ಹೈಲೈಟ್ಸ್:
- ರಾಹುಲ್ ದ್ರಾವಿಡ್‌ರ 20 ವರ್ಷಗಳ ಹಳೆಯ ದಾಖಲೆ ಮುರಿದ ರಿಷಭ್ ಪಂತ್.
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಓಡಿಐ ಸರಣಿ.
- ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಓಡಿಐ ಪಂದ್ಯದಲ್ಲಿ ಈ ಸಾಧನೆ ಮಾಡಿದ ಪಂತ್.
ಶುಕ್ರವಾರ ಇಲ್ಲಿನ ಬೊಲೆಂಡ್ ಪಾರ್ಕ್ ನಲ್ಲಿ ನಡೆಯುತ್ತಿರುವ ಎರಡನೇ ಓಡಿಐ ಪಂದ್ಯದಲ್ಲಿ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಉರುಳಿದ ಬಳಿಕ ಕ್ರೀಸ್‌ಗೆ ಬಂದ ರಿಷಭ್ ಪಂತ್ ಎದುರಾಳಿ ಬೌಲರ್‌ಗಳಿಗೆ ಬೆವರಿಳಿಸಿದರು. ಆಡಿದ 71 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 85 ರನ್ ಚೆಚ್ಚಿದರು.
85 ರನ್ ಗಳಿಸುವುದರ ಜೊತೆಗೆ ರಿಷಭ್ ಪಂತ್, ನಾಯಕ ಕೆ.ಎಲ್ ರಾಹುಲ್ ಅವರೊಂದಿಗೆ ಮುರಿಯದ ಮೂರನೇ ವಿಕೆಟ್‌ಗೆ 115 ರನ್ ಜೊತೆಯಾಟವಾಡಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 150ರ ಗಡಿ ದಾಟಿಸಲು ನೆರವಾದರು ಹಾಗೂ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ್ದರು.
ಭಾರತ Vs ದಕ್ಷಿಣ ಆಫ್ರಿಕಾ ಎರಡನೇ ಓಡಿಐ ಸ್ಕೋರ್‌ಕಾರ್ಡ್
ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ಸಾಧನೆಗೆ ರಿಷಭ್ ಪಂತ್ ಭಾಜನರಾದರು. ಆ ಮೂಲಕ ಭಾರತದ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರ 20 ವರ್ಷಗಳ ಹಳೆಯ ದಾಖಲೆಯನ್ನು ಪಂತ್ ಪುಡಿ-ಪುಡಿ ಮಾಡಿದರು.
2001ರಲ್ಲಿ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರಾಹುಲ್ ದ್ರಾವಿಡ್ 77 ರನ್ ಸಿಡಿಸಿದ್ದರು. ಇದೀಗ ರಿಷಭ್ ಪಂತ್ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
‘ಅತಿ ಹೆಚ್ಚು ಬಾರಿ ಡಕ್‌ಔಟ್’, ಅನಗತ್ಯ ದಾಖಲೆ ಬರೆದ ಕೊಹ್ಲಿ!
ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಓಡಿಐ ರನ್ ಗಳಿಸಿದ ಭಾರತೀಯ ವಿಕೆಟ್ ಕೀಪರ್‌ಗಳ ಪಟ್ಟಿ
ರಿಷಭ್ ಪಂತ್: 85 vs ದಕ್ಷಿಣ ಆಫ್ರಿಕಾ 2022(ಪಾರ್ಲ್)
ರಾಹುಲ್ ದ್ರಾವಿಡ್: 77 vs ದಕ್ಷಿಣ ಆಫ್ರಿಕಾ 2001(ಡರ್ಬನ್)
ಎಂಎಸ್ ಧೋನಿ: 65 vs ದಕ್ಷಿಣ ಆಫ್ರಿಕಾ 2013 ( ಜೊಹಾನ್ಸ್‌ಬರ್ಗ್)
ರಾಹುಲ್ ದ್ರಾವಿಡ್: 62 vs ಇಂಗ್ಲೆಂಡ್ 2003 (ಡರ್ಬನ್)
ಕೇಪ್ ಟೌನ್‌ನಲ್ಲಿ ಶತಕ ಸಿಡಿಸಿದ್ದ ಪಂತ್: ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಶತಕ ಸಿಡಿಸಿದ್ದರು. ಆ ಮೂಲಕ ಹರಿಣಗಳ ನಾಡಿನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆಯನ್ನು 24ರ ಪ್ರಾಯದ ಪಂತ್ ಬರೆದಿದ್ದರು.
ಐಸಿಸಿ ಟೂರ್ನಿಗಳಲ್ಲಿ ಭಾರತದ ವೈಫಲ್ಯಕ್ಕೆ ಕಾರಣ ವಿವರಿಸಿದ ಗವಾಸ್ಕರ್!
ಓಡಿಐ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ವೈಯಕ್ತಿಕ ಗರಿಷ್ಠ ರನ್
ದಕ್ಷಿಣ ಆಫ್ರಿಕಾ ವಿರುದ್ಧ 85 (ಪಾರ್ಲ್, 2022)
ಇಂಗ್ಲೆಂಡ್ ವಿರುದ್ಧ 78 (ಪುಣೆ, 2021)
ಇಂಗ್ಲೆಂಡ್ ವಿರುದ್ಧ 77 (ಪುಣೆ, 2021)
ಇನ್ನು ಎರಡನೇ ಓಡಿಐ ಪಂದ್ಯದಲ್ಲಿ ತನ್ನ ಪಾಳಿನ 50 ಓವರ್‌ಗಳ ಅಂತ್ಯಕ್ಕೆ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ 288 ರನ್ ಸವಾಲಿನ ಗುರಿ ನೀಡಿದೆ. ಕೆ.ಎಲ್ ರಾಹುಲ್ 55 ರನ್ ಹಾಗೂ ಶಾರ್ದುಲ್ ಠಾಕೂರ್ ಅಜೇಯ 40 ರನ್ ಗಳಿಸಿದ್ದಾರೆ.
IND vs SA 2nd ODI: ಪಂತ್-ರಾಹುಲ್ ಫಿಫ್ಟಿ, ದ. ಆಫ್ರಿಕಾಗೆ 288 ರನ್ ಗುರಿ!
Read more
[wpas_products keywords=”deal of the day gym”]