Karnataka news paper

ನನ್ನ ಮುಖ ಕಾಣಿಸುತ್ತಿಲ್ಲವೇ?: ಉ. ಪ್ರದೇಶ ಚುನಾವಣೆ ಸಿಎಂ ಅಭ್ಯರ್ಥಿ ಬಗ್ಗೆ ಪ್ರಿಯಾಂಕಾ ಅಚ್ಚರಿಯ ಹೇಳಿಕೆ


ಹೈಲೈಟ್ಸ್‌:

  • ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ
  • ನಿಮಗೆ ನನ್ನ ಮುಖ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ ಪ್ರಿಯಾಂಕಾ
  • ಯಾರ ನೇತೃತ್ವದಲ್ಲಿ ಚುನಾವಣೆ ಪ್ರಚಾರ ಎಂಬ ಪ್ರಶ್ನೆಗೂ ಅದೇ ಉತ್ತರ
  • ಕಾಂಗ್ರೆಸ್ ಸಿಎಂ ಅಭ್ಯರ್ಥಿ ಬಗ್ಗೆ ಕುತೂಹಲ ಮೂಡಿಸಿದ ಪ್ರಿಯಾಂಕಾ ಗಾಂಧಿ

ಲಖನೌ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಉತ್ತರ ಪ್ರದೇಶದಲ್ಲಿ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಆಡಳಿತಾರೂಢ ಬಿಜೆಪಿ ಮತ್ತು ಅದರ ಪ್ರಮುಖ ಎದುರಾಳಿ ಸಮಾಜವಾದಿ ಪಕ್ಷಗಳ ನಡುವೆ ಕಾಂಗ್ರೆಸ್ ತನ್ನ ಅಸ್ತಿತ್ವ ಪ್ರದರ್ಶನಕ್ಕೆ ಪ್ರಯತ್ನಿಸುತ್ತಿದೆ. ಈ ಮಧ್ಯೆ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ಯುವಜನರಿಗೆ ಉದ್ಯೋಗ ಸೃಷ್ಟಿ ಯೋಜನೆಯ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ, ಮುಂಬರುವ ಚುನಾವಣೆಯಲ್ಲಿ ತಾವೇ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಗೂ ಮುನ್ನವೇ ಪ್ರಭಾವಿಗಳ ಕುಟುಂಬಗಳಲ್ಲಿ ಒಡಕು!
ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯಾಗಿ ಯೋಗಿ ಆದಿತ್ಯನಾಥ್ ಅವರನ್ನು ಹೆಸರಿಸಿದೆ. ಸಮಾಜವಾದಿ ಪಕ್ಷಕ್ಕೆ ಅಖಿಲೇಶ್ ಯಾದವ್ ನೇತೃತ್ವವಿದೆ. ಆದರೆ ಕಾಂಗ್ರೆಸ್‌ಗೆ ಯಾರು ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

‘ನಿಮಗೆ ಎಲ್ಲಾ ಕಡೆ ನನ್ನ ಮುಖ ಕಾಣಿಸುತ್ತಿದೆ. ಕಾಣಿಸುತ್ತಿಲ್ಲವೇ?’ ಎಂದು ಸುದ್ದಿಗಾರರಿಗೆ ಪ್ರಿಯಾಂಕಾ ಮರುಪ್ರಶ್ನೆ ಹಾಕಿದ್ದಾರೆ. ಚುನಾವಣಾ ರಾಜಕಾರಣದಿಂದ ದೂರವೇ ಇರುವ ಅವರು, ಈಗ ಅಖಾಡಕ್ಕೆ ಧುಮುಕಲು ಸಿದ್ಧರಿದ್ದಾರೆಯೇ ಎಂಬ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂದು ಅವರನ್ನು ಒತ್ತಿ ಪ್ರಶ್ನಿಸಿದಾಗ ಕೂಡ, ‘ನೀವು ನನ್ನ ಮುಖ ನೋಡಬಹುದು, ಕಾಣಿಸುತ್ತಿಲ್ಲವೇ?’ ಎಂದು ಪುನಃ ಉಚ್ಚರಿಸಿದ್ದಾರೆ.

ಅವರ ಚುನಾವಣಾ ಪದಾರ್ಪಣೆ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ. ಈ ಬಗ್ಗೆ ಕೇಳಿದಾಗ, ‘ಯಾವುದನ್ನೂ ಇದುವರೆಗೂ ತೀರ್ಮಾನ ಮಾಡಿಲ್ಲ. ನಾವು ಮಾಡಿದಾಗ ನಿಮಗೆ ತಿಳಿಸುತ್ತೇವೆ’ ಎಂದಿದ್ದಾರೆ.
ಬಿಪಿನ್ ರಾವತ್‌ ಸೋದರ ಬಿಜೆಪಿ ಸೇರ್ಪಡೆ : ಪೌರಿ ಘರ್‌ವಾಲ್‌ ಕ್ಷೇತ್ರದಿಂದ ಸ್ಪರ್ಧೆ?
ಅಖಿಲೇಶ್ ಯಾದವ್ ಮತ್ತು ಯೋಗಿ ಆದಿತ್ಯನಾಥ್ ಇಬ್ಬರೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಮುಖ್ಯಮಂತ್ರಿಯಾದ ಬಳಿಕ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಇಬ್ಬರೂ ಕಣಕ್ಕಿಳಿಯುತ್ತಿದ್ದಾರೆ.

2017ರಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಜತೆಗೂಡಿ ಚುನಾವಣೆ ಎದುರಿಸಿದ್ದವು. 2014ರಲ್ಲಿ 227 ಸೀಟುಗಳಲ್ಲಿ ಗೆದ್ದಿದ್ದ ಎಸ್‌ಪಿ ಕೇವಲ 47 ಸೀಟುಗಳಲ್ಲಿ ಜಯಗಳಿಸಿದ್ದರೆ, ಕಾಂಗ್ರೆಸ್ ಏಳು ಸ್ಥಾನಗಳಲ್ಲಿ ಗೆಲುವು ಕಂಡಿತ್ತು.



Read more

[wpas_products keywords=”deal of the day sale today offer all”]