Karnataka news paper

ಬಜೆಟ್‌-2022: ತೆರಿಗೆದಾರರಿಗೆ ಸಿಗಲಿದೆ ಈ ಮೂರು ಕೊಡುಗೆಗಳು! ಹೀಗಾದಲ್ಲಿ ಲಕ್ಷ ರೂ. ಉಳಿತಾಯ ಸಾಧ್ಯ!


ಬೆಂಗಳೂರು: ಈ ಬಾರಿಯ ಬಜೆಟ್‌ನಲ್ಲಿ ತೆರಿಗೆದಾರರಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಕೊಡುಗೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಬ್ಯಾಂಕುಗಳ ಸಂಘವು, ಮೂರು ವರ್ಷಗಳ ಅವಧಿಯ ನಿಶ್ಚಿತ ಠೇವಣಿ (ಎಫ್‌ಡಿ)ಯನ್ನು ತೆರಿಗೆ ವಿನಾಯಿತಿ ವ್ಯಾಪ್ತಿಗೆ ತರಲು ಕೇಂದ್ರ ಸರಕಾರವನ್ನು ಕೋರಿದೆ. ಇದಲ್ಲದೆ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆ ಹೆಚ್ಚಾಗಿದೆ. ಪಂಚರಾಜ್ಯ ಚುನಾವಣೆ ಸನಿಹ ಬರುತ್ತಿದ್ದು, ಚುನಾವಣೆಗೂ ಮುನ್ನ ಜನರನ್ನು ಓಲೈಸಲು ಬಜೆಟ್‌ ಒಂದು ಉತ್ತಮ ಅಸ್ತ್ರ ಎನ್ನಬಹುದು. ಈ ನಿಟ್ಟಿನಲ್ಲಿ ಸಂಬಳದಾರರು ಬಜೆಟ್‌- 2022ರಲ್ಲಿ ಹಲವು ಕೊಡುಗೆಗಳನ್ನು ಪಡೆಯುವ ನಿರೀಕ್ಷೆ ಇದೆ. ಈ ಕುರಿತ ವಿವರ ಇಲ್ಲಿದೆ.

ತೆರಿಗೆ ವಿನಾಯಿತಿಯ ಮೂಲ ಮಿತಿ ಹೆಚ್ಚಾಗಬಹುದು

ಪ್ರಸ್ತುತ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ.ಗಳಾಗಿದ್ದು, ಕಳೆದ 8 ವರ್ಷಗಳಿಂದ ಏರಿಕೆ ಮಾಡಿರಲಿಲ್ಲ. ಕಳೆದ ಬಾರಿ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಈ ಬಾರಿ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಅದೇನೇ ಇರಲಿ, ಈ ಬಾರಿ ದೇಶದ ದೊಡ್ಡ ರಾಜ್ಯವಾದ ಯುಪಿ ಸೇರಿದಂತೆ 5 ರಾಜ್ಯಗಳಲ್ಲಿ ಚುನಾವಣೆ ಇದೆ. ಹೀಗಿರುವಾಗ ಬಜೆಟ್ ನಲ್ಲಿ ತೆರಿಗೆ ಮಿತಿ ಹೆಚ್ಚಿಸುವ ನಿರ್ಧಾರ ಜನರ ವಿಶ್ವಾಸ ಗೆಲ್ಲಲು ಸಹಾಯಕವಾಗಲಿದೆ.

ಸೆಕ್ಷನ್ 80ಸಿ ಅಡಿ ಹೂಡಿಕೆ ಮಿತಿ ಹೆಚ್ಚಳ ಸಾಧ್ಯತೆ

-80-

ಪ್ರಸ್ತುತ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80 ಸಿ ಅಡಿ ತೆರಿಗೆ ವಿನಾಯಿತಿಗೆ ಹೂಡಿಕೆ ಮಿತಿ 1.5 ಲಕ್ಷ ರೂ. ಇದೆ. 2014ರಲ್ಲಿ ₹1 ಲಕ್ಷ ಇದ್ದ ಹೂಡಿಕೆ ಮಿತಿಯನ್ನು ₹1.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಅಲ್ಲಿಂದೀಚೆಗೆ ಈ ಮಿತಿಯನ್ನು ಹೆಚ್ಚಿಸಲಾಗಿಲ್ಲ. ಉದ್ಯೋಗಿಗಳಿಗೆ ತೆರಿಗೆ ಉಳಿಸಲು ಸೆಕ್ಷನ್ 80ಸಿ ಪ್ರಮುಖ ವಿಭಾಗವಾಗಿದೆ. ಅಂದರೆ, ಈ ಸೆಕ್ಷನ್ ಅಡಿಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವುದು ಎಂದರೆ ಹೆಚ್ಚು ಜನರಿಗೆ ಸಹಾಯಕವಾಗಲಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ವರ್ಷದ FD ತೆರಿಗೆ ಮುಕ್ತವಾಗಿರಬಹುದು

-fd-

ತೆರಿಗೆ ಮುಕ್ತ ಎಫ್‌ಡಿಗಳ ಲಾಕ್-ಇನ್ ಅವಧಿಯನ್ನು ವಿಸ್ತರಿಸುವಂತೆ ಭಾರತೀಯ ಬ್ಯಾಂಕ್‌ಗಳ ಸಂಘ ಒತ್ತಾಯಿಸಿದೆ. ಸದ್ಯ 5 ವರ್ಷಗಳ ಎಫ್‌ಡಿ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದ್ದು, 3 ವರ್ಷ ಅವಧಿಯ ಅವಧಿಯ ಎಫ್‌ಡಿಗಳಿಗೂ ತೆರಿಗೆ ವಿನಾಯಿತಿ ನೀಡಬೇಕೆಂದು ಬೇಡಿಕೆ ಇಟ್ಟಿದೆ. ಬ್ಯಾಂಕುಗಳು ಬಡ್ಡಿದರಗಳನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ, ಆದರೆ ಎಫ್‌ಡಿಗೆ ಹೋಲಿಸಿದರೆ ಪಿಪಿಎಫ್‌ನಂತಹ ಉತ್ಪನ್ನಗಳ ಮೇಲಿನ ಬಡ್ಡಿದರ ಉತ್ತಮವಾಗಿದೆ. ಇದರಿಂದಾಗಿ ಜನರು ಎಫ್‌ಡಿಗಳಲ್ಲಿ ಕಡಿಮೆ ಹೂಡಿಕೆ ಮಾಡುತ್ತಿದ್ದಾರೆ. ಅನೇಕ ಜನರು ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ 5 ವರ್ಷಗಳ ಎಫ್‌ಡಿ ಕಡೆಗಣಿಸುತ್ತಿದ್ದಾರೆ. ಹೀಗಾಗಿ ತೆರಿಗೆ ವಿನಾಯಿತಿ ವ್ಯಾಪ್ತಿಗೆ 3 ವರ್ಷ ಅವಧಿಯ ಎಫ್‌ಡಿಯನ್ನೂ ಸೇರುವ ಸಾಧ್ಯತೆಗಳಿವೆ.



Read more…

[wpas_products keywords=”deal of the day”]