ಹೈಲೈಟ್ಸ್:
- ‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್ ಅವರಿಗೆ ಕೊರೊನಾ ಸೋಂಕು
- ರಂಜನಿಗೆ ಆದಷ್ಟು ಬೇಗ ಹುಷಾರಾಗಿ ಎಂದ ಕಿರಣ್ ರಾಜ್
- ತಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂದ ರಂಜನಿ ರಾಘವನ್
ಕನ್ನಡತಿ ಧಾರಾವಾಹಿಯಲ್ಲಿ ಭುವನೇಶ್ವರಿ ಪಾತ್ರ ಮಾಡುತ್ತಿರುವ ನಟಿ ರಂಜನಿ ರಾಘವನ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಹೀಗಾಗಿ ನಟ ಕಿರಣ್ ರಾಜ್ ಅವರು ರಂಜನಿಗೆ ಬೇಗ ಹುಷಾರಾಗಿ (Get well soon Champ) ಎಂದು ಹಾರೈಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ.
ರಂಜನಿ ರಾಘವನ್‌ಗೆ ಶುಭ ಹಾರೈಸಿದ ಕಿರಣ್ ರಾಜ್
ಕಿರಣ್ ರಾಜ್ ಹಾರೈಕೆಗೆ ಧನ್ಯವಾದ ತಿಳಿಸಿದ ರಂಜನಿ ರಾಘವನ್ ಅವರು “ಧನ್ಯವಾದಗಳು, ನಾನು ಎಲ್ಲರ ಸಂದೇಶಗಳನ್ನು ನೋಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು, ನನಗೆ ಕೊರೊನಾ ವೈರಸ್ ಸೋಂಕು ತಗುಲಿದೆ, ನಾನು ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದೇನೆ. ಚಿಂತೆ ಮಾಡುವ ಅಗತ್ಯವಿಲ್ಲ” ಎಂದು ರಂಜನಿ ರಾಘವನ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
‘ಅವಸ್ಥಾಂತರ’ದಲ್ಲಿ ಕಾಮನೆಗಳ ಕಥೆ ಹೇಳ್ತಾರೆ ರಂಜನಿ ರಾಘವನ್, ಸಂಚಾರಿ ವಿಜಯ್ & ದಿಶಾ!
ಸಿನಿಮಾಗಳಲ್ಲಿಯೂ ರಂಜನಿ ರಾಘವನ್ ಅಭಿನಯ
ನೆಚ್ಚಿನ ‘ಕನ್ನಡತಿ’ ಭುವಿಗೆ ಅನಾರೋಗ್ಯವಾಗಿರೋದನ್ನು ಕಂಡು ಅನೇಕರು ಗಾಬರಿಯಾಗಿ ರಂಜನಿಗೆ ಸಂದೇಶ ಕಳಿಸಿದ್ದರು. ಅಷ್ಟೇ ಅಲ್ಲದೆ ಬೇಗ ಹುಷಾರಾಗುವಂತೆ ಹಾರೈಸುತ್ತಿದ್ದಾರೆ. ಧಾರಾವಾಹಿ ಜೊತೆಗೆ ರಂಜನಿ ಅವರು ಸಿನಿಮಾಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ‘ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಸಿನಿಮಾವನ್ನು ರಂಜನಿ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಿಗಂತ್, ಐಂದ್ರಿತಾ ರೇ ನಟಿಸಿದ್ದಾರೆ. ವಿನಾಯಕ್ ಕೋಡ್ಸರ್ ನಿರ್ದೇಶನ ಮಾಡುತ್ತಿದ್ದಾರೆ. ರಂಜನಿ ‘ಅವಸ್ಥಾಂತರ’ ಎಂಬ ಸಿನಿಮಾ ಕೂಡ ಒಪ್ಪಿಕೊಂಡಿದ್ದರು.
ಪುಸ್ತಕ ಬರೆದಿರುವ ರಂಜನಿ ರಾಘವನ್
ರಂಜನಿ ರಾಘವನ್ ಅವರು ಪುಸ್ತಕ ಕೂಡ ಬರೆದಿದ್ದು, ಅದಕ್ಕೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು “ಅನಗತ್ಯ ವಸ್ತುಗಳನ್ನು ಕೊಳ್ಳದಿರೋದು, ಪ್ರತಿ ತಿಂಗಳು ನಮ್ಮ ಆದಾಯದ 10% ಆದರೂ ಉಳಿತಾಯ ಮಾಡುವುದು, ಸಾಲದಿಂದ ದೂರವಿರೋದು, ಹಾಕಿದ್ದ ಬಂಡವಾಳ ಪುನಃ ಬರತ್ತೆ ಎನ್ನುವಾಗ ಮಾತ್ರ ಅಲ್ಲಿ ಹೂಡಿಕೆ ಮಾಡುವುದು, ಖರ್ಚು ಮಾಡದೆ ಜಿಪುಣರಾಗುವುದು ಬೇಡ” ಎಂದು ಹೊಸ ವರ್ಷಕ್ಕೆ ಹಣ ಉಳಿಸಲು ಐದು ಟಿಪ್ಸ್ ನೀಡಿದ್ದರು.
ನಿಮ್ಮ ಜೇಬಿನಲ್ಲಿ ಯಾವಾಗಲೂ ಹಣ ಇರಬೇಕಾ? ರಂಜನಿ ಕೊಟ್ಟಿರುವ 5 ಸಲಹೆಗಳನ್ನ ತಪ್ಪದೆ ಅನುಸರಿಸಿ…
‘ಕನ್ನಡತಿ’ಯಲ್ಲಿ ಏನು ನಡೆಯುತ್ತಿದೆ?
‘ಕನ್ನಡತಿ’ ಧಾರಾವಾಹಿಯಲ್ಲಿ ಅಂತೂ ಹರ್ಷನ ಪ್ರೀತಿಯನ್ನು ಭುವನೇಶ್ವರಿ ಒಪ್ಪಿಕೊಂಡಿದ್ದಾಳೆ. ಆದರೆ ಈ ವಿಚಾರ ವರೂಧಿನಿಗೆ ಗೊತ್ತಾದರೆ ಹೇಗೆ? ಯಾವ ರೀತಿಯಲ್ಲಿ ಅವರು ಪ್ರತಿಕ್ರಿಯೆ ನೀಡುತ್ತಾರೆ? ವರೂಧಿನಿ ಕಥೆ ಮುಂದೆ ಏನಾಗುವುದು? ಸಾನಿಯಾ ಇನ್ನೇನು ಕುತಂತ್ರ ಮಾಡುತ್ತಾಳೆ ಎಂಬುದರ ಕುರಿತು ಕುತೂಹಲಕಾರಿಯಾಗಿ ಎಪಿಸೋಡ್ ಪ್ರಸಾರವಾಗುತ್ತಿದೆ.
ನಾನೂ ತುಂಬ ಕಂಪ್ಲೇಂಟ್ ಮಾಡಿದೀನಿ: ‘ಕನ್ನಡತಿ’ ನಟಿ ರಂಜನಿ ರಾಘವನ್
Read more
[wpas_products keywords=”deal of the day party wear dress for women stylish indian”]