Karnataka news paper

150 ಕೋಟಿ ರೂ., ಐಪಿಎಲ್‌ ಟೂರ್ನಿಯಲ್ಲಿ ಎಲೈಟ್‌ ಲಿಸ್ಟ್‌ ಸೇರಲಿರುವ ಕೊಹ್ಲಿ!



ಬೆಂಗಳೂರು: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಮೊದಲ ಆದ್ಯತೆಯ ಆಟಗಾರನನ್ನಾಗಿ ಸ್ಟಾರ್‌ ಬ್ಯಾಟ್ಸ್‌ಮನ್‌ ಅವರನ್ನು ಉಳಿಸಿಕೊಂಡಿದೆ. ಈ ಸಲುವಾಗಿ ತನ್ನ ಮಾಜಿ ಕ್ಯಾಪ್ಟನ್‌ಗೆ ಬರೋಬ್ಬರಿ 15 ಕೋಟಿ ರೂ. ಸಂಭಾವನೆ ನೀಡಲಿದೆ.

ಐಪಿಎಲ್‌ 2022 ಟೂರ್ನಿ ಸಲುವಾಗಿ 15 ಕೋಟಿ ರೂ. ಸ್ವೀಕರಿಸುವ ಮೂಲಕ ಕೊಹ್ಲಿ, ಲೀಗ್‌ ಇತಿಹಾಸದಲ್ಲಿ ಒಟ್ಟಾರೆ 150 ಕೋಟಿ ರೂ. ಸಂಭಾವನೆ ಸ್ವೀಕರಿಸಿದ ಎಲೈಟ್‌ ಆಟಗಾರರ ಪಟ್ಟಿಗೆ ಸೇರ್ಪಡೆ ಆಗಲಿದ್ದಾರೆ. ಐಪಿಎಲ್‌ 2021 ಟೂರ್ನಿ ಆರಂಭಕ್ಕೂ ಮೊದಲು ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವಕ್ಕೆ ಗುಡ್‌ ಬೈ ಹೇಳಿದ್ದರು.

ಐಪಿಎಲ್‌ ಆರಂಭದಿಂದಲೂ ಈವರೆಗೆ ಒಂದೇ ಫ್ರಾಂಚೈಸಿಯಲ್ಲಿ ಆಡಿದ ಏಕಮಾತ್ರ ಆಟಗಾರನಾಗಿರುವ ವಿರಾಟ್‌ ಕೊಹ್ಲಿ, 2018ರಿಂದ 2021ರವರೆಗೆ ಆರ್‌ಸಿಬಿ ತಂಡದಲ್ಲಿ ಬರೋಬ್ಬರಿ 17 ಕೋಟಿ ರೂ. ಸಂಭಾವನೆ ಸ್ವೀಕರಿಸಿದ್ದರು. ಈ ಮೂಲಕ 14 ಆವೃತ್ತಿಗಳಿಂದ ಒಟ್ಟಾರೆ 143 ಕೋಟಿ ರೂ. ಸ್ವೀಕರಿಸಿದ್ದಾರೆ. ಇದೀಗ ಮುಂಬರುವ ಆವೃತ್ತಿಯಲ್ಲಿ 15 ಕೋಟಿ ರೂ. ಸ್ವೀಕರಿಸುವ ಮೂಲಕ 150 ಕೋಟಿ ರೂ.ಗಳ ಗಡಿ ದಾಟಲಿದ್ದಾರೆ.

ಅಂದಹಾಗೆ ವಿರಾಟ್‌ ಕೊಹ್ಲಿ ಈವರೆಗೆ ಒಮ್ಮೆಯೂ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಪಾಲ್ಗೊಂಡಿಲ್ಲ. 2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಹರಾಜಿಗೂ ಮುನ್ನ 19 ವರ್ಷದೊಳಗಿನ ಆಟಗಾರರ ಪಟ್ಟಿಯಿಂದ ಕೊಹ್ಲಿ ಅವರನ್ನು 12 ಲಕ್ಷ ರೂ.ಗಳನ್ನು ನೀಡಿ ಆರ್‌ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 2011ರಲ್ಲಿ ಆರ್‌ಸಿಬಿ ಕೇವಲ ಕೊಹ್ಲಿಯನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಹರಾಜಿಗೆ ಬಿಟ್ಟಿತ್ತು. 2011ರಿಂದ 2014ರವರೆಗೆ ಕೊಹ್ಲಿ ಆರ್‌ಸಿಬಿ ತಂಡದಿಂದ 8.28 ಕೋಟಿ ರೂ. ಸ್ವೀಕರಿಸಿದ್ದರು.

