Karnataka news paper

‘ಗಟ್ಟಿಮೇಳ’ ಧಾರಾವಾಹಿ ನಟಿ ಅಶ್ವಿನಿ ತೆರೆ ಮೇಲೆ ಕಾಣಿಸಿಕೊಳ್ಳೋದು ಯಾವಾಗ? ಏನಂತಾರೆ ಪ್ರೇಕ್ಷಕರ ಆರತಿ?


ಹೈಲೈಟ್ಸ್‌:

  • ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಆರತಿ ಪಾತ್ರ ಮಾಡುತ್ತಿದ್ದ ನಟಿ ಅಶ್ವಿನಿ
  • ಈ ಹಿಂದೆ ‘ರಾಧಾ ರಮಣ’ ಧಾರಾವಾಹಿಯಲ್ಲಿ ಅವನಿ ಪಾತ್ರ ಮಾಡುತ್ತಿದ್ದ ಅಶ್ವಿನಿ
  • ಅಶ್ವಿನಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳೋದು ಯಾವಾಗ?

(ಪದ್ಮಶ್ರೀ ಭಟ್)

‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಆರತಿ ಪಾತ್ರ ಮಾಡುತ್ತಿದ್ದ ನಟಿ ಅಶ್ವಿನಿ ಅವರು ಕೆಲ ತಿಂಗಳುಗಳ ಹಿಂದೆ ಈ ಧಾರಾವಾಹಿಯಿಂದ ಹೊರನಡೆದಿದ್ದರು. ಅದಾದ ನಂತರ ಅವರು ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಆದರೆ ಈಗ ಅವರು ಏನು ಮಾಡುತ್ತಿದ್ದಾರೆ? ತೆರೆ ಮೇಲೆ ಕಾಣಿಸಿಕೊಳ್ಳೋದು ಯಾವಾಗ ಎಂದು ಅಭಿಮಾನಿಗಳು ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇರುತ್ತಾರೆ. ಅದಕ್ಕೆಲ್ಲ ಉತ್ತರ ನೀಡಲು ಅಶ್ವಿನಿ ‘ವಿಜಯ ಕರ್ನಾಟಕ ವೆಬ್’ ಜೊತೆ ಮಾತನಾಡಿದ್ದಾರೆ.

“ಗಟ್ಟಿಮೇಳ ಬಿಟ್ಟ ನಂತರ ನನಗೆ ಸಾಕಷ್ಟು ಮೆಸೇಜ್, ಫೋನ್ ಕಾಲ್ ಬಂತು, ಈಗಲೂ ಬರುತ್ತಲೇ ಇವೆ. ನಾನು ಧಾರಾವಾಹಿ ಬಿಟ್ಟಿರೋದು ಅನೇಕರಿಗೆ ಬೇಸರ ಮೂಡಿಸಿದೆ ಎನ್ನುವುದು ಗೊತ್ತು. ಆದರೆ ಕೆಲ ಕಾರಣಗಳಿಂದ ನಾನು ಈ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂತು. ಸದ್ಯ ನಾನು ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಈ ಹಿಂದೆ ರಾಧಾ ರಮಣ ಧಾರಾವಾಹಿಯಲ್ಲಿ ಅವನಿ ಎಂಬ ಚಾಲೆಂಜಿಂಗ್ ಪಾತ್ರ ಮಾಡಿದ್ದೆ, ಅದರಿಂದ ನನಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು. ಅದಾದ ನಂತರದಲ್ಲಿ ಆರತಿ ಪಾತ್ರ ಮಾಡಿದೆ, ಅದು ಕೂಡ ವೀಕ್ಷಕರಿಗೆ ಇಷ್ಟ ಆಯ್ತು. ಅವನಿಗೂ ಆರತಿಗೂ ವ್ಯತ್ಯಾಸ ಇದೆ. ನನಗೆ ಬೇರೆ ಬೇರೆ ರೀತಿಯ ಸವಾಲಿನ ಪಾತ್ರ ಮಾಡಲು ಆಸಕ್ತಿಯಿದೆ, ಒಂದೇ ರೀತಿಯ ಪಾತ್ರಕ್ಕೆ ಅಂಟಿಕೊಳ್ಳಲು ಇಷ್ಟವಿಲ್ಲ” ಎಂದು ನಟಿ ಅಶ್ವಿನಿ ಹೇಳಿದ್ದಾರೆ.

‘ಗಟ್ಟಿಮೇಳ’ ಧಾರಾವಾಹಿಯಿಂದ ಹೊರನಡೆದ ನಟಿ ಅಶ್ವಿನಿ; ಕಾರಣ ಏನು?

