Karnataka news paper

ಗಣರಾಜ್ಯೋತ್ಸವ ದಿನ ಬಿ.ಸಿ ರೋಡ್‌ನಲ್ಲಿ ಬೃಹತ್ ಪರದೆಯಲ್ಲಿ ‘ಜೈಭೀಮ್‌’ ಸಿನಿಮಾ ಉಚಿತ ಪ್ರದರ್ಶನ


ಬಂಟ್ವಾಳ: ಭಾರತದ ಸಂವಿಧಾನ ಜಾರಿಯಾದ ದಿನವಾದ ಗಣರಾಜ್ಯೋತ್ಸವ ದಿನದಂದು ಬಂಟ್ವಾಳದ ಹೃದಯ ಭಾಗ ಬಿ.ಸಿ ರೋಡ್‌ನಲ್ಲಿರುವ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಹಾಕಿರುವ ಬೃಹತ್ ಪರದೆಯಲ್ಲಿ ಸಾರ್ವಜನಿಕರಿಗೆ ‘ಜೈ ಭೀಮ್’ ಕನ್ನಡ ಚಲನಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಖ್ಯಾತ ತಮಿಳು ಚಿತ್ರನಟ ಸೂರ್ಯ ಅಭಿನಯದ ನೈಜ ಘಟನೆ ಆಧರಿತ ಸಿನಿಮಾ ಜೈ ಭೀಮ್ ಕಳೆದ ವರ್ಷ ಓಟಿಟಿಯಲ್ಲಿ ಬಿಡುಗಡೆಗೊಂಡು ಭಾರೀ ಖ್ಯಾತಿ ಗಳಿಸಿತ್ತು. ನೈಜ ಘಟನೆಯಾಧಾರಿತ ಸಿನಿಮಾ ಆಗಿದ್ದರಿಂದ ವಿಶ್ವಮಟ್ಟದಲ್ಲಿ ಜೈ ಭೀಮ್ ಸಿನಿಮಾದ ಕುರಿತು ಚರ್ಚೆಗಳು ಆರಂಭವಾಗಿದ್ದವು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುತ್ತಿದ್ದಂತೆ ಜೈ ಭೀಮ್ ಸಿನಿಮಾವನ್ನು ಅಲ್ಲಲ್ಲಿ ಪ್ರದರ್ಶನ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದರ ಭಾಗವಾಗಿ ಬಿ.ಸಿ ರೋಡ್‌ನಲ್ಲಿಯೂ ಕೂಡ ಸಾರ್ವಜನಿಕರಿಗೆ ಉಚಿತ ಸಿನಿಮಾ ಪ್ರದರ್ಶನವನ್ನು ಆಯೋಜಿಸಲಾಗಿದೆ.
ತುಳುನಾಡ ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆ; ತುಳುವಿಗೆ ದೂರವಾದ ಸಂವಿಧಾನ ಮಾನ್ಯತೆ
ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ (ರಿ) ಮತ್ತು ಮಾನವ ಬಂಧುತ್ವ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಜ.26ರಂದು ಸಂಜೆ 6 ಗಂಟೆಗೆ ಸರಿಯಾಗಿ ‘ಜೈ ಭೀಮ್’ ಸಿನಿಮಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಸಿನಿಮಾ ಪ್ರದರ್ಶನಕ್ಕೂ ಮೊದಲು ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರು ಡಿವೈಎಸ್‌ಪಿ ಪ್ರತಾಪ್‌ ಸಿಂಗ್ ಥೋರಾಟ್ , ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಜಯಶ್ರೀ, ಬಂಟ್ವಾಳ ನಗರ ಪೊಲೀಸ್ ನಿರೀಕ್ಷಕರಾದ ವಿವೇಕಾನಂದ, ನ್ಯಾಯವಾದಿ ಉಮೇಶ್ ಕುಮಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮವು ಸರ್ಕಾರದ ಕೋವಿಡ್‌ ನಿಯಮಾವಳಿಯಂತೆ ಸಮಯಕ್ಕೆ ಸರಿಯಾಗಿ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.



Read more

[wpas_products keywords=”deal of the day sale today offer all”]