Karnataka news paper

ರಾಯಚೂರಿನಲ್ಲಿ ತಾಯಿ, ಮಗಳಿಂದ ಕುಡುಕ ಮಗನ ಕಗ್ಗೊಲೆ!


ಹೈಲೈಟ್ಸ್‌:

  • ತಾಯಿ, ಮಗಳಿಂದ ಕುಡುಕ ಮಗನ ಕಗ್ಗೊಲೆ
  • ಕುಡುಕ ಮಗನ ಉಪಟಳ ಸಹಿಸಲಾಗದೆ ಕುಕೃತ್ಯ
  • ರಾಯಚೂರಿನ ಸಿರವಾರದಲ್ಲಿ ನಡೆದ ಅಮಾನವೀಯ ಕೃತ್ಯ

ಸಿರವಾರ : ಸಿರವಾರದಲ್ಲಿ ಕುಡುಕ ಮಗನ ಉಪಟಳ ಸಹಿಸಲಾಗದ ಹೆತ್ತ ತಾಯಿ, ಮಗಳು,ಅಳಿಯ ಸೇರಿ ವೈರ್‌ನಿಂದ ಕತ್ತು ಬಿಗಿದು ಬುಧವಾರ ತಡರಾತ್ರಿ ಕೊಲೆ ಮಾಡಿದ್ದಾರೆ. ಪಟ್ಟಣದ 3ನೇ ವಾರ್ಡಿನ ರಾಯಚೂರು ಮುಖ್ಯ ರಸ್ತೆ ಬದಿ ನಿವಾಸಿ ಅಮರೇಶ ಜೇಗರಕಲ್‌ (45) ಕೊಲೆಯಾದ ವ್ಯಕ್ತಿ.

ಅಮರೇಶ ನಿತ್ಯವೂ ಕುಡಿದು ಬಂದು ಮನೆಯಲ್ಲಿತಾಯಿ, ಅಕ್ಕನೊಂದಿಗೆ ಗಲಾಟೆ ಮಾಡುತ್ತಿದ್ದುದನ್ನು ಸಹಿಸಲಾಗದೆ ತಾಯಿ, ಅಕ್ಕ,ಅಳಿಯ ಮೂವರು ಶಾಮೀಲಾಗಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಪಿಐ ಮಹಾದೇವ ಪಂಚಮುಖಿ, ಪಿಎಸ್‌ಐ ಗೀತಾಂಜಲಿ ಶಿಂಧೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಸಿರವಾರ ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತ ಸಂಬಂಧಿಕರಿಂದಲೆ ಯುವಕನ ಕೊಲೆ

ಶಿಡ್ಲಘಟ್ಟ : ತಾಲೂಕಿನ ಶೀಗೇಹಳ್ಳಿಯಲ್ಲಿಸಂಬಂಧಿ ಸ್ನೇಹಿತರೆ ಯುವಕನನ್ನು ಕತ್ತು ಕೊಯ್ದು ಮಂಗಳವಾರ ರಾತ್ರಿ ಕೊಲೆ ಮಾಡಿದ್ದಾರೆ. ಶೀಗೇಹಳ್ಳಿಯ ಮೋಹನ್‌(30)ಕೊಲೆಯಾದ ಯುವಕ. ಈ ಹಿಂದೆ ನಡೆದಿದ್ದ ಕಬಡ್ಡಿ ಆಟದಲ್ಲಿ ಪವನ್‌ ಹಾಗೂ ಪ್ರಭಾಕರ್‌ ನಡುವೆ ಗಲಾಟೆ ನಡೆದಿದ್ದು ಇದು ಕೊಲೆಗೆ ಕಾರಣ ಎನ್ನಲಾಗುತ್ತಿದೆ.

ಸಂಕೇಶ್ವರ: ಮಹಿಳೆ ಕೊಲೆ, ಪುರಸಭೆ ಸದಸ್ಯ ಆರೋಪಿ, ಬಂಧನ

ಮೋಹನ್‌ ಹಾಗೂ ಆತನ ಸ್ನೇಹಿತ ಸಂಬಂಧಿಯೂ ಆದ ಪವನ್‌ ಮಂಗಳವಾರ ರಾತ್ರಿ ಶೀಗೇಹಳ್ಳಿ ಹಾಗೂ ಗಜ್ಜಿಗಾನಹಳ್ಳಿ ನಡುವಿನ ತೋಟವೊಂದರಲ್ಲಿ ಮದ್ಯಪಾನ ಮಾಡುತ್ತಿದ್ದು ಅಲ್ಲಿಗೆ ಶೀಗೆಹಳ್ಳಿಯ ಸ್ನೇಹಿತರೂ ಸಂಬಂಧಿಗಳೂ ಆದ ನಂದನ್‌, ಸುಮನ್‌ ಆಗಮಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪವನ್‌ ಮತ್ತು ಮೋಹನ್‌ ಇಬ್ಬರೂ ತೋಟವೊಂದರಲ್ಲಿ ಕುಡಿಯುತ್ತಿರುವ ವಿಚಾರವನ್ನು ಪ್ರಭಾಕರ್‌ ಕರೆ ಮಾಡಿ ನಂದನ್‌ ಹಾಗೂ ಸುಮನ್‌ಗೆ ಮಾಹಿತಿ ನೀಡಿದ್ದಾನೆ.

ಕುಡಿದ ಮತ್ತಿನಲ್ಲಿದ್ದ ಮೋಹನ್‌ನನ್ನು ನಂದನ್‌ ಹಾಗೂ ಸುಮನ್‌ ಕೊಲೆ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆ ಯಲ್ಲಿದೂರು ದಾಖಲಾಗಿದೆ. ಕಬ್ಬಡ್ಡಿ ಆಟದಲ್ಲಿಕಿತ್ತಾಡಿಕೊಂಡಿದ್ದ ಪ್ರಭಾಕರ್‌ ಹಾಗೂ ಮೋಹನ್‌ ಇಬ್ಬರೂ ಪರಸ್ಪರ ಕೊಲೆ ಮಾಡುವುದಾಗಿ ಕೆಲ ದಿನಗಳಿಂದಲೂ ಬಹಿರಂಗವಾಗಿಯೆ ಸವಾಲು ಹಾಕಿಕೊಳ್ಳುತ್ತಿದ್ದರಂತೆ.

ಅದರಂತೆ ಸಮಯಕ್ಕಾಗಿ ಕಾದಿದ್ದ ಪ್ರಭಾಕರ್‌, ಮೋಹನ್‌ ಹಾಗೂ ಪವನ್‌ ಕುಡಿಯುತ್ತಿದ್ದ ಜಾಗದ ಮಾಹಿತಿ ನೀಡಿ ನಂದನ್‌ ಹಾಗೂ ಸುಮನ್‌ನನ್ನು ಅಲ್ಲಿಗೆ ಕಳುಹಿಸಿ ಮೋಹನ್‌ನ ಕೊಲೆ ಮಾಡಿಸಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೊಲೆಯಾದ ಮೋಹನ್‌ನ ಜತೆಯಲ್ಲಿದ್ದ ಪವನ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು ವಿಚಾರಣೆ ನಂತರವಷ್ಟೆ ಸತ್ಯಾಂಶ ಬಯಲಾಗಬೇಕಿದೆ.



Read more

[wpas_products keywords=”deal of the day sale today offer all”]