The New Indian Express
ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಮಸೀದಿಯನ್ನು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದ ರೀತಿಯಲ್ಲಿ ಕೆಡವಿ ಹಾಕಬೇಕೆಂದು ಕರೆ ನೀಡಿದ ಕಾಳಿ ಮಠದ ರಿಷಿಕುಮಾರ್ ಸ್ವಾಮೀಜಿಯನ್ನು ಬಂಧಿಸಲಾಗಿದೆ.
ಶ್ರೀರಂಗಪಟ್ಟಣದ ಮಸೀದಿ ಮುಂದೆ ನಿಂತುಕೊಂಡು ವಿಡಿಯೊ ಮಾಡಿದ ರಿಷಿಕುಮಾರ್ ಸ್ವಾಮೀಜಿ, ದೇವಸ್ಥಾನದ ಜಾಗದಲ್ಲಿ ಮಸೀದಿಯನ್ನು ಕಟ್ಟಲಾಗಿದೆ, ಹೀಗಾಗಿ ಮಸೀದಿಯನ್ನು ಕೆಡವಬೇಕು ಎಂದು ಕರೆ ನೀಡಿದ್ದರು. ಮಸೀದಿಯೊಳಗಿರುವ ಕಂಬಗಳು, ಗೋಡೆಗಳು ಮತ್ತು ಕೆರೆ ಹಿಂದೂ ವಾಸ್ತುಶಿಲ್ಪವನ್ನು ಸೂಚಿಸುತ್ತದೆ. ಹೀಗಾಗಿ ಇದು ದೇವಸ್ಥಾನಕ್ಕೆ ಸೇರಿದ ಜಾಗ, ಇಲ್ಲಿ ಮಸೀದಿ ಇರಬಾರದು, ಹಿಂದೂಗಳು ಎಲ್ಲರೂ ಒಟ್ಟು ಸೇರಿ ಇಲ್ಲಿನ ಮಸೀದಿಯನ್ನು ನಾಶಮಾಡಬೇಕು ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಶೇರ್ ಮಾಡಿದ ರಿಷಿ ಕುಮಾರ್ ಸ್ವಾಮೀಜಿ ವಿರುದ್ಧ ಬಹಳ ಟೀಕೆಗಳು ವ್ಯಕ್ತವಾದವು. ಇದು ವೈರಲ್ ಆಗುತ್ತಿದ್ದಂತೆ ಶ್ರೀರಂಗಪಟ್ಟಣ ಪೊಲೀಸರು ಚಿಕ್ಕಮಗಳೂರಿನಲ್ಲಿರುವ ರಿಷಿಕುಮಾರ್ ಸ್ವಾಮೀಜಿ ಮಠಕ್ಕೆ ಹೋಗಿ ಅವರನ್ನು ಬಂಧಿಸಿ ಸ್ಥಳೀಯ ಕೋರ್ಟ್ ಮುಂದೆ ಹಾಜರುಪಡಿಸಿದರು.
ಇನ್ನು ರಿಷಿಕುಮಾರ್ ಸ್ವಾಮೀಜಿ ಪರ ವಕೀಲರು ಕೋರ್ಟ್ ಮುಂದೆ, ತಮ್ಮ ಕಕ್ಷಿದಾರ ವಿವಾದಿತ ಹೇಳಿಕೆ ನೀಡಿಲ್ಲ ಎಂದು ವಾದಿಸಿದರು.ಮಸೀದಿಯಲ್ಲಿ ದೇವಾಲಯದ ಗುರುತು ಪತ್ತೆಯಾಗಿ ರಿಷಿಕುಮಾರ ಸ್ವಾಮೀಜಿಗಳು ತಮ್ಮ ನೋವನ್ನು ಹೊರಹಾಕಿದರು ಅಷ್ಟೆ ಎಂದರು.
ಆದರೆ ಸರ್ಕಾರಿ ಪರ ವಕೀಲರು, ರಿಷಿಕುಮಾರ ಸ್ವಾಮೀಜಿ ಅವರನ್ನು ಬಿಡುಗಡೆ ಮಾಡಿದರೆ ಇನ್ನೊಂದು ಹೇಳಿಕೆ ನೀಡಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗಬಹುದು, ಅಲ್ಲದೆ ಸಾಕ್ಷಿಯನ್ನು ನಾಶಮಾಡಬಹುದು, ಹೀಗಾಗಿ ಅವರನ್ನು ಬಿಡುಗಡೆ ಮಾಡಬಾರದು ಎಂದು ವಾದಿಸಿದರು.
ನ್ಯಾಯಾಲಯ ತೀರ್ಪನ್ನು ಇಂದು ನೀಡಲಿದೆ.
Read more
[wpas_products keywords=”deal of the day”]