Karnataka news paper

ಮೊದಲರ್ಧ ಶೂಟಿಂಗ್ ಮುಗಿಸಿದ ‘ಸಪ್ತ ಸಾಗರದಾಚೆ ಎಲ್ಲೋ’; ಮುಂದಿನ ಚಿತ್ರೀಕರಣ ಯಾವಾಗ?


ಹೈಲೈಟ್ಸ್‌:

  • ರಕ್ಷಿತ್ ಶೆಟ್ಟಿ-ನಿರ್ದೇಶಕ ಹೇಮಂತ್ ರಾವ್ ಕಾಂಬಿನೇಷನ್‌ನ 2ನೇ ಸಿನಿಮಾ ಇದು
  • ಚಿತ್ರಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಶೀರ್ಷಿಕೆ ಇಟ್ಟಿರುವ ನಿರ್ದೇಶಕರು
  • ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ಎರಡು ಶೇಡ್‌ನ ಪಾತ್ರ

ಹರೀಶ್‌ ಬಸವರಾಜ್‌
‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದ ನಂತರ ನಿರ್ದೇಶಕ ಹೇಮಂತ್‌ ರಾವ್‌ ಮತ್ತು ರಕ್ಷಿತ್‌ ಶೆಟ್ಟಿ ‘ಸಪ್ತ ಸಾಗರದಾಚೆ ಎಲ್ಲೋ‘ ಎಂಬ ವಿಶಿಷ್ಟ ಟೈಟಲ್‌ ಇರುವ ಸಿನಿಮಾದಲ್ಲಿ ಜತೆಯಾಗಿದ್ದಾರೆ. ಈ ಸಿನಿಮಾದ ಮೊದಲರ್ಧದ ಚಿತ್ರೀಕರಣ ಮೊನ್ನೆಯಷ್ಟೇ ಮುಗಿದಿದ್ದು, ಈ ಬಗ್ಗೆ ಹೇಮಂತ್‌ ಸಂತೋಷ ವ್ಯಕ್ತಪಡಿಸಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಕೆಲ ಫೋಟೊಗಳು ಮತ್ತು ಪೋಸ್ಟರ್‌ಗಳು ತಿಂಗಳುಗಳ ಹಿಂದೆ ಬಿಡುಗಡೆಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಸಿನಿಮಾದ ಪಾತ್ರಗಳಿಗಾಗಿ ನಿರ್ದೇಶಕರು ವಿಭಿನ್ನ ರೀತಿಯ ವರ್ಕ್‌ಶಾಪ್‌ ಸಹ ಮಾಡಿದ್ದರು.

‘ಅಂದುಕೊಂಡಂತೆ ಆಗಿದ್ದರೆ ನಮ್ಮ ಸಿನಿಮಾ ಇಷ್ಟು ಹೊತ್ತಿಗೆ ಮುಗಿದು ಹೋಗಬೇಕಿತ್ತು. ಕೋವಿಡ್‌ ಕಾರಣದಿಂದಾಗಿ ತುಂಬಾ ತಡವಾಗಿದೆ. ಆದರೂ ನೆಮ್ಮದಿಯಾಗಿ ಕೆಲಸ ಮಾಡಿದ ಅನುಭವ ನಮ್ಮದಾಯಿತು. ಈಗ ಶೇ. 50ರಷ್ಟು ಚಿತ್ರೀಕರಣ ಕಂಪ್ಲೀಟ್‌ ಆದಂತಾಗಿದೆ. ಸಿನಿಮಾದ ಸೆಕೆಂಡ್‌ ಹಾಫ್‌ ಅನ್ನು ಆರಂಭಿಸಬೇಕಿದೆ. ಅದಕ್ಕಾಗಿ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಹೇಳಿದರು ನಿರ್ದೇಶಕ ಹೇಮಂತ್‌ ರಾವ್‌.

