ಹೈಲೈಟ್ಸ್:
- #ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ರ ವಿಜೇತರ ಘೋಷಣೆ
- ‘ಅತ್ಯುತ್ತಮ ಸಂಗೀತ ನಿರ್ದೇಶಕ’ ಪ್ರಶಸ್ತಿಗೆ ಆಯ್ಕೆಯಾದ ಅರ್ಜುನ್ ಜನ್ಯ
- ‘ರಾಬರ್ಟ್’ ಚಿತ್ರಕ್ಕೆ ಸಂಗೀತ ನೀಡಿದ್ದ ಅರ್ಜುನ್ ಜನ್ಯ
‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ರ ‘ಅತ್ಯುತ್ತಮ ಸಂಗೀತ ನಿರ್ದೇಶಕ’ ಪ್ರಶಸ್ತಿಗೆ ‘ರಾಬರ್ಟ್’ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಯ್ಕೆಯಾಗಿದ್ದಾರೆ.
ವಿಕ ವೆಬ್ ಸಿನಿಮಾ ಅವಾರ್ಡ್ಸ್: ಹೆಚ್ಚು ವೋಟ್ಸ್ ಪಡೆಯುತ್ತಿರುವ ಸಂಗೀತ ನಿರ್ದೇಶಕ ಯಾರು ಗೊತ್ತೇ?
ಅತ್ಯುತ್ತಮ ಸಂಗೀತ ನಿರ್ದೇಶಕ – ಅರ್ಜುನ್ ಜನ್ಯ
2021ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಶಾ ಭಟ್, ವಿನೋದ್ ಪ್ರಭಾಕರ್, ರವಿಶಂಕರ್ ಅಭಿನಯದ ‘ರಾಬರ್ಟ್’ ಚಿತ್ರ ಬಿಡುಗಡೆಯಾಗಿತ್ತು. ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ‘ರಾಬರ್ಟ್’ ಚಿತ್ರದ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡಿದ್ದವು. ‘ವಿಜಯ ಕರ್ನಾಟಕ ವೆಬ್’ ವತಿಯಿಂದ ನಡೆಸಿದ ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲೂ ‘ಅತ್ಯುತ್ತಮ ಸಂಗೀತ ನಿರ್ದೇಶಕ’ ವಿಭಾಗದಲ್ಲಿ ಅರ್ಜುನ್ ಜನ್ಯ ಅವರಿಗೆ ಅತೀ ಹೆಚ್ಚು ಮತಗಳು ಲಭ್ಯವಾಗಿವೆ. ಹೀಗಾಗಿ ಅರ್ಜುನ್ ಜನ್ಯ ‘ಅತ್ಯುತ್ತಮ ಸಂಗೀತ ನಿರ್ದೇಶಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಕ ವೆಬ್ ಸಿನಿಮಾ ಅವಾರ್ಡ್ಸ್ 2021: ‘ಅತ್ಯುತ್ತಮ ಗಾಯಕಿ’ ಪ್ರಶಸ್ತಿ ಐಶ್ವರ್ಯಾ ರಂಗರಾಜನ್ ಪಾಲಿಗೆ!
ಯಾರೆಲ್ಲಾ ನಾಮನಿರ್ದೇಶನಗೊಂಡಿದ್ದರು..?
‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಅರ್ಜುನ್ ಜನ್ಯ ಜೊತೆಗೆ ಚರಣ್ ರಾಜ್ (ಚಿತ್ರ: ಸಲಗ), ರಘು ದೀಕ್ಷಿತ್ (ಚಿತ್ರ: ನಿನ್ನ ಸನಿಹಕೆ), ಮಿಥುನ್ ಮುಕುಂದನ್ (ಚಿತ್ರ: ಗರುಡ ಗಮನ ವೃಷಭ ವಾಹನ), ಚಂದನ್ ಶೆಟ್ಟಿ (ಚಿತ್ರ: ಪೊಗರು) ನಾಮನಿರ್ದೇಶನಗೊಂಡಿದ್ದರು.
ವಿಕ ವೆಬ್ ಸಿನಿಮಾ ಅವಾರ್ಡ್ಸ್ 2021: ‘ಅತ್ಯುತ್ತಮ ಗಾಯಕ’ ಪ್ರಶಸ್ತಿ ವಿಜಯ್ ಪ್ರಕಾಶ್ ಮುಡಿಗೆ!
ವೋಟಿಂಗ್‌ನಲ್ಲಿ ಅಂತಿಮವಾಗಿ ಅರ್ಜುನ್ ಜನ್ಯಗೆ 76% ವೋಟ್ಸ್ ಬಿದ್ದಿವೆ. ಚರಣ್ ರಾಜ್‌ಗೆ 12%, ರಘು ದೀಕ್ಷಿತ್‌ಗೆ 6%, ಮಿಥುನ್ ಮುಕುಂದನ್ ಮತ್ತು ಚಂದನ್ ಶೆಟ್ಟಿಗೆ ತಲಾ 3% ವೋಟ್ಸ್ ಬಿದ್ದಿವೆ. ಹೀಗಾಗಿ, ಅತಿ ಹೆಚ್ಚು ಮತಗಳನ್ನು ಪಡೆದ ಅರ್ಜುನ್ ಜನ್ಯ ಅವರಿಗೆ ‘ಅತ್ಯುತ್ತಮ ಸಂಗೀತ ನಿರ್ದೇಶಕ’ ಪ್ರಶಸ್ತಿ ಸಿಕ್ಕಿದೆ.
‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲಿ ನೀವು ನೀಡಿದ ಮತಗಳ ಆಧಾರದ ಮೇಲೆ ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ ಘೋಷಿಸಲಾಗಿದೆ.
Read more
[wpas_products keywords=”deal of the day party wear dress for women stylish indian”]