Karnataka news paper

ಗರ್ಲ್‌ಫ್ರೆಂಡ್ ಅಮ್ಮನಿಗೆ ಕಿಡ್ನಿ ದಾನ ಮಾಡಿದ: ಒಂದೇ ತಿಂಗಳಲ್ಲಿ ಕೈಕೊಟ್ಟು ಬೇರೆ ಮದುವೆಯಾದಳು!


ಹೈಲೈಟ್ಸ್‌:

  • ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ನಡೆದ ಘಟನೆ ವೈರಲ್
  • ಟಿಕ್‌ಟಾಕ್‌ನಲ್ಲಿ ತನ್ನ ಕಥೆ ಹೇಳಿಕೊಂಡಿರುವ ದುರಂತ ಪ್ರೇಮಿ ಶಿಕ್ಷಕ
  • ಪ್ರೇಯಸಿಯ ಅಮ್ಮನ ಚಿಕಿತ್ಸೆಗೆ ತನ್ನದೇ ಕಿಡ್ನಿ ದಾನ ಮಾಡಿದ್ದ ಪ್ರಿಯಕರ
  • ನಿನ್ನಲ್ಲಿ ಒಂದೇ ಕಿಡ್ನಿ ಇದೆ ಎಂದು ಬೇರೆ ಮದುವೆಯಾದ ಪ್ರಿಯತಮೆ

ಮೆಕ್ಸಿಕೋ ಸಿಟಿ: ಪ್ರೀತಿ ಬಗ್ಗೆ ತರಹೇವಾರಿ ವ್ಯಾಖ್ಯಾನಗಳಿವೆ. ಪ್ರೀತಿ ಪ್ರೇಮದ ಕುರಿತು ನೂರಾರು ದಂತಕಥೆಗಳು ಕೂಡ ಇವೆ. ತನ್ನ ಪ್ರೇಮಿಗಾಗಿ ತ್ಯಾಗಗಳನ್ನು ಮಾಡಿದವರನ್ನು ‘ರೋಲ್ ಮಾಡೆಲ್‌ಗಳು’ ಎಂದು ಕರೆಯುವುದಿದೆ. ‘ಪ್ರೀತಿ ಮಧುರ ತ್ಯಾಗ ಅಮರ’ ಎಂಬ ಉಕ್ತಿಯಂತೂ ಯುವಜನರ ಬಾಯಲ್ಲಿ ನಲಿದಾಡುತ್ತಿರುತ್ತದೆ. ಪ್ರೇಮಿಗಳ ದಿನ ಬೇರೆ ಹತ್ತಿರ ಬರುತ್ತಿದೆ. ಹೀಗಾಗಿ ಇಂತಹ ಪ್ರೇಮ ಕನವರಿಕೆಗಳು ಎಲ್ಲೆಡೆ ಸರ್ವೇ ಸಾಮಾನ್ಯ. ಆದರೆ ಪ್ರೀತಿ-ಪ್ರೇಮ, ಅದಕ್ಕಾಗಿ ಮಾಡುವ ತ್ಯಾಗಗಳೆಲ್ಲ ಪುಸ್ತಕದ ಬದನೆಕಾಯಿ ಎಂಬ ಮಾತನ್ನು ಸತ್ಯ ಎಂದು ಸಾಬೀತುಪಡಿಸಲು ಕೂಡ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ‘ಪ್ರೀತಿ ಸಾಬೀತುಪಡಿಸಲು ಪ್ರಾಣ ತ್ಯಾಗ ಮಾಡಲೂ ಸಿದ್ಧ’ ಎಂದು ಭಾವುಕರಾಗಿ ಹೇಳುವ ಪ್ರೇಮಿಗಳನ್ನು ನೋಡಿದ್ದೇವೆ. ಹೀಗೆ ‘ತ್ಯಾಗ’ ಮಾಡಿದವನೊಬ್ಬ, ಅತ್ತ ಪ್ರೀತಿಯೂ ಇಲ್ಲ, ಇತ್ತ ಕಿಡ್ನಿಯೂ ಇಲ್ಲ ಎಂದು ಪರದಾಡುತ್ತಿದ್ದಾನೆ!

