಮದ ಒಟ್ಟು ವೆಚ್ಚದ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಮೇ 30, 2019 ರಂದು ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭ ಏರ್ಪಟ್ಟಿತ್ತು.
ಅರ್ಜಿಯಲ್ಲಿ, ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ ವಿದೇಶಿ ಗಣ್ಯರು ಸೇರಿದಂತೆ ಭಾಗವಹಿಸಿದ ಎಲ್ಲರಿಗೂ ಚಹಾ, ಆಹಾರ ವ್ಯವಸ್ಥೆ (ಶಾಕಾಹಾರಿ ಮತ್ತು ಮಾಂಸಾಹಾರಿ ಎರಡೂ), ವಿದೇಶಿಯರಿಗೆ ವಿಮಾನ ಟಿಕೆಟ್ ಶುಲ್ಕ ಸೇರಿದಂತೆ ಸಾರಿಗೆ, ಬೆಳಕು, ಧ್ವನಿ, ಹೂವಿನ ಅಲಂಕಾರ, ಆಮಂತ್ರಣ ಪತ್ರಗಳ ವೆಚ್ಚದ ವಿವರಗಳನ್ನು ನರಸಿಂಹ ಮೂರ್ತಿ ಕೋರಿದ್ದರು.
ಅರ್ಜಿದಾರರು ಕೇಳಿದ ಕೆಲವು ವಿಷಯಗಳ ವೆಚ್ಚದ ವಿವರಗಳನ್ನು ನೀಡಲಾಗಿದ್ದು, ಇತರ ವಿವರಗಳನ್ನು ವಿವಿಧ ಕಾರಣಗಳನ್ನು ಉಲ್ಲೇಖಿಸಿ ಹಂಚಿಕೊಂಡಿಲ್ಲ. ಅರ್ಜಿದಾರರಿಗೆ ಹಂಚಿಕೊಂಡ ವಿವರಗಳ ಪ್ರಕಾರ, ಟೆಂಟ್‌ಗಳು ಮತ್ತು ಮೊಬೈಲ್ ಟಾಯ್ಲೆಟ್‌ಗಳಿಗೆ 32,11,953 ರೂ., ಲೈಟಿಂಗ್ ಮತ್ತು ಡಿಜಿ ಸೆಟ್‌ಗೆ 11,79,750 ರೂ. ಮತ್ತು ಆಡಿಯೊ ಸಿಸ್ಟಮ್, ಕಾರ್ ಕಾಲಿಂಗ್, ವಿಡಿಯೋ ವಾಲ್‌ಗಳು ಮತ್ತು ಯುಪಿಎಸ್ ಸಿಸ್ಟಮ್‌ಗೆ 18,63,744 ರೂಪಾಯಿಗಳು ಅಲ್ಲದೆ, ಹೂವಿನ ಜೋಡಣೆ ಮತ್ತು ಕುಂಡದಲ್ಲಿ ಗಿಡಗಳ ಪ್ರದರ್ಶನಕ್ಕೆ 10,60,058 ರೂಪಾಯಿ ಇವೆಲ್ಲವೂ ಸೇರಿ 73,15,505 ರೂಪಾಯಿ ಖರ್ಚು ಮಾಡಲಾಗಿದೆ.
ಆಹಾರದ ವೆಚ್ಚವಾಗಿ (ಕಾರ್ಯಕ್ರಮದಲ್ಲಿ ಸುಮಾರು 8,000 ಅತಿಥಿಗಳು ಭಾಗವಹಿಸಿದ್ದರು), ಯಾವುದೇ ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಲಾಗಿಲ್ಲ ಮತ್ತು ಮಾರಾಟಗಾರು ನೀಡಿದ ಬಿಲ್‌ಗಳನ್ನು ಕಾಲಕಾಲಕ್ಕೆ ಹಣ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಅದೇ ರೀತಿ ಆಮಂತ್ರಣ ಪತ್ರಿಕೆಗಳ ಮುದ್ರಣವನ್ನು ಭಾರತ ಸರ್ಕಾರದ ಮುದ್ರಣಾಲಯವು ಕೈಗೆತ್ತಿಕೊಂಡಿದೆ. ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಅಂದಾಜು ನೀಡಲಾಗುತ್ತದೆ. ವಿದೇಶಿ ಪ್ರತಿನಿಧಿಗಳ ವಿಮಾನ ಪ್ರಯಾಣದ ವೆಚ್ಚಕ್ಕೆ ಸಂಬಂಧಿಸಿದಂತೆ, ಅದನ್ನು ರಾಷ್ಟ್ರಪತಿಗಳ ಸಚಿವಾಲಯ ಭರಿಸಿಲ್ಲ ಎಂದು ತಿಳಿಸಲಾಗಿದೆ.
ತಮಗೆ ಸಂಪೂರ್ಣ ಮಾಹಿತಿ ನೀಡದೆ ಕೆಲವು ಮರೆಮಾಚಿದ್ದು ಭಾರತದ ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕಿನ ನಿರಾಕರಣೆಯಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಮೂರ್ತಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. ರಾಷ್ಟ್ರಪತಿಗಳ ಕಚೇರಿಯು RTI ಮೂಲಕ ನಾಗರಿಕರ ಪ್ರಶ್ನೆಯನ್ನು ಹೇಗೆ ನಿರಾಕರಿಸಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡುತ್ತಾರೆ.
Read more
[wpas_products keywords=”deal of the day”]