ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆಯಾದರೆ ಒಳ್ಳೆಯದು: ಯತ್ನಾಳ್ ಸಲಹೆ!
ನಮಗೆ ದಿಲ್ಲಿಗೆ ಹೋಗುವ ಚಟ ಇದೆ ಹಳೆಯ ಸ್ನೇಹಿತರಿದ್ದಾರೆ. ಅವರೊಂದಿಗೆ ಭೇಟಿ ಮಾಡಿ ಬರುತ್ತೇವೆ. ಸಂಪುಟ ಪುನಾರಚನೆ ಯಾವಾಗಾದರೂ ಮಾಡಲಿ ಒಳ್ಳೆಯ ಆಡಳಿತ ನೀಡಲಿ. ವಿಜಯೇಂದ್ರ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ವಿಜಯೇಂದ್ರ ಅಂತ ದೊಡ್ಡ ನಾಯಕರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿಯಲ್ಲ ಎಂದು ಯತ್ನಾಳ ತಿಳಿಸಿದರು.
ಯುಗಾದಿ ಹೊತ್ತಿಗೆ ಬದಲಾವಣೆ ಆಗುತ್ತದೆ. ಬದಲಾವಣೆ ಜಗದ ನಿಯಮ. ಬದಲಾವಣೆ ಆಗದಿದ್ದರೆ ಅದನ್ನು ಯುಗಾದಿ ಸಂಕ್ರಮಣ ಅಂತ ಯಾಕೆ ಕರೆಯಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೊರೊನಾ ವೈರಸ್ ಸಮಯ, ಸಂದರ್ಭ, ಮುಹೂರ್ತ ನೋಡಿಕೊಂಡು ಬರಲ್ಲ. ರಾಜ್ಯ ಸರಕಾರ ಕೂಡ ಜನಪರವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದರು.
ಮುರುಗೇಶ್ ನಿರಾಣಿ ತಿರುಗೇಟು
ಈ ನಡುವೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಮುರುಗೇಶ್ ನಿರಾಣಿ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು.. ನೈಟ್ ಕರ್ಫ್ಯೂ, 50:50 ನಿಮಯ ಮುಂದುವರಿಕೆ: ಸಚಿವ ಆರ್. ಅಶೋಕ್ ಹೇಳಿಕೆ
ಯತ್ನಾಳ್ ಹೇಳಿಕೆಗೆ ಸಚಿವ ನಿರಾಣಿ ಗರಂ ಆಗಿ, ಯತ್ನಾಳ್ ತುಂಬಾ ದೊಡ್ಡವರು, ದೊಡ್ಡವರ ಬಗ್ಗೆ ನಾನು ಮಾತಾಡಲ್ಲ ಸಿಎಂ ಆಗೋದು ಬಿಡೋದು ನನ್ನ ಕೈಯಲ್ಲಿ ಇಲ್ಲ ಎಂದರು.
ಸಿಎಂ ಆಗೋದಿಕ್ಕೆ ನಿರಾಣಿ ಸೂಟ್ ಹೊಲೆಸಿಕೊಂಡಿದ್ದಾರೆಂಬ ಯತ್ನಾಳ ಆರೋಪ ಕುರಿತು ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ನಾನು ಸೂಟ್ ಹೊಲೆಸಿಕೊಂಡಿದ್ದೇನೆ ಇಲ್ಲದಿದ್ದರೆ ನಿತ್ಯ ಸೂಟ್ ಇಲ್ಲದೇ ಹೇಗೆ ಓಡಾಡಲಿ ನಾನು ಎಂದು ತಿರುಗೇಟು ನೀಡಿದರು.
Read more
[wpas_products keywords=”deal of the day sale today offer all”]