Karnataka news paper

ಎಲೆಕ್ಟ್ರಿಕ್‌ ವಾಹನ ಕ್ಷೇತ್ರದ ಮೇಲೂ ಅದಾನಿ ಕಣ್ಣು, ಟ್ರೇಡ್‌ ಮಾರ್ಕ್‌ ನೋಂದಣಿ!


ಬಂದರಿನಿಂದ ವಿದ್ಯುತ್‌ವರೆಗಿನ ಬೃಹತ್‌ ಸಮೂಹವನ್ನು ಮುನ್ನಡೆಸುವ ಅದಾನಿ ಸಮೂಹದ ಮುಖ್ಯಸ್ಥ, ಭಾರತದ ಎರಡನೇ ಅತೀ ಸಿರಿವಂತ ಗೌತಮ್‌ ಅದಾನಿಯ ಕಣ್ಣು ಇದೀಗ ಸ್ಟೀಲ್‌ ಮಾತ್ರಲ್ಲದೆ ಆಟೋ ವಲಯದ ಮೇಲೂ ಬಿದ್ದಿದೆ.

ಎಸ್‌.ಬಿ. ಅದಾನಿ ಫ್ಯಾಮಿಲಿ ಟ್ರಸ್ಟ್‌ನಿಂದ ಅದಾನಿ ಟ್ರೇಡ್‌ಮಾರ್ಕ್‌ನ್ನು ರಿಜಿಸ್ಟರ್‌ ಮಾಡಲಾಗಿದ್ದು, ವಾಹನಗಳಲ್ಲಿ ಬಳಸಲು ಪ್ರಸ್ತಾಪಿಸಲಾಗಿದೆ. ಈ ಮೂಲಕ ಎಲೆಕ್ಟ್ರಿಕ್‌ ವಾಹನ ಕ್ಷೇತ್ರವನ್ನೂ ಪ್ರವೇಶಿಸಲು ಅದಾನಿ ಗ್ರೂಪ್‌ ಉದ್ದೇಶಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವಿಜಯ ಕರ್ನಾಟಕ ಸೋದರ ಸಂಸ್ಥೆ ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿದೆ.

ಅದಾನಿ ಗ್ರೂಪ್ ಆರಂಭದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಉತ್ಪಾದನೆಗೆ ಮುಂದಾಗಿದೆ. ಕೋಚ್‌ಗಳು, ಬಸ್‌ಗಳು ಮತ್ತು ಟ್ರಕ್‌ಗಳನ್ನು ಉತ್ಪಾದಿಸಲು ಹೊರಟಿದ್ದು, ಇವುಗಳನ್ನು ತನ್ನ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಆಂತರಿಕ ಅಗತ್ಯಗಳಿಗಾಗಿ ಬಳಸಲಿದೆ ಎಂದು ವರದಿಯು ಹೇಳಿದೆ.

ಎಲೆಕ್ಟ್ರಿಕ್‌ ವಾಹನ ಕ್ಷೇತ್ರದಲ್ಲಿ ಟಾಟಾ ಸುನಾಮಿ, 2023ರಲ್ಲಿ 50,000 ವಾಹನ ಮಾರಾಟಕ್ಕೆ ಪ್ಲ್ಯಾನ್‌
ಅಲ್ಲದೆ ಬ್ಯಾಟರಿಗಳನ್ನು ತಯಾರಿಸಲೂ ಉದ್ದೇಶಿಸಿದ್ದು, ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‌ಗಳನ್ನೂ ಸ್ಥಾಪಿಸುವ ಯೋಜನೆಯನ್ನು ಹೊಂದಿದೆ. ಈಗಾಗಲೇ ಹಸಿರುವ ಇಂಧನ ಯೋಜನೆಗಳಲ್ಲಿ ಕಂಪನಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದು, ಈ ಕ್ರಮವು ಅದರ ಮುಂದುವರಿದ ಭಾಗವಾಗಿದೆ.