“ಈಗಾಗಲೇ ಕನ್ನಡ ಸೇರಿ ಪರಭಾಷೆಯಿಂದಲೂ ನನಗೆ ಸಾಕಷ್ಟು ಅವಕಾಶಗಳು ಬಂದಿವೆ. ಆದರೆ ಒಂದೇ ರೀತಿಯ ಪಾತ್ರವಾಯ್ತು ಅಂತ ಯಾವುದನ್ನೂ ಒಪ್ಪಿಕೊಂಡಿಲ್ಲ. ನನಗೆ ನಾನು ಎಷ್ಟು ಪ್ರಾಜೆಕ್ಟ್ ಮಾಡುತ್ತೀನಿ ಎನ್ನೋದು ಮುಖ್ಯವಲ್ಲ, ಆ ಪಾತ್ರಗಳು ಜನರ ಮನಸ್ಸಿಗೆ ಎಷ್ಟು ತಲುಪತ್ತೆ ಎನ್ನೋದು ಮುಖ್ಯವಾಗತ್ತೆ. ಹೀಗಾಗಿ ಯೋಚಿಸಿ ಪಾತ್ರಗಳ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ನನಗೂ ಆದಷ್ಟು ಬೇಗ ತೆರೆ ಮೇಲೆ ಮತ್ತೆ ಕಾಣಿಸಿಕೊಳ್ಳುವ ಆಸಕ್ತಿಯಿದೆ. ಆದರೆ ಅಭಿನಯಕ್ಕೆ ಒತ್ತು ನೀಡುವ ಪಾತ್ರದ ನಿರೀಕ್ಷೆಯಲ್ಲಿದ್ದೇನೆ. ಕೆಲ ಸಿನಿಮಾಗಳ ಕಥೆಯೂ ಕೇಳಿದ್ದೇನೆ. ಒಟ್ಟಿನಲ್ಲಿ ಧಾರಾವಾಹಿ, ಸಿನಿಮಾ ಎನ್ನದೆ ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತ ನಟಿಸುತ್ತೇನೆ” ಎಂದು ಹೇಳಿದ್ದಾರೆ ಅಶ್ವಿನಿ

ಸುರಕ್ಷತೆ ದೃಷ್ಟಿಯಿಂದ ಧಾರಾವಾಹಿಯಿಂದ ಹೊರನಡೆದ ಕನ್ನಡ ನಟಿ ಅಶ್ವಿನಿ!

“ನಾನು ಯಾವುದೇ ಧಾರಾವಾಹಿಯಲ್ಲಿ ಸದ್ಯ ನಟಿಸುತ್ತಿಲ್ಲ. ಆದರೆ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದಾಗ ಸಾಕಷ್ಟು ಜನರು ನನಗೆ ಮೆಸೇಜ್ ಮಾಡಿ ಮತ್ತೆ ಯಾವಾಗ ಧಾರಾವಾಹಿ ಮಾಡುತ್ತೀರಾ ಅಂತ ಕೇಳ್ತಾರೆ. ನೀವು ಆದಷ್ಟು ಬೇಗ ನಟಿಸಿ, ನಿಮ್ಮನ್ನು ಮಿಸ್ ಮಾಡಿಕೊಳ್ತಿದ್ದೀವಿ ಅಂತೆಲ್ಲ ಮೆಸೇಜ್ ಹಾಕ್ತಾರೆ, ನನ್ನ ಫೋಟೋಗಳನ್ನು ಸುಂದರವಾಗಿ ಎಡಿಟ್ ಮಾಡಿ ಫ್ಯಾನ್ ಪೇಜ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಾರೆ. ಈ ಅಭಿಮಾನ ನೋಡಿದಾಗ ತುಂಬ ಖುಷಿಯಾಗತ್ತೆ. ಗಟ್ಟಿಮೇಳ ಬಿಟ್ಟು ಇಷ್ಟುದಿನವಾದರೂ ನನ್ನ ಮರೆಯದಿರೋದು ಆಶ್ಚರ್ಯದ ಸಂಗತಿ. ಈ ಪ್ರೀತಿ ಪಡೆಯಲು ಪುಣ್ಯ ಮಾಡಿದ್ದೇನೆ” ಎಂದಿದ್ದಾರೆ ನಟಿ ಅಶ್ವಿನಿ

“ಕೊರೊನಾ ಸೋಂಕು ಇರುವುದರಿಂದ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದೇನೆ. ಆದಷ್ಟು ಮನೆಯ ಆಹಾರ ಸೇವಿಸುತ್ತ ಫಿಟ್‌ನೆಸ್ ಕಾಪಾಡಿಕೊಳ್ಳುತ್ತಿದ್ದೇನೆ. ನಾನು ಹೊಸ ವರ್ಷ ಅಂತ ರೆಸುಲ್ಯೂಶನ್ ಏನೂ ಇಟ್ಟುಕೊಂಡಿಲ್ಲ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಅಂತ ಕೇಳಿಕೊಳ್ಳುವೆ” ಎಂದಿದ್ದಾರೆ ಅಶ್ವಿನಿ



Read more

[wpas_products keywords=”deal of the day sale today offer all”]