2015ರಲ್ಲಿ ಅವರ ವೇತನ ಹೆಚ್ಚಾಗಿ 2017ರವರೆಗೆ 12.5 ಕೋಟಿ ರೂ. ಸ್ವೀಕರಿಸಿದರು. ನಂತರ 2018ರಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಸಂದರ್ಭದಲ್ಲಿ ಚಾಲೆಂಜರ್ಸ್‌ ಕೊಹ್ಲಿಗೆ 17 ಕೋಟಿ ರೂ.ಗಳ ಭಾರಿ ಮೊತ್ತದ ಪೇ ಚೆಕ್‌ ನೀಡಿತ್ತು. ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಂಭಾವನೆ ಸ್ವೀಕರಿಸಿದ ಆಟಗಾರ ಎಂಬ ಹೆಗ್ಗಳಿಕೆಯೂ ಕೊಹ್ಲಿ ಅವರದ್ದಾಗಿದೆ.

ರೋಹಿತ್‌ ಕೂಡ 150ರ ಗಡಿ ದಾಟಲಿದ್ದಾರೆ
ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಾಖಲೆಯ 5 ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ಕೂಡ ಈ ವರ್ಷ 150 ಕೋಟಿ ರೂ.ಗಳ ಗಡಿ ದಾಟಲಿದ್ದಾರೆ. ಐಪಿಎಲ್‌ 2022 ಟೂರ್ನಿ ಸಲುವಾಗಿ ಮುಂಬೈ ಇಂಡಿಯನ್ಸ್‌ ಹಿಟ್‌ಮ್ಯಾಕ್‌ ಖ್ಯಾತಿಯ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ಗೆ ಬರೋಬ್ಬರಿ 16 ಕೋಟಿ ರೂ.ಗಳ ಸಂಭಾವನೆ ನೀಡಲಿದೆ. ಈಗಾಗಲೇ ಒಟ್ಟು 146 ಕೋಟಿ ರೂ. ಸಂಭಾವನೆ ಸ್ವೀಕರಿಸಿರುವ ರೋಹಿತ್‌, ಇದಕ್ಕೆ 16 ಕೋಟಿ ರೂ.ಗಳನ್ನು ಸೇರಿಸಿಕೊಳ್ಳಲಿದ್ದಾರೆ.

ಇನ್ನು ಲೀಗ್‌ ಇತಿಹಾಸದಲ್ಲಿ ಮೊದಲು 150 ಕೋಟಿ ರೂ.ಗಳ ಸಂಭಾವನೆಯು ಗಡಿ ದಾಟಿದ ಆಟಗಾರ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ . ನಾಲ್ಕು ಬಾರಿಯ ಚಾಂಪಿಯನ್ಸ್‌ ಸಿಎಸ್‌ಕೆ ತಂಡದಿಂದ ಧೋನಿ ಈವರೆಗೆ 152 ಕೋಟಿ ರೂ.ಗಳನ್ನು ಸ್ವೀಕರಿಸಿದ್ದಾರೆ. ಐಪಿಎಲ್‌ 2022 ಟೂರ್ನಿ ಸಲುವಾಗಿ ಸಿಎಸ್‌ಕೆ ಧೋನಿಯನ್ನು 2ನೇ ಆದ್ಯತೆಯ ಆಟಗಾರನನ್ನಾಗಿ ಉಳಿಸಿಕೊಂಡಿದ್ದು, ಈ ಸಲುವಾಗಿ 12 ಕೋಟಿ ರೂ. ವೇತನ ಕೊಟ್ಟಿದೆ.



Read more

[wpas_products keywords=”deal of the day gym”]