ಇಂದು ಅದಾನಿ ಗ್ರೀನ್‌ನ ಮಾರುಕಟ್ಟೆ ಮೌಲ್ಯ 3 ಲಕ್ಷ ಕೋಟಿ ರೂ. ಮುಟ್ಟಿದ್ದು, ಈ ನಿರ್ಧಾರದೊಂದಿಗೆ ಅದೀಗ ಮತ್ತಷ್ಟು ಬೆಳವಣಿಗೆ ಕಾಣುವ ಸಾಧ್ಯತೆ ಇದೆ. ಗ್ರೀನ್ ಹೈಡ್ರೋಜನ್ ಯೋಜನೆಗಳು, ಕಡಿಮೆ ಇಂಗಾಲದ ವಿದ್ಯುತ್ ಉತ್ಪಾದನೆ ಹಾಗೂ ಗಾಳಿ ಟರ್ಬೈನ್‌ಗಳು, ಸೋಲಾರ್‌ ಮಾಡ್ಯೂಲ್‌ಗಳು ಮತ್ತು ಬ್ಯಾಟರಿಗಳ ಉತ್ಪಾದನೆಯನ್ನೂ ಆರಂಭಿಸಲು ಅದಾನಿ ಗ್ರೂಪ್‌ ಇತ್ತೀಚೆಗೆ ಹೊಸ ಅಂಗಸಂಸ್ಥೆ ಎಎನ್‌ಐಎಲ್‌ (ಅದಾನಿ ನ್ಯೂ ಇಂಡಸ್ಟ್ರೀಸ್‌ ಲಿ.) ಅನ್ನು ಸ್ಥಾಪಿಸಿದೆ. ಕಂಪನಿಯು ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿಯಾಗಲು ಹೊರಟಿದ್ದು, ಅಗ್ಗದ ಬೆಲೆಯಲ್ಲಿ ಹೈಡ್ರೋಜನ್ ಉತ್ಪಾದಿಸುವ ಯೋಜನೆಯನ್ನೂ ಹಾಕಿಕೊಂಡಿದೆ.

ಕಳೆದ ನವೆಂಬರ್‌ನಲ್ಲಿ ತಮ್ಮ ಹೊಸ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಅದಾನಿ, ತಮ್ಮ ಸಮೂಹ ಮುಂದಿನ ದಶಕದಲ್ಲಿ ನವ ಇಂಧನ ಕ್ಷೇತ್ರದಲ್ಲಿ 70 ಶತಕೋಟಿ ಡಾಲರ್‌ ಹಣ ಹೂಡಿಕೆ ಮಾಡಲಿದೆ ಎಂದು ಹೇಳಿಕೆ ನೀಡಿದ್ದರು.

ಮೂಲಸೌಕರ್ಯ ಕ್ಷೇತ್ರದಲ್ಲೂ ದೈತ್ಯ ಸಂಸ್ಥೆಯಾಗಿರುವ ಅದಾನಿ ಗ್ರೂಪ್‌ ಇದೀಗ ಉದ್ದೇಶಿತ ಎಲೆಕ್ಟ್ರಿಕ್‌ ವಾಹನಗಳಿಗಾಗಿ ಗುಜರಾತಿನ ಮುಂದ್ರಾದಲ್ಲಿರುವ ತನ್ನ ವಿಶೇಷ ಆರ್ಥಿಕ ವಲಯದಲ್ಲಿ (ಎಸ್‌ಇಝಡ್) ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲೂ ಯೋಜನೆ ರೂಪಿಸಿದೆ.

ಇದರೊಂದಿಗೆ ಈಗಾಗಲೇ ಕಡಿಮೆ ಇಂಗಾಲದ ಯೋಜನೆಗಳಲ್ಲಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಘೋಷಿಸಿರುವ ಟಾಟಾ ಗ್ರೂಪ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ವಿರುದ್ಧ ಅದಾನಿ ಗ್ರೂಪ್‌ ಕೂಡ ಸ್ಪರ್ಧೆಗಿಳಿಯಲಿದೆ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.



Read more…

[wpas_products keywords=”deal of the day”]