Karnataka news paper

‘ಅಬ ಜಬ ದಬ’ ಚಿತ್ರದ ಹೀರೋ ಪೃಥ್ವಿ ಅಂಬರ್?


Source : The New Indian Express

ಬೆಂಗಳೂರು: ಈ ಹಿಂದೆ ಹರಿಪ್ರಿಯಾ ನಾಯಕಿಯಾಗಿದ್ದ ‘ಕನ್ನಡ್ ಗೊತ್ತಿಲ್ಲ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಮಯೂರ ರಾಘವೇಂದ್ರ, ಈಗ ಎರಡನೇ ಪ್ರಯತ್ನವಾಗಿ ‘ಅಬ ಜಬ ದಬ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ತಮ್ಮ ಮುಂದಿನ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಚಿತ್ರದ ನಿರ್ದೇಶಕರು ಪಾತ್ರ ವರ್ಗದ ವಿವರಗಳನ್ನು ಮುಚ್ಚಿಟ್ಟಿದ್ದರೂ, ಪೃಥ್ವಿ ಅಂಬರ್ ಈ ಚಿತ್ರದ ನಾಯಕರಾಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದು ಫ್ಯಾಂಟಸಿ ರೋಮ್-ಕಾಮ್  ಸಿನಿಮಾ ಎನ್ನಲಾಗುತ್ತಿದೆ. 

ಅಬ ಜಬ ದಬದ ಪೋಸ್ಟರ್ ನಲ್ಲಿ ಶಂಕರ್ ನಾಗ್ ಇರಲಿದ್ದಾರೆ ಎಂಬ ಶೀರ್ಷಿಕೆ  ಸಾಕಷ್ಟು ಗಮನ ಸೆಳೆದಿದೆ. ಇದು ಪೃಥ್ವಿ ಅಂಬರ್ ಪಾತ್ರದ ಬಗ್ಗೆಯೂ ಕುತೂಹಲ ಮೂಡಿಸಿದೆ. ಜನವರಿಯಲ್ಲಿ ಅಧಿಕೃತ ಪಾತ್ರವರ್ಗದ ವಿವರ ಹೊರಬೀಳುವ ಸಾಧ್ಯತೆಯಿದೆ. 2019ರಲ್ಲಿ ಬಿಡುಗಡೆಯಾಗಿದ್ದ ದಿಯಾ ಚಿತ್ರದಲ್ಲಿ ಪೃಥ್ವಿ ಅಂಬರ್ ಅಭಿನಯಿಸಿದ್ದರು. ಲೈಫ್ ಇಸ್ ಬ್ಯೂಟಿಫುಲ್, ಶುಗರ್ ಲೆಸ್, ಬೈರಾಗಿ ಮತ್ತಿತರ ಚಿತ್ರಗಳನ್ನು ಅವರು ಅಭಿನಯಿಸಿದ್ದಾರೆ. 

ಪೃಥ್ವಿ ಅಂಬರ್ ಪ್ರಸ್ತುತ ಮಂಗಳೂರಿನಲ್ಲಿ  ದರ್ಶನ್ ಅಪೂರ್ವ ನಿರ್ದೇಶನದ ಚೊಚ್ಚಲ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ.  ಕುಶಿ ರವಿ ಈ ಚಿತ್ರದ ನಾಯಕಿಯಾಗಿದ್ದಾರೆ. ನಿರ್ದೇಶಕ ಮಯೂರು ಕಥೆ ಬರೆದಿರುವ ಚಿತ್ರಕ್ಕೆ ಎಸ್ ರಾಮ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅನಂತ ಕೃಷ್ಣ ಚಿತ್ರ ನಿರ್ಮಿಸುತ್ತಿದ್ದಾರೆ.



Read more…