Karnataka news paper

ಜಿಯೋ ಸಂಸ್ಥೆಯಿಂದ ಮಹತ್ತರ ಹೆಜ್ಜೆ! 6G ತಂತ್ರಜ್ಞಾನಕ್ಕಾಗಿ ಹೊಸ ಒಪ್ಪಂದ!


ಜಿಯೋ

ಹೌದು, ಜಿಯೋ ಮತ್ತೊಂದು ಕ್ರಾಂತಿಕಾರಕ ಹೆಜ್ಜೆಯನ್ನು ಹಾಕಿದೆ. ದೇಶದಲ್ಲಿ 5G ನೆಟ್‌ವರ್ಕ್‌ ಪರಿಚಯಿಸುವುದಕ್ಕಾಗಿ ಮುಂಚೂಣಿಯಲ್ಲಿರುವ ಜಿಯೋ ಮುಂದಿನ ಭವಿಷ್ಯದ 6G ಅಭಿವೃದ್ದಿಗೆ ಈಗಿನಿಂದಲೇ ಕಾಲಿಟ್ಟಿದೆ. ಅದರಂತೆ ಔಲು ಯೂನಿವರ್ಸಿಟಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಇನ್ನು ಔಲು ಯೂನಿವರ್ಸಿಟಿ ವಿಶ್ವದ ಮೊದಲ ಪ್ರಮುಖ 6G ಸಂಶೋಧನಾ ಕಾರ್ಯಕ್ರಮದ ನಾಯಕರಾಗಿ ಗುರುತಿಸಕೊಂಡಿದ್ದು, 6G ತಂತ್ರಜ್ಞಾನಗಳಿಗೆ ಕಾರಣವಾಗುವ ವಾಯರ್‌ಲೆಸ್ ಸಂವಹನಗಳ ಮೇಲೆ ಕೇಂದ್ರೀಕರಿಸುತ್ತದೆ. ಹಾಗಾದ್ರೆ ಜಿಯೋ ಎಸ್ಟೋನಿಯಾ ಆರ್ಮ್‌ ಮತ್ತು ಔಲು ಯೂನಿವರ್ಸಿಟಿ ನಡುವಿನ ಒಪ್ಪಂದ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

5G

ಭಾರತದಲ್ಲಿ ಇನ್ನು ಕೂಡ 5G ಬಂದಿಲ್ಲ, ಆದರೆ ಜಿಯೋ 6G ತಂತ್ರಜ್ಞಾನದ ಅಭಿವೃದ್ದಿಗೆ ಮುಂದಿ ಹೆಜ್ಜೆ ಇಟ್ಟಿದೆ. ಇನ್ನು ಜಿಯೋ ಎಸ್ಟೋನಿಯಾ ಮತ್ತು ಸಂಪೂರ್ಣ ರಿಲಯನ್ಸ್ ಗ್ರೂಪ್‌ನೊಂದಿಗೆ ಉದ್ದೇಶಿತ ಸಂಶೋಧನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾವು ಎದುರುನೋಡುತ್ತಿದ್ದೇವೆ ಎಂದು ಔಲು ಯೂನಿವರ್ಸಿಟಿ ಹೇಳಿಕೊಂಡಿದೆ. ಭವಿಷ್ಯದ ವಾಯರ್‌ಲೆಸ್ ಎಂಡ್-ಟು-ಎಂಡ್ ಟಕ್ಮಯೂನಿಕೇಶನ್‌ ಅನ್ನು ವ್ಯಾಪಕ ಶ್ರೇಣಿಯಲ್ಲಿ ಬಳಕೆದಾರರ ಅವಶ್ಯಕತೆಗಳಿಗಾಗಿ ಸಕ್ರಿಯಗೊಳಿಸುತ್ತದೆ ಎಂದು ಔಲು ಯೂನಿವರ್ಸಿಟಿಯ 6G ಫ್ಲ್ಯಾಗ್‌ಶಿಪ್ ಪ್ರೊಫೆಸರ್ ನಿರ್ದೇಶಕ ಮಟ್ಟಿ ಲತ್ವ-ಅಹೊ ಹೇಳಿದ್ದಾರೆ.

6G

ಇನ್ನು ಔಲು ಯೂನಿವರ್ಸಿಟಿ 6G 5G ಯ ​​ಮೇಲೆ ನಿರ್ಮಿಸುತ್ತದೆ. ತನ್ನ ಅನನ್ಯ ಸಾಮರ್ಥ್ಯಗಳ ಮೂಲಕ ಡಿಜಿಟಲೀಕರಣವನ್ನು ವಿಸ್ತರಿಸುತ್ತದೆ ಎಂದು ಹೇಳಿದೆ. 5G ಮತ್ತು 6G ಸಹ ಅಸ್ತಿತ್ವದಲ್ಲಿದೆ ಆದರೆ ಇದು ವ್ಯಾಪಕ ಶ್ರೇಣಿಯ ಗ್ರಾಹಕ ಮತ್ತು ಉದ್ಯಮ ಬಳಕೆಯ ಪ್ರಕರಣಗಳನ್ನು ಒಳಗೊಂಡಿದೆ ಎಂದು ಹೇಳಿದೆ. ಇದಲ್ಲದೆ ಈ ಒಪ್ಪಂದವು ವೈಮಾನಿಕ ಮತ್ತು ಬಾಹ್ಯಾಕಾಶ ಸಂವಹನ, ಹೊಲೊಗ್ರಾಫಿಕ್ ಬೀಮ್‌ಫಾರ್ಮಿಂಗ್, ಸೈಬರ್ ಭದ್ರತೆ, ಮೈಕ್ರೋ ಎಲೆಕ್ಟ್ರಾನಿಕ್ಸ್ ಮತ್ತು ಫೋಟೊನಿಕ್ಸ್‌ನಲ್ಲಿ 3D ಸಂಪರ್ಕಿತ ಬುದ್ಧಿಮತ್ತೆಯಲ್ಲಿ ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲೂ ತನ್ನ್ನು ತೊಡಗಿಸಿಕೊಳ್ಳಲು ಸಾದ್ಯವಾಗಲಿದೆ ಎಂದು ಹೇಳಿದೆ.

ಔಲು

ಇದಲ್ಲದೆ ರಕ್ಷಣೆ, ವಾಹನ, ಬಿಳಿ ಸರಕುಗಳು, ಕೈಗಾರಿಕಾ ಯಂತ್ರೋಪಕರಣಗಳು, ಗ್ರಾಹಕ ಸರಕುಗಳು, ಸಮರ್ಥ ಉತ್ಪಾದನೆ, ನವೀನ ವೈಯಕ್ತಿಕ ಸ್ಮಾರ್ಟ್ ಸಾಧನ ಪರಿಸರಗಳು ಮತ್ತು ನಗರ ಕಂಪ್ಯೂಟಿಂಗ್ ಮತ್ತು ಸ್ವಾಯತ್ತ ಟ್ರಾಫಿಕ್ ಸೆಟ್ಟಿಂಗ್‌ಗಳಂತಹ ಅನುಭವಗಳಲ್ಲಿ 6G ಶಕ್ತಗೊಂಡ ಉತ್ಪನ್ನಗಳೊಂದಿಗೆ ಸ್ಪರ್ಧಿಸಲು ಸಹಕಾರಿ ಪ್ರಯತ್ನವು ಸಹಾಯ ಮಾಡುತ್ತದೆ ಎಂದು ಔಲು ಯೂನಿವರ್ಸಿಟಿ ಹೇಳಿದೆ. ಇನ್ನು ಜಿಯೋ ಭಾರತದಲ್ಲಿ 400 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಇದರಿಂದ ದೊಡ್ಡ ಪ್ರಮಾಣದ ಡೇಟಾವನ್ನು ರವಾನಿಸುವ ಸಾಮರ್ಥ್ಯವನ್ನು ನಿರ್ಮಿಸುವುದು ನಿರ್ಣಾಯಕವಾಗುತ್ತಿದೆ ಎಂದು ಜಿಯೋ ಎಸ್ಟೋನಿಯಾ ಸಿಇಒ ತಾವಿ ಕೊಟ್ಕಾ ಹೇಳಿದ್ದಾರೆ.

ಜಿಯೋ

ಔಲು ಯೂನಿವರ್ಸಿಟಿ ಜೊತೆಗಿನ 6G ಸಂಶೋಧನೆ ಮತ್ತು ಸಾಮರ್ಥ್ಯಗಳಲ್ಲಿ ಆರಂಭಿಕ ಹೂಡಿಕೆಗಳು 5G ಯಲ್ಲಿ ಜಿಯೋ ಲ್ಯಾಬ್‌ನ ಸಾಮರ್ಥ್ಯಗಳಿಗೆ ಪೂರಕವಾಗಿರುತ್ತವೆ. ಇವುಗಳು 6G ಗೆ ಜೀವ ತುಂಬಬಹುದು ಎಂದು ಜಿಯೋ ಪ್ಲಾಟ್‌ಫಾರ್ಮ್‌ಗಳ ಸಿನೀಯರ್‌ ವೈಸ್‌ ಪ್ರೆಸಿಡೆಂಟ್‌ ಆಯುಷ್ ಭಟ್ನಾಗರ್ ಹೇಳಿದ್ದಾರೆ. ಒಟ್ಟಿನಲ್ಲಿ ಜಿಯೋ ಸಂಸ್ಥೆ ಮಾಡಿಕೊಂಡಿರುವ ಒಪ್ಪೊಂದ ಭವಿಷ್ಯದಲ್ಲಿ ಭಾರತದಲ್ಲಿ 6G ತಂತ್ರಜ್ಞಾನ ವೆಳವಣಿಗೆಗೆ ಪೂರಕವಾಗಲಿದೆ.



Read more…

[wpas_products keywords=”smartphones under 15000 6gb ram”]