Karnataka news paper

ಮಾವ ಮುಲಾಯಂ ಸಿಂಗ್ ಯಾದವ್ ಆಶೀರ್ವಾದ ಕೋರಿದ ಅಪರ್ಣಾ ಯಾದವ್!


PTI

ಲಖನೌ: ಇತ್ತೀಚಿಗೆ ಬಿಜೆಪಿ ಸೇರಿದ ಅಪರ್ಣಾ ಯಾದವ್, ತನ್ನ ಮಾವ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಆಶೀರ್ವಾದವನ್ನು ಕೋರಿದ್ದಾರೆ. 

ಇನ್ಸಾಟಾಗ್ರಾಮ್ ಖಾತೆಯಲ್ಲಿ ಈ ಚಿತ್ರವನ್ನು ಅಪರ್ಣಾ ಯಾದವ್ ಹಂಚಿಕೊಂಡಿದ್ದು, ಬಿಜೆಪಿ ಸೇರ್ಪಡೆಯಾಗಿ ಲಖನೌಗೆ ವಾಪಸ್ಸಾದ ನಂತರ ನನ್ನ ಮಾವನ ಆಶೀರ್ವಾದ ಪಡೆದಿದ್ದಾಗಿ ಬರೆದುಕೊಂಡಿದ್ದಾರೆ. 

ಮುಲಾಯಂ ಸಿಂಗ್ ಯಾದವ್ ತಮ್ಮ ಸೊಸೆ ಬಿಜೆಪಿ ಸೇರದಂತೆ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾಗಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಹೇಳಿದ್ದರು. ಎಸ್‌ಪಿಯ ಸಮಾಜವಾದಿ ಸಿದ್ಧಾಂತವು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದರು. ಅಪರ್ಣಾ ಯಾದವ್  ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿಯ ಮಗ ಪ್ರತೀಕ್ ಯಾದವ್ ಅವರನ್ನು ಮದುವೆಯಾಗಿದ್ದರೆ, ಅಖಿಲೇಶ್ ಯಾದವ್ ಮುಲಾಯಂ ಸಿಂಗ್ ಅವರ ಮೊದಲ ಪತ್ನಿಯ ಮಗ.

ಇದನ್ನೂ ಓದಿ: ಯಾರು ಈ ಅಪರ್ಣಾ ಯಾದವ್, ಸಮಾಜವಾದಿ ಪರಮೋಚ್ಛ ನಾಯಕ ಮುಲಾಯಂ ಸಿಂಗ್ ಯಾದವ್ ಸೊಸೆ ಕುರಿತ ಆಸಕ್ತಿಕರ ಮಾಹಿತಿ

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಅದರ ರಾಜ್ಯ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಅಪರ್ಣಾ ಯಾದವ್, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.  ರಾಷ್ಟ್ರದ ಹಿತಾಸಕ್ತಿಗೆ ಯಾವಾಗಲೂ ಆದ್ಯತೆ ನೀಡಲಾಗಿದೆ ಮತ್ತು ಸ್ವಚ್ಛತೆ, ಮಹಿಳಾ ಸಬಲೀಕರಣ ಮತ್ತು ಉದ್ಯೋಗಕ್ಕಾಗಿ ಬಿಜೆಪಿ ಸರ್ಕಾರದ ಹಲವಾರು ಯೋಜನೆಗಳನ್ನು ಶ್ಲಾಘಿಸಿದ್ದರು.

ಇದನ್ನೂ ಓದಿ: ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರುವುದನ್ನು ತಡೆಯಲು ಮುಲಾಯಂ ಸಿಂಗ್ ಯತ್ನಿಸಿದ್ದರು: ಅಖಿಲೇಶ್ ಯಾದವ್





Read more

[wpas_products keywords=”deal of the day”]