Online Desk
ಕುವೈತ್: ಕುವೈತ್ ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು, ಕಂಪನಿ ಮಾಲೀಕರು ತಪ್ಪಾಗಿ ತಮ್ಮ ಖಾತೆಗೆ ಜಮೆ ಮಾಡಿದ್ದ ಸುಮಾರು 1.5 ಕೋಟಿ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇದಕ್ಕಾಗಿ ಕಂಪನಿ ಮಾಲೀಕರು, ಬ್ಯಾಂಕಿನಿಂದ ದೊಡ್ಡ ಮೊತ್ತದ ನಗದು ಹಣ, ಪ್ರಶಂಸನಾ ಪತ್ರ ಪಡೆದುಕೊಂಡಿದ್ದಾರೆ.
ಕರ್ನಾಟಕದ ಬೆಂಗಳೂರಿನ ಸುನಿಲ್ ಡೊಮಿನಿಕ್ ಡಿಸೋಜಾ ಕಳೆದ 10 ವರ್ಷಗಳಿಂದ ಕುವೈತ್ ನ ಎನ್ ಬಿಟಿಸಿ ಎಂಬ ಕಂಪನಿಯಲ್ಲಿ ಎಸಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಈ ಕ್ರಮದಲ್ಲಿ ಅವರು ಕಂಪನಿಯಿಂದ ನಿವೃತ್ತರಾಗಿ ಮನೆಗೆ ಮರಳಲು ನಿರ್ಧರಿಸಿದ್ದರು. ಇದರಿಂದ ಕಂಪನಿ ಮಾಲೀಕರು ಡಿಸೋಜಾ ಅವರ ಹಲವು ವರ್ಷಗಳ ಸೇವೆಗೆ ಸಂಬಂಧಿಸಿದ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.
ಆದರೆ, ಡಿಸೋಜಾ ಅವರಿಗೆ ನೀಡಬೇಕಿದ್ದ ಹಣಕ್ಕಿಂತ 30 ಪಟ್ಟು ಹೆಚ್ಚು ಹಣ ಅವರ ಬ್ಯಾಂಕ್ ಖಾತೆಗೆ ತಪ್ಪಾಸಿ ವರ್ಗಾವಣೆ ಆಗಿತ್ತು. ಅದು ಕೂಡಾ ಒಟ್ಟು 62,859 ಕುವೈತ್ ದಿನಾರ್ ಭಾರತೀಯ ಕರೆನ್ಸಿಯಲ್ಲಿ ಅಂದಾಜು ರೂ. 1.5 ಕೋಟಿ ರೂ) ಜಮಾ ಮಾಡಿದ್ದರು. ಇದನ್ನು ಡಿಸೋಜಾ ಕೂಡಲೇ ಎನ್ ಬಿಟಿಸಿ ಆಡಳಿತ ಮಂಡಳಿ ಗಮನಕ್ಕೆ ತಂದರು. ಈ ವಿಷಯವನ್ನು ಕಂಪನಿ ಮಾಲೀಕರಿಗೆ ಬ್ಯಾಂಕ್ ಗೆ ತಿಳಿಸಿದರು. ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿ ತಾಂತ್ರಿಕ ಸಮಸ್ಯೆಯಿಂದ ಡಿಸೋಜಾ ಅವರ ಖಾತೆಗೆ ಇಷ್ಟು ದೊಡ್ಡ ಮೊತ್ತ ಜಮಾ ಆಗಿರವುದನ್ನು ಕಂಡುಕೊಂಡಿತು. ಅವರಿಗೆ ಸಲ್ಲಬೇಕಿದ್ದ ಹಣವನ್ನು ನಗದಾಗಿ ನೀಡಿ ಉಳಿದಿದ್ದನ್ನು ಹಿಂಪಡೆಯಲಾಯಿತು.
ಹಣವನ್ನು ಕಂಪನಿಗೆ ಮರಳಿಸಿದ ಡಿಸೋಜಾ ಅವರನ್ನು ಗೌರವಿಸಲು ಎನ್ ಬಿಟಿಸಿ ಅಧ್ಯಕ್ಷ ಮೊಹಮ್ಮದ್ ನಜೀರ್ ಎಂ. ಆಲ್ ಬದ್ಧ ಗುರುವಾರ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ವಿಶೇಷ ಪ್ರಶಂಸಾ ಪತ್ರ ಹಾಗೂ 250 ಕುವೈತ್ ದಿನಾರ್ (ರೂ. 61,569) ಬಹುಮಾನ ನೀಡಿ ಗೌರವಿಸಿದರು. ಕಂಪನಿ ಕಾರ್ಯನಿರ್ವಾಹಕ ಅನಿಂದಾ ಬ್ಯಾನರ್ಜಿ ಹಾಗೂ ಬೆನ್ ಪಾಲ್ (ಜನರಲ್ ಮ್ಯಾನೇಜರ್) ಬೆಲೆಬಾಳುವ ಸ್ಮಾರ್ಟ್ ಫೋನನ್ನು ಡಿಸೋಜಾ ಅವರಿಗೆ ಉಡುಗೊರೆಯಾಗಿ ನೀಡಿದರು. ಡಿಸೋಜಾ ಅವರಿಗೆ ಬ್ಯಾಂಕ್ ಆಡಳಿತ ಮಂಡಳಿ ಕೂಡಾ ರೂ. 2,46,277 ನಗದು ಬಹುಮಾನ ಹಾಗೂ ವಿಶೇಷ ಪ್ರಶಂಸನಾ ಪತ್ರ ನೀಡಿ ಗೌರವಿಸಿತು.
Read more
[wpas_products keywords=”deal of the day”]