ಪ್ರೇಯಸಿ ತನ್ನವಳೆಂದ ಮೇಲೆ ಅವರ ಕುಟುಂಬದವರೂ ತನ್ನವರೇ ಅಲ್ಲವೇ? ಹೇಗೂ ಮದುವೆ ಆಗುತ್ತೇವೆ, ಆಕೆಗಾಗಿ ಇಂತಹ ದೊಡ್ಡ ತ್ಯಾಗ ದೊಡ್ಡದ್ದೇನಲ್ಲ ಎಂದು ವ್ಯಕ್ತಿಯೊಬ್ಬ, ತನ್ನ ಪ್ರೇಯಸಿಯ ತಾಯಿಗೆ ನಡೆಸಬೇಕಿದ್ದ ಕಿಡ್ನಿ ಶಸ್ತ್ರ ಚಿಕಿತ್ಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ್ದಾನೆ. ಎಂತಹ ಮಹಾನ್ ತ್ಯಾಗಿಯಲ್ಲವೇ? ಆದರೆ ಇದರ ನಂತರದ ಘಟನೆ ತಮಾಷೆ ಎನಿಸಿದರೂ, ಪ್ರೀತಿಯ ಮೇಲಿನ ನಂಬಿಕೆಯನ್ನು ಚೂರು ಮಾಡುವುದಂತೂ ಸತ್ಯ. ಅಮ್ಮನಿಗೆ ಗೆಳೆಯನ ಕಿಡ್ನಿ ಬಂದಿದ್ದೇ ತಡ, ಆ ಯುವತಿ ತನ್ನ ವರಸೆ ಬದಲಿಸಿದ್ದಾಳೆ. ‘ನಿನ್ನ ಬಳಿ ಇರುವುದು ಒಂದೇ ಕಿಡ್ನಿ. ಅದನ್ನು ನಂಬಿಕೊಂಡು ನಿನ್ನ ಜತೆ ಹೇಗೆ ಬದುಕುವುದು?’ ಎಂದು ಆತನನ್ನು ತಿರಸ್ಕರಿಸಿ ಬೇರೊಬ್ಬನನ್ನು ಮದುವೆಯಾಗಿದ್ದಾಳೆ!
ಓಡಿಹೋಗುವ ಪ್ರೇಮಿಗಳಿಗೆ ಆಶ್ರಯ, ರಕ್ಷಣೆ ಎರಡನ್ನೂ ನೀಡುವ ದೇವಾಲಯವಿದು..! ಎಲ್ಲಿದೆ ಗೊತ್ತಾ..?
ಅಂದಹಾಗೆ, ಈ ಘಟನೆ ನಡೆದಿರುವುದು ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ. ಶಿಕ್ಷಕನಾಗಿರುವ ಉಜೀಲ್ ಮಾರ್ಟಿನೆಜ್ ಎಂಬಾತ ತನ್ನ ಗರ್ಲ್‌ಫ್ರೆಂಡ್ ಎಸಗಿದ ದ್ರೋಹದ ಬಗ್ಗೆ ಸಾಲು ಸಾಲು ವಿಡಿಯೋಗಳಲ್ಲಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾನೆ. ಪ್ರೇಯಸಿಯ ತಾಯಿಗೆ ನಡೆಸಬೇಕಿದ್ದ ಮೂತ್ರಪಿಂಡ ಶಸ್ತ್ರಚಿಕಿತ್ಸೆಗಾಗಿ ತನ್ನ ಕಿಡ್ನಿಯನ್ನೇ ಆತ ದಾನ ಮಾಡಿದ್ದಾನೆ. ಇದಾಗಿ ಒಂದು ತಿಂಗಳ ಒಳಗೇ, ಕಿಡ್ನಿಗೆ ಪ್ರತಿಯಾಗಿ ಕೈಕೊಟ್ಟು ಪ್ರೇಯಸಿ ಟಾಟಾ ಹೇಳಿದ್ದಾಳೆ. ಒಂದು ಕಿಡ್ನಿಯನ್ನು ಕಳೆದುಕೊಂಡವನ ಇದ್ದೊಂದು ಹೃದಯವನ್ನು ಭಗ್ನ ಮಾಡಿದ್ದಾಳೆ.