ರಕ್ಷಿತ್ ಶೆಟ್ಟಿ ಲುಕ್‌ ಬದಲಾವಣೆ:
‘ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ‘ಮನು’ ಎಂಬ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ಶೇಡ್‌ಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಫಸ್ಟ್‌ ಹಾಫ್‌ ಒಂದು ಶೇಡ್‌ ಇರುತ್ತದೆ. ಅದಾದ ಮೇಲೆ ಸೆಕೆಂಡ್‌ ಹಾಫ್‌ನಲ್ಲಿ ಮೊದಲರ್ಧದ ಹತ್ತು ವರ್ಷದ ನಂತರ ನಡೆಯುವ ಕಥೆ ಇರುತ್ತದೆ. ಹಾಗಾಗಿ ರಕ್ಷಿತ್‌ ಶೆಟ್ಟಿ ಅದಕ್ಕಾಗಿ ಕೊಂಚ ದಪ್ಪ ಆಗಬೇಕಿದೆ. ಬಾಡಿ ಮತ್ತು ಲುಕ್‌ ಕೂಡ ಬದಲಾವಣೆ ಆಗಬೇಕಿರುವುದರಿಂದ ಈಗ ಅದರತ್ತ ಗಮನ ಹರಿಸಿದ್ದಾರೆ’ ಎಂದು ಮಾಹಿತಿ ನೀಡಿದರು ನಿರ್ದೇಶಕರು.

ಇದುವರೆಗೂ ನಡೆದ ಚಿತ್ರೀಕರಣದಲ್ಲಿ ನಾಯಕಿ ರುಕ್ಮಿಣಿ ವಸಂತ್‌, ಅಚ್ಯುತ್‌ ಕುಮಾರ್‌, ಪವಿತ್ರಾ ಲೋಕೇಶ್‌ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಸೆಕೆಂಡ್‌ ಹಾಫ್‌ ಚಿತ್ರೀಕರಣಕ್ಕೆ ಇನ್ನೂ ಸಮಯವಿರುವ ಕಾರಣ ಮೊದಲರ್ಧದ ಎಡಿಟಿಂಗ್‌ ಮತ್ತು ಸಂಗೀತದ ಕೆಲಸವನ್ನು ಸಂಗೀತ ನಿರ್ದೇಶಕರು ಮುಗಿಸಿಕೊಳ್ಳುತ್ತಿದ್ದಾರೆ. ಬಹುಶಃ ಚಿತ್ರೀಕರಣಕ್ಕೆ ಹೋಗುವ ಮುನ್ನ ಮೊದಲರ್ಧ ಸಂಪೂರ್ಣವಾಗಿ ರೆಡಿ ಇರುತ್ತದೆ ಎಂದಿದ್ದಾರೆ ಹೇಮಂತ್‌. ಇದುವರೆಗೂ ಶಿವಮೊಗ್ಗ, ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಮಂದಿನ ಶೆಡ್ಯೂಲ್‌ ಮಂಗಳೂರು, ಬೆಂಗಳೂರುಗಳಲ್ಲಿ ಹಮ್ಮಿಕೊಳ್ಳಲು ಹೇಮಂತ್‌ ಪ್ಲಾನ್‌ ಮಾಡಿಕೊಂಡಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಹೊರಟ ರಕ್ಷಿತ್‌ ಶೆಟ್ಟಿ! ಮತ್ತೆ ಒಂದಾಯ್ತು ‘ಗೋಧಿ ಬಣ್ಣ’ ಬಳಗ

ಕೋಟ್
‘ಸಪ್ತ ಸಾಗರದಾಚೆ ಎಲ್ಲೋ’ ಒಂದು ಭಾವನಾತ್ಮಕ ಪ್ರೇಮಕಥೆ. ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ರ ಪಾತ್ರ ಪೋಷಣೆಗಳು ವಿಭಿನ್ನವಾಗಿರಲಿವೆ. ಸಂಗೀತ ಸಹ ನನ್ನ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದೆ.
-ಹೇಮಂತ್‌ ರಾವ್‌, ನಿರ್ದೇಶಕ

ರುಕ್ಮಿಣಿ ವಸಂತ್ ಜೊತೆ ‘ಸಪ್ತ ಸಾಗರದಾಚೆ ಎಲ್ಲೋ’ ಹೊರಟ ರಕ್ಷಿತ್ ಶೆಟ್ಟಿಗೆ ನಟನಾ ವರ್ಕ್‌ಶಾಪ್!



Read more

[wpas_products keywords=”deal of the day party wear dress for women stylish indian”]