ಹೈಲೈಟ್ಸ್:
- ಅಕ್ಟೋಬರ್ 29ರಂದು ನಿಧನರಾದ ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್‌ಕುಮಾರ್
- ಪುನೀತ್ ರಾಜ್‌ಕುಮಾರ್ ನೆನಪಲ್ಲಿ ಪ್ರೈಮ್ ಕಡೆಯಿಂದ ವಿಶೇಷ ಕಾರ್ಯಕ್ರಮ
- ಪುನೀತ್ ಅವರ ಐದು ಸಿನಿಮಾಗಳ ಉಚಿತ ಪ್ರದರ್ಶನ
ಪಿಆರ್‌ಕೆ ಬ್ಯಾನರ್‌ನ ಮೂರು ಹೊಸ ಸಿನಿಮಾಗಳು
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ಸಿದ್ಧಗೊಂಡಿರುವ ಹೊಸ ಸಿನಿಮಾಗಳಾದ ‘ಒನ್ ಕಟ್ ಟು ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾಗಳನ್ನು ನೇರವಾಗಿ ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಸದ್ಯಕ್ಕೆ ಈ ಮೂರೂ ಸಿನಿಮಾಗಳು ಅಮೇಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗಲಿದೆ ಎಂದಷ್ಟೇ ಮಾಹಿತಿ ನೀಡಲಾಗಿದ್ದು, ಬಿಡುಗಡೆ ದಿನಾಂಕವನ್ನು ಅತೀ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಹೇಳಲಾಗಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?
‘ಪುನೀತ್ ರಾಜ್‌ಕುಮಾರ್ ಅವರ ವಿಭಿನ್ನ ದೃಷ್ಟಿಕೋನವು ಹಲವಾರು ವರ್ಷಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಅವರಿಗೆ ಅರ್ಹವಾದ ಅಭಿಮಾನಿಗಳನ್ನು ಮತ್ತು ಗೌರವವನ್ನು ಇದು ಗಳಿಸಿತ್ತು. ಆ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಇದು ನಮ್ಮ ಪ್ರಯತ್ನವಾಗಿದೆ. ಪ್ರೈಮ್ ವೀಡಿಯೋ ಜೊತೆಗೆ ನಮ್ಮ ಯಶಸ್ವಿ ಒಡನಾಟ ಮತ್ತು ನಮ್ಮ ಸಿನಿಮಾಗಳನ್ನು ಪ್ರಪಂಚದಾದ್ಯಂತದ ವೀಕ್ಷಕರಿಗೆ ಕೊಂಡೊಯ್ಯುವುದಕ್ಕೆ ನಾವು ಸಂತೋಷಪಡುತ್ತೇವೆ.
ಮೂರು ಹೊಸ ಸಿನಿಮಾಗಳ ಘೋಷಣೆಯು ಅಪ್ಪು ಅವರ ಪರಿಣಿತಿ ಮತ್ತು ಪರಂಪರೆಯ ದ್ಯೋತಕವಾಗಿದೆ’ ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್.
ಇನ್ನು, ಸತ್ಯ ಪ್ರಕಾಶ್ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾವು ಮಾನವ ಭಾವನೆಗಳು ಮತ್ತು ಸಾಮಾಜಿಕ ಸವಾಲುಗಳ ಆಧುನಿಕ ಕಾಲದ ಪ್ರತಿಬಿಂಬವಾಗಿದ್ದು, ಅಥರ್ವ, ಪ್ರಕಾಶ್, ಕೆ. ಜಯರಾಮ್, ಧರ್ಮಣ್ಣ ಕಡೂರ್ ಮತ್ತು ನಟರಾಜ್ ಅವರಂತಹ ಪ್ರತಿಭಾನ್ವಿತ ನಟರು ಬಣ್ಣ ಹಚ್ಚಿದ್ದಾರೆ. ಒಂದು ದಿನದ ಕಥೆಯನ್ನು ಹೊಂದಿರುವ ‘ಒನ್ ಕಟ್ ಟು ಕಟ್’ ಸಿನಿಮಾದಲ್ಲಿ ದಾನೀಶ್ ಸೇಠ್, ಪ್ರಕಾಶ್ ಬೆಳವಾಡಿ ಮತ್ತು ಸಂಯುಕ್ತಾ ಹೊರನಾಡು ನಟಿಸಿದ್ದಾರೆ. ಅರ್ಜುನ್ ಕುಮಾರ್ ನಿರ್ದೇಶನದ ‘ಫ್ಯಾಮಿಲಿ ಪ್ಯಾಕ್’ ಸಿನಿಮಾವು ಒಂದು ರೊಮ್ಯಾಂಟಿಕ್ ಕಾಮಿಡಿಯಾಗಿದ್ದು, ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮದುವೆ ಆಹ್ವಾನ ಪತ್ರಿಕೆಯಲ್ಲಿ ಪುನೀತ್ ಫೋಟೋ; ‘ಅಪ್ಪು ಅಮರ’ ಎಂದ ನವಜೋಡಿ
‘ಪುನೀತ್ ರಾಜ್‌ಕುಮಾರ್ ಅವರ ಸೃಜನಶೀಲ ಪ್ರತಿಭೆಯನ್ನು ಗೌರವಿಸಿ, ಪ್ರೈಮ್ ವಿಡಿಯೋ ಇಂದು ಪಿಆರ್‌ಕೆ ಪ್ರೊಡಕ್ಷನ್‌ನೊಂದಿಗೆ ಮೂರು ಹೊಸ ಕನ್ನಡ ಚಲನಚಿತ್ರಗಳ ಬಿಡುಗಡೆಯನ್ನು ಪ್ರಕಟಿಸಿದೆ. ಇದರಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಒನ್ ಕಟ್ ಟು ಕಟ್ ಮತ್ತು ಫ್ಯಾಮಿಲಿ ಪ್ಯಾಕ್ ಪ್ರೈಮ್ ಸದಸ್ಯರಿಗೆ ವಿಶೇಷವಾಗಿ ಲಭ್ಯವಿರುತ್ತದೆ. ಕನ್ನಡ ಸಿನಿಮಾರಂಗದ ಮೇರು ವ್ಯಕ್ತಿ ಪುನೀತ್‌ಗೆ ವಿನಮ್ರ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ, ಅವರ ಐದು ಸ್ಮರಣೀಯ ಸಿನಿಮಾಗಳನ್ನು ಪ್ರೈಮ್ ವೀಡಿಯೋ ಉಚಿತವಾಗಿ ಒದಗಿಸುತ್ತದೆ. ಲಾ, ಫ್ರೆಂಚ್ ಬಿರಿಯಾನಿ, ಕವಲುದಾರಿ, ಮಾಯಾಬಜಾರ್ ಮತ್ತು ಯುವರತ್ನ ಸಿನಿಮಾಗಳು ಫೆಬ್ರವರಿ 1ರಿಂದ ಒಂದು ತಿಂಗಳವರೆಗೆ ಪ್ರೈಮ್ ಸದಸ್ಯರಲ್ಲದವರಿಗೂ ಉಚಿತವಾಗಿ ವೀಕ್ಷಿಸಲು ಲಭ್ಯವಿರುತ್ತದೆ. ಕೇವಲ ಪ್ರೈಮ್ ಸದಸ್ಯರಿಗೆ ಸೀಮಿತವಾಗಿಸದೆ, ಈ ಐದು ಚಲನಚಿತ್ರಗಳನ್ನು ಅಮೆಜಾನ್ ಖಾತೆಯನ್ನು ಹೊಂದಿರುವ ಯಾರಿಗಾದರೂ ವಿಶ್ವಾದ್ಯಂತ ಉಚಿತವಾಗಿ ಸ್ಟ್ರೀಮ್ ಮಾಡಲು ಅವಕಾಶವಿದೆ. ಸಿನಿಮಾ ದಂತಕಥೆಗೆ ತಮ್ಮ ಪ್ರೀತಿ ಮತ್ತು ಗೌರವವನ್ನು ತೋರಿಸಲು ಒಂದು ಸಾಧಾರಣ ಪ್ರಯತ್ನವಾಗಿದೆ’ ಎಂದು ಪ್ರೈಮ್ ಸಂಸ್ಥೆ ಹೇಳಿಕೊಂಡಿದೆ.
ಜೀ ಕನ್ನಡದಲ್ಲಿ ‘ಕರುನಾಡ ರತ್ನ ಪುನೀತ್’; ಅಪ್ಪು ಸಾಧನೆ, ಜೀವನ ಮೌಲ್ಯಗಳ ಅನಾವರಣ

Read more
[wpas_products keywords=”deal of the day party wear dress for women stylish indian”]