ತನ್ನ ಪ್ರೇಯಸಿಯ ತಾಯಿಗಾಗಿ ಕಿಡ್ನಿ ದಾನ ಮಾಡಿದ್ದನ್ನು ಮತ್ತು ಆಕೆ ತನ್ನನ್ನು ತ್ಯಜಿಸಿ ಬೇರೊಬ್ಬನನ್ನು ಮದುವೆಯಾಗಿರುವುದನ್ನು ಉಜೀಲ್ ಸ್ಪ್ಯಾನಿಶ್ ಭಾಷೆಯಲ್ಲಿ ಬರೆದುಕೊಂಡಿದ್ದಾನೆ. ಜತೆಗೆ ಅದನ್ನು ಟಿಕ್ ಟಾಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದು, ಆ ವಿಡಿಯೋ 16 ಮಿಲಿಯನ್‌ಗೂ ಅಧಿಕ ವೀಕ್ಷಣೆಗೆ ಒಳಪಟ್ಟಿದೆ.

ಯುಜೀಲ್ ವಿಡಿಯೋ ಕಂಡು ಜನರು ಮರುಗಿದ್ದಾರೆ. ನಿನ್ನಂತಹ ಒಳ್ಳೆಯ ವ್ಯಕ್ತಿಯೊಂದಿಗೆ ಬದುಕಲು ಆಕೆಗೆ ಯೋಗ್ಯತೆ ಇಲ್ಲ. ಹೀಗಾಗಿ ದುಃಖ ಪಡದಿರು ಎಂದು ಸಾಂತ್ವನ ಹೇಳಿದ್ದಾರೆ. ಹಾಗೆಯೇ ಈ ಘಟನೆ ಬಗ್ಗೆ ಚಿಂತಿಸುತ್ತಾ ಕೂರುವ ಬದಲು ಮುನ್ನೆಡೆಯಿರಿ, ನಿನ್ನನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಗುತ್ತಾಳೆ ಎಂದು ಧೈರ್ಯ ಹೇಳಿದ್ದಾರೆ.
30 ವರ್ಷಗಳ ಪ್ರೀತಿ, 65ರ ಇಳಿ ವಯಸ್ಸಿನಲ್ಲಿ ಮದುವೆ..! ಮೇಲುಕೋಟೆಯಲ್ಲೊಂದು ಅಪರೂಪದ ವಿವಾಹ..!
ಇನ್ನೊಂದೆಡೆ ಯುಜೀಲ್, ತನಗೆ ಕೈಕೊಟ್ಟ ಪ್ರೇಯಸಿ ಬಗ್ಗೆ ಕೆಟ್ಟ ಮಾತು ಆಡಿಲ್ಲ. ತಾವಿಬ್ಬರೂ ದೂರವಾಗಿದ್ದರೂ ಒಳ್ಳೆಯ ಸ್ನೇಹಿತರಾಗಿ ಇದ್ದೇವೆ ಎಂದು ಹೇಳಿಕೊಂಡಿದ್ದಾನೆ. ಆಕೆಯ ವಿರುದ್ಧ ಯಾವ ಕೋಪವೂ ಇಲ್ಲ. ಒಬ್ಬರನ್ನೊಬ್ಬರು ದ್ವೇಷ ಮಾಡುವುದಿಲ್ಲ ಎಂದಿದ್ದಾನೆ. ಆದರೆ ಈ ರೀತಿ ಸಂಬಂಧದಲ್ಲಿ ಇರುವಾಗ ಯಾರೂ ಕೂಡ ಇಂತಹ ತಪ್ಪನ್ನು ಮಾಡಬೇಡಿ ಎಂದು ಕಿವಿ ಮಾತು ಹೇಳಿದ್ದಾನೆ. ‘ನಮ್ಮ ಬಳಿ ಇರುವುದು ಎರಡೇ ಕಿಡ್ನಿಗಳು. ಆದರೆ ಈಗ ಉಳಿದಿರುವುದು ಒಂದೇ ಕಿಡ್ನಿ. ಹಾಗೆಂದು ನನಗೆ ಗೊತ್ತೂ ಆಗುತ್ತಿಲ್ಲ’ ಎಂದು ಯುಜೀಲ್ ತಮಾಷೆಯಾಗಿ ಹೇಳಿಕೊಂಡಿದ್ದಾನೆ.



Read more

[wpas_products keywords=”deal of the day sale today offer all”]