Karnataka news paper

ನಾಪತ್ತೆಯಾಗಿರುವ ಭಾರತೀಯ ಯುವಕನ ಪತ್ತೆಗೆ ಪಿಎಲ್ಎ ನೆರವು ಕೋರಿದ ಭಾರತೀಯ ಸೇನೆ


The New Indian Express

ನವದೆಹಲಿ: ದಾರಿ ತಪ್ಪಿ ಚೀನಾದ ಪ್ರದೇಶದಲ್ಲಿ ಕಣ್ಮರೆಯಾಗಿದ್ದ ಯುವಕನನ್ನು ಪತ್ತೆ ಮಾಡುವುದಕ್ಕಾಗಿ ಭಾರತೀಯ ಸೇನೆ ಪಿಎಲ್ಎ ನೆರವನ್ನು ಕೋರಿದೆ.

ಮಿರಾಮ್ ತರೋನ್ ಎಂಬಾತ ನಾಪತ್ತೆಯಾಗಿರುವ ಯುವಕನಾಗಿದ್ದು, ಚೀನಾದ ಪ್ರದೇಶಕ್ಕೆ ತೆರಳಿ ಕಣ್ಮರೆಯಾಗಿದ್ದಾನೆ. ಆತನನ್ನು ಪತ್ತೆ ಮಾಡಿ ಶಿಷ್ಟಾಚಾರದ ಪ್ರಕಾರ ವಾಪಸ್ ಭಾರತದ ವಶಕ್ಕೆ ಒಪ್ಪಿಸಬೇಕಿದೆ.

ಅರುಣಾಚಲ ಪ್ರದೇಶ ಸಂಸದ ತಪಿರ್ ಗೌ ಈ ಬಗ್ಗೆ ಮಾತನಾಡಿದ್ದು, ಪಿಎಲ್ಎ ಮಂಗಳವಾರ 17 ವರ್ಷದ ಬಾಲಕನನ್ನು ಭಾರತೀಯ ಪ್ರದೇಶದಿಂದ ಅಪಹರಿಸಿದೆ ಎಂದು ಆರೋಪ ಮಾಡಿದ್ದಾರೆ.

ರಕ್ಷಣಾ ಇಲಾಖೆಯಲ್ಲಿನ ಮೂಲಗಳು ಈ ಬಗ್ಗೆ ಮಾಹಿತಿ ಪಡೆದಿದೆ. ತಕ್ಷಣವೇ ಪಿಎಲ್ಎಯನ್ನು ಸಂಪರ್ಕಿಸಿ, ಗಿಡಮೂಲಿಕೆಗಳು ಹಾಗೂ ಇನ್ನಿತರ ವಸ್ತುಗಳನ್ನು ಪತ್ತೆ ಮಾಡುತ್ತಾ ಯುವಕನೋರ್ವ ದಾರಿ ತಪ್ಪಿ ಚೀನಾಪ್ರದೇಶದಿಂದ ಕಣ್ಮರೆಯಾಗಿರುವ ಬಗ್ಗೆ ತಿಳಿಸಿದೆ.

ಇದನ್ನೂ ಓದಿ: ಚೀನಾ ಸೇನೆಯಿಂದ ಅರುಣಾಚಲ ಪ್ರದೇಶದ ಯುವಕನ ಅಪಹರಣ: ಸಂಸದ ಗಾವೋ ಗಂಭೀರ ಆರೋಪ

ಸ್ಯಾಂಗ್ಪೋ ನದಿ (ಬ್ರಹ್ಮಪುತ್ರ) ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಸೇರುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಸಂಸದರು ಹೇಳಿದ್ದಾರೆ.

ಈ ಘಟನೆ ಬಗ್ಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತೀಶ್ ಪರಮ್ನಾಯ್ಕ್ ಅವರಿಗೂ ಸಂಸದರು ಮಾಹಿತಿ ನೀಡಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

2020 ರಲ್ಲಿ ಪಿಎಲ್ಎ ಐವರು ಯುವಕರನ್ನು ಅರುಣಾಚಲ ಪ್ರದೇಶದಿಂದ ಅಪಹರಿಸಿ ವಾರದ ಬಳಿಕ ಬಿಟ್ಟಿತ್ತು.

2020 ರ ಏಪ್ರಿಲ್ ನಲ್ಲಿ ಈಶಾನ್ಯ ಲಡಾಖ್ ನಲ್ಲಿ ಪ್ರಾರಂಭವಾದ ಪಿಎಲ್ಎ-ಭಾರತೀಯ ಸೇನೆಯ ನಡುವಿನ ಘರ್ಷಣೆ ಇನ್ನೂ ಸಣ್ಣ ಪ್ರಮಾಣದಲ್ಲಿ ಮುಂದುವರೆದಿದ್ದು, ಈ ನಡುವೆಯೇ ಯುವಕನ ಕಣ್ಮರೆ ಪ್ರಕರಣ ವರದಿಯಾಗಿದೆ.



Read more

[wpas_products keywords=”deal of